ಮೆಲ್ಬೋರ್ನ್: ವಿಶ್ವದ ನಂಬರ್ 1 ಆಟಗಾರ್ತಿಯಾಗಿರುವ ಆಸ್ಟ್ರೇಲಿಯಾದ ಆಶ್ಲೇ ಬಾರ್ಟಿ ಆಸ್ಟ್ರೇಲಿಯನ್ ಓಪನ್ನ ಕ್ವಾರ್ಟರ್ ಫೈನಲ್ನಲ್ಲಿ ಜೆಕ್ ಗಣರಾಜ್ಯದ ಕರೋಲಿನಾ ಮುಚೋವಾ ವಿರುದ್ಧ ಸೋಲು ಕಾಣುವ ಮೂಲಕ ಟೂರ್ನಿಯಿಂದ ಹೊರಬಿದ್ದಿದ್ದಾರೆ.
ಬುಧವಾರ ರಾಡ್ ಲಾವರ್ ಅರೆನಾದಲ್ಲಿ ನಡೆದ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ 25ನೇ ಶ್ರೇಯಾಂಕದ ಮುಚೋವಾ 1-6, 6-3 , 6-2 ರಲ್ಲಿ ವಿಶ್ವದ ನಂ.1 ಆಟಗಾರ್ತಿಗೆ ಸೋಲುಣಿಸಿ ವೃತ್ತಿ ಜೀವನದಲ್ಲಿ ಮೊದಲ ಬಾರಿಗೆ ಗ್ರ್ಯಾಂಡ್ ಸ್ಲಾಮ್ ಸೆಮಿಫೈನಲ್ ಪ್ರವೇಶಿಸಿದರು.
ಮುಚೋವ್ ಉತ್ತಮವಾದ ಆರಂಭ ಪಡೆದಿರಲಿಲ್ಲ, ಅವರು ಮೊದಲ ಸುತ್ತಿನಲ್ಲೇ 1-6ರಲ್ಲಿ ಸೋಲು ಕಂಡರು, ಆದರೆ, ಆಶ್ಚರ್ಯಕರ ರೀತಿಯಲ್ಲಿ ತಿರುಗಿಬಿದ್ದ ಜೆಕ್ ಆಟಗಾರ್ತಿ 2 ಮತ್ತು 3ನೇ ಸುತ್ತಿನಲ್ಲಿ 6-3, 6-2ರಲ್ಲಿ ಗೆಲುವು ಸಾಧಿಸಿ ಸೆಮಿಫೈನಲ್ ಪ್ರವೇಶಿಸಿದರು. ಮುಚೋವಾ ಸೆಮಿಫೈನಲ್ ಕದನದಲ್ಲಿ ಅಮೆರಿಕದ ಜನಿಫರ್ ಬ್ರಾಡಿ ಅವರನ್ನು ಎದುರಿಸಲಿದ್ದಾರೆ.
ಇದಕ್ಕೂ ಮೊದಲು ಅಮೆರಿಕದ ಸೆರೆನಾ ವಿಲಿಯಮ್ಸ್ 2ನೇ ಶ್ರೇಯಾಂಕದ ಸಿಮೋನಾ ವಿರುದ್ಧ ಗೆಲುವು ಸಾಧಿಸಿ ಸೆಮಿಫೈನಲ್ ಪ್ರವೇಶಿಸಿದ್ದರು. ಅವರು ಜಪಾನ್ನ ನವೋಮಿ ಒಸಾಕ ವಿರುದ್ಧ ಗುರುವಾರ ನಡೆಯುವ ಸೆಮಿಫೈನಲ್ ಪಂದ್ಯದಲ್ಲಿ ಸೆಣಸಾಡಲಿದ್ದಾರೆ.
ಇದನ್ನು ಓದಿ: ಟೆಸ್ಟ್ ಫಾರ್ಮೆಟ್ ಕ್ರಿಕೆಟ್ಗೆ ನಿವೃತ್ತಿ ಘೋಷಿಸಿದ ಡು ಪ್ಲೆಸಿಸ್