ನ್ಯೂಯಾರ್ಕ್: ಭಾರತದ ರೋಹನ್ ಬೋಪಣ್ಣ ಹಾಗೂ ಡೆನಿಸ್ ಶಪೋವಲೊವ್ ಜೋಡಿ ಯುಎಸ್ ಓಪನ್ನಲ್ಲಿ 2ನೇ ಸುತ್ತು ಪ್ರವೇಶಿಸಿದ್ದಾರೆ.
ಪುರುಷರ ಡಬಲ್ಸ್ನಲ್ಲಿ ಮೊದಲ ಸುತ್ತಿನಲ್ಲಿ ಕೆನಡಾದ ಶಪೋವಲೊವ್ ಜೊತೆಗೂಡಿ ಆಡಿದ ಬೋಪಣ್ಣ ಅಮೆರಿಕದ ಜೋಡಿ ಅರ್ನೆಸ್ಟೊ ಎಸ್ಕೊಬೆಡೊ ಮತ್ತು ನೋವಾ ರುಬಿನ್ ಜೋಡಿಯನ್ನು 6-2, 6-4 ಸೆಟ್‌ಗಳಿಂದ ಮಣಿಸಿದರು.
ಒಂದು ಗಂಟೆ 22 ನಿಮಿಷಗಳ ಕಾಲ ನಡೆದ ಈ ಪಂದ್ಯದಲ್ಲೀ ಇಂಡೊ-ಕೆನಡಿಯನ್ ಜೋಡಿ ಸಂಪೂರ್ಣ ಪ್ರಾಬಲ್ಯ ಸಾಧಿಸಿ 2ನೇ ಸುತ್ತು ಪ್ರವೇಶಿಸಿದೆ. ಈ ಜೋಡಿ ಮುಂದಿನ ಸುತ್ತಿನ ಪಂದ್ಯದಲ್ಲಿ ಆರನೇ ಶ್ರೇಯಾಂಕದ ಕೆವಿನ್ ಕ್ರಾವಿಯೆಟ್ಜ್ ಮತ್ತು ಆಂಡ್ರಿಯಾಸ್ ಮೈಸ್ ಅವರನ್ನು ಎದುರಿಸಲಿದೆ.
ಗುರುವಾರ ಸಂಜೆ ನಡೆದ ಸಿಂಗಲ್ಸ್ನ ಎರಡನೇ ಸುತ್ತಿನ ಪಂದ್ಯದಲ್ಲಿ ಸುಮಿತ್ ನಗಲ್, ನಂತರ ದಿವಿಜ್ ಶರಣ್ ಕೂಡ ಹೊರಬಿದ್ದಾರೆ. ಇದೀಗ ಎರಡನೇ ಸುತ್ತು ಪ್ರವೇಶಿಸಿರುವ ಬೋಪಣ್ಣ ಮಾತ್ರ ಟೂರ್ನಿಯಲ್ಲಿ ಉಳಿದಿರುವ ಏಕೈಕ ಭಾರತೀಯರಾಗಿದ್ದಾರೆ.