ETV Bharat / sports

Wimbledon : ರಿಚರ್ಡ್​ ಗ್ಯಾಸ್ಕೆಟ್ ಮಣಿಸಿ 3ನೇ ಸುತ್ತಿಗೆ ಫೆಡರರ್​​ ದಾಪುಗಾಲು

ಸದ್ಯ ರೋಜರ್ ಫೆಡರರ್ ತಮ್ಮ 9ನೇ ವಿಂಬಲ್ಡನ್ ಪ್ರಶಸ್ತಿ ಗೆಲ್ಲುವ ನಿರೀಕ್ಷೆಯಲ್ಲಿದ್ದು, ಈ ಪ್ರಶಸ್ತಿ ಗೆದ್ದರೆ ಒಟ್ಟು 21 ಪ್ರಮುಖ ಪ್ರಶಸ್ತಿಗಳನ್ನ ಗೆದ್ದಂತಾಗುತ್ತದೆ. ಇದು ರಫೆಲ್ ನಡಾಲ್ ಅವರ ದಾಖಲೆ ಮುರಿದಂತಾಗುತ್ತದೆ..

ರೋಜರ್ ಫೆಡರರ್
ರೋಜರ್ ಫೆಡರರ್
author img

By

Published : Jul 2, 2021, 1:19 PM IST

ಲಂಡನ್ ​: ವಿಂಬಲ್ಡನ್ ಟೆನ್ನಿಸ್ ಟೂರ್ನಿಯ 2ನೇ ಸುತ್ತಿನ ರೋಚಕ ಪಂದ್ಯದಲ್ಲಿ ವಿಶ್ವದ 8ನೇ ಶ್ರೇಯಾಂಕಿತ ಆಟಗಾರ ರೋಜರ್ ಫೆಡರರ್ ಜಯಗಳಿಸಿ 3ನೇ ಸುತ್ತಿಗೆ ಅರ್ಹತೆ ಪಡೆದಿದ್ದಾರೆ. ಎದುರಾಳಿ ರಿಚರ್ಡ್​ ಗ್ಯಾಸ್ಕೆಟ್​ ವಿರುದ್ಧದ ಪಂದ್ಯದಲ್ಲಿ 7-6, 6-1,6-4ರ ನೇರ ಸೆಟ್​ಗಳ ಮೂಲಕ ಜಯ ದಾಖಲಿಸಿದ್ದಾರೆ. ಈ ಮೂಲಕ 46 ವರ್ಷಗಳ ವಿಂಬಲ್ಡನ್ ಇತಿಹಾಸದಲ್ಲಿ 3ನೇ ಸುತ್ತಿಗೆ ಅರ್ಹತೆ ಪಡೆದ ಅತ್ಯಂತ ಹಿರಿಯ ಆಟಗಾರ ಎಂಬ ಕೀರ್ತಿಗೆ ಭಾಜನರಾಗಿದ್ದಾರೆ.

ಈ ಕುರಿತು ಸಂತಸ ಹಂಚಿಕೊಂಡಿರುವ ಅವರು, ನನ್ನ ಪ್ರದರ್ಶನ ನನಗೆ ನಿಜಕ್ಕೂ ಸಂತೋಷ ತರಿಸಿದೆ ಎಂದಿದ್ದಾರೆ. ಮುಂದಿನ ತಿಂಗಳು ಅವರು 40ನೇ ವರ್ಷದ ಹುಟ್ಟುಹಬ್ಬ ಆಚರಿಸಿಕೊಳ್ಳಲಿದ್ದಾರೆ. ಇದಕ್ಕೂ ಮೊದಲು ಕೇಸ್​ ರೋಸ್​ವಾಲ್​​ ತಮ್ಮ 40ನೇ ವರ್ಷದಲ್ಲಿ ವಿಂಬಲ್ಡನ್ ಟೂರ್ನಿಯ 4ನೇ ಸುತ್ತಿಗೆ ಅರ್ಹತೆ ಪಡೆದಿದ್ದರು.

ಸದ್ಯ ರೋಜರ್ ಫೆಡರರ್ ತಮ್ಮ 9ನೇ ವಿಂಬಲ್ಡನ್ ಪ್ರಶಸ್ತಿ ಗೆಲ್ಲುವ ನಿರೀಕ್ಷೆಯಲ್ಲಿದ್ದು, ಈ ಪ್ರಶಸ್ತಿ ಗೆದ್ದರೆ ಒಟ್ಟು 21 ಪ್ರಮುಖ ಪ್ರಶಸ್ತಿಗಳನ್ನ ಗೆದ್ದಂತಾಗುತ್ತದೆ. ಇದು ರಫೆಲ್ ನಡಾಲ್ ಅವರ ದಾಖಲೆ ಮುರಿದಂತಾಗುತ್ತದೆ.

ಓದಿ: ವಿಂಬಲ್ಡನ್‌ ಟೂರ್ನಿಯಿಂದ ಹಿಂದೆ ಸರಿದ ಇಂಗ್ಲೆಂಡ್​​ನ ಜೋಹಾನ್ನಾ ಕೊಂಟಾ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.