ETV Bharat / sports

ಆಸ್ಟ್ರೇಲಿಯನ್ ಓಪನ್ ಕುರಿತ ಪತ್ರ 'ಉತ್ತಮ ಉದ್ದೇಶ' ಹೊಂದಿದೆ: ಜೊಕೊವಿಕ್

ಮೆಲ್ಬೋರ್ನ್‌ನಲ್ಲಿನ ನನ್ನ ಸಹ ಸ್ಪರ್ಧಿಗಳಿಗೆ ನನ್ನ ಒಳ್ಳೆಯ ಉದ್ದೇಶಗಳನ್ನು ತಿಳಿಸಿದ್ದೇನೆ. ಆದರೆ ಸ್ವಾರ್ಥಿ, ಕಷ್ಟ ಮತ್ತು ಕೃತಜ್ಞತೆಯಿಲ್ಲವೆಂದು ತಪ್ಪಾಗಿ ಗ್ರಹಿಸಲಾಗಿದೆ ಎಂದು ಈ ಹಿಂದೆ ನೊವಾಕ್ ಜೊಕೊವಿಕ್ ಅವರ ವಿರುದ್ಧ ಮಾಡಿದ ಆರೋಪಗಳಿಗೆ ಅವರು ಸ್ಪಷ್ಟನೆ ನೀಡಿದ್ದಾರೆ.

Djokovic
ನೊವಾಕ್ ಜೊಕೊವಿಕ್
author img

By

Published : Jan 21, 2021, 10:20 AM IST

ಮೆಲ್ಬೋರ್ನ್: ಆಸ್ಟ್ರೇಲಿಯಾ ಓಪನ್ ಮುಖ್ಯಸ್ಥ ಕ್ರೇಗ್ ಟೈಲಿಗೆ ಬರೆದ ಪತ್ರದಿಂದಾಗಿ ಟೆನ್ನಿಸ್ ತಾರೆ ವಿಶ್ವದ ನಂಬರ್ ಒನ್ ಆಟಗಾರ ನೊವಾಕ್ ಜೊಕೊವಿಕ್ ಅವರು ಎದುರಿಸಿದ ಟೀಕೆಗಳನ್ನು ಹಿಮ್ಮೆಟ್ಟಿಸಿದ್ದಾರೆ.

ವರ್ಷದ ಮೊದಲ ಗ್ರ್ಯಾಂಡ್ ಸ್ಲ್ಯಾಮ್‌ಗಾಗಿ ಆಡಲು ತೆರಳಿದ ಇತರ ಆಟಗಾರರು ಮೆಲ್ಬೋರ್ನ್‌ಗೆ ತೆರಳಿದ್ದರು. ಆದರೆ ಅವರಿಗೆ ಕೊರೊನಾ ವಕ್ಕರಿಸಿದ ಪರಿಣಾಮ 72 ಆಟಗಾರರು ಕ್ವಾರಂಟೈನ್​ ಆಗಿದ್ದಾರೆ. ಈ ಆಟಗಾರರು ಗಂಭೀರ ಪರಿಸ್ಥಿತಿಯಲ್ಲಿರುವ ಕಾರಣ ಅವರಿಗೆ ತರಬೇತಿ ನೀಡಲು ಅಸಾಧ್ಯವಾಗಿದೆ.

ಈ ವೇಳೆ ಜೊಕೊವಿಕ್​ ಕ್ವಾರಂಟೈನ್​​ ಅವಧಿಯನ್ನು ಕಡಿಮೆಗೊಳಿಸುವಂತೆ ಮನವಿ ಮಾಡಿದ್ದರು. ಅಷ್ಟೇ ಅಲ್ಲದೆ, ಖಾಸಗಿ ಟೆನ್ನಿಸ್​ ಕೋರ್ಟ್​ಗಳಲ್ಲಿ ಮುಂಜಾಗ್ರತಾ ಕ್ರಮಗಳೊಂದಿಗೆ ತರಬೇತಿ ನೀಡಬಹುದಾ ಎಂದು ಕೇಳಿಕೊಂಡಿದ್ರು. ಆದರೆ ಈ ಹೇಳಿಕೆಯನ್ನು ಕ್ರೇಗ್ ಟೈಲಿ ತಪ್ಪಾಗಿ ಗ್ರಹಿಸಿದ್ದರು.

ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಸ್ಪಷ್ಟನೆ ನೀಡಿದ ಜೊಕೊವಿಕ್​ "ಮೆಲ್ಬೋರ್ನ್‌ನಲ್ಲಿನ ನನ್ನ ಸಹ ಸ್ಪರ್ಧಿಗಳಿಗೆ ನನ್ನ ಒಳ್ಳೆಯ ಉದ್ದೇಶಗಳನ್ನು ತಿಳಿಸಿದ್ದೇನೆ. ಆದರೆ ಸ್ವಾರ್ಥಿ, ಕಷ್ಟ ಮತ್ತು ಕೃತಜ್ಞತೆಯಿಲ್ಲವೆಂದು ತಪ್ಪಾಗಿ ಗ್ರಹಿಸಲಾಗಿದೆ" ಎಂದು ತಿಳಿಸಿದ್ದಾರೆ.

"ಆದರೆ ಇದು ಸತ್ಯಕ್ಕೆ ದೂರವಾದ ಮಾತು. ಕೆಲವೊಮ್ಮೆ ನಾನು ವಿಷಯಗಳ ಪರಿಣಾಮವನ್ನು ನೋಡಿದಾಗ, ಇತರ ಜನರ ಹೋರಾಟಗಳಿಗೆ ಗಮನ ಕೊಡುವ ಬದಲು, ನನ್ನ ಪ್ರಯೋಜನಗಳನ್ನು ಆನಂದಿಸಬೇಕೇ ಎಂದು ನನ್ನನ್ನು ಕೇಳಿಕೊಳ್ಳುತ್ತೇನೆ" ಎಂದರು.

ಇದಲ್ಲದೆ, ಆಸ್ಟ್ರೇಲಿಯಾದ ಮಾಜಿ ಡೇವಿಸ್ ಕಪ್ ಆಟಗಾರ ಸ್ಯಾಮ್ ಗ್ರೋತ್ ಜೊಕೊವಿಕ್ ಅವರ ಪತ್ರವನ್ನು "ಸ್ವಾರ್ಥಿ ರಾಜಕೀಯ ನಡೆ" ಎಂದು ಆರೋಪಿಸಿದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.