ನ್ಯೂಯಾರ್ಕ್: ಅರ್ಹತಾ ಸುತ್ತಿನಲ್ಲಿ ಬ್ರೆಜಿಲ್ ಆಟಗಾರರನನ್ನು ಮಣಿಸಿ ಅಮೆರಿಕ ಓಪನ್ ಮೂಲಕ ಗ್ರ್ಯಾಂಡ್ಸ್ಲಾಮ್ಗೆ ಎಂಟ್ರಿಕೊಡುತ್ತಿರುವ ಸುಮಿತ್ ನಾಗಲ್ಗೆ ಮೊದಲ ಸುತ್ತಿನಲ್ಲಿ ಟೆನ್ನಿಸ್ ಲೋಕದ ದಂತಕತೆಯಾಗಿರುವ ರೋಜರ್ ಫೆಡರರ್ ಅವರನ್ನು ಎದುರಿಸಬೇಕಾಗಿದೆ.
ಭಾರತದ ಪರ ಅಮೆರಿಕ ಓಪನ್ನ ಸಿಂಗಲ್ಸ್ನಲ್ಲಿ ಇದೇ ಮೊದಲ ಬಾರಿಗೆ ಇಬ್ಬರು ಗ್ರ್ಯಾಂಡ್ಸ್ಲಾಮ್ಗೆ ಅರ್ಹತೆ ಗಿಟ್ಟಿಸಿಜೊಂಡಿದ್ದಾರೆ. ಆದರೆ ಯುವ ಆಟಗಾರರಾದ ಸುಮಿತ್ ಫೆಡರರ್ರನ್ನು, ಮತ್ತೋರ್ವ ಆಟಗಾರ ಗುಣೇಶ್ವರನ್ 5ನೇ ಶ್ರೇಯಾಂಕದ ರಷ್ಯಾದ ಮೆಡ್ವದೇವ್ರನ್ನು ಎದುರಿಸಬೇಕಾಗಿದೆ.
ಭಾರತದ ಮಟ್ಟಿಗೆ ಗ್ರ್ಯಾಂಡ್ಸ್ಲಾಮ್ಗೆ ಅರ್ಹತೆ ಗಿಟ್ಟಿಸಿಕೊಳ್ಳುವುದೇ ಬಹುದೊಡ್ಡ ವಿಚಾರ. ಆದರೆ ಮೊದಲ ಪಂದ್ಯದಲ್ಲಿ ಟಾಪ್ ಪ್ಲೇಯರ್ಗಳ ಜೊತೆ ಕಾದಾಡುತ್ತಿರುವುದು ಕುತೂಹಲದ ವಿಚಾರ. ಈ ಇಬ್ಬರು ಪ್ರತಿಷ್ಠಿತ ಗ್ರ್ಯಾಂಡ್ಸ್ಲಾಮ್ಗೆ 1998ರ ಬಳಿಕ ಅವಕಾಶ ಗಿಟ್ಟಿಸಿಕೊಂಡಿದ್ದಾರೆ. 1998ರ ವಿಂಬಲ್ಡನ್ ಟೂರ್ನಿಯ ಪ್ರಧಾನ ಸುತ್ತಿನಲ್ಲಿ ಲಿಯಾಂಡರ್ ಪೇಸ್ ಮತ್ತು ಮಹೇಶ್ ಭೂಪತಿ ಆಡಿದ್ದರು.
ಸುಮಿತ್ ನಾಗಲ್ ವಿಶ್ವ ರ್‍ಯಾಂಕಿಂಗ್‌ನಲ್ಲಿ 190ನೇ ಸ್ಥಾನದಲ್ಲಿದ್ದರೆ, ಫೆಡರೆರ್ ಮೂರನೇ ಸ್ಥಾನದಲ್ಲಿದ್ದಾರೆ. ಈ ಪಂದ್ಯದಲ್ಲಿ ಭಾರತದ ಆಟಗಾರ ಗೆದ್ದರೆ ಇತಿಹಾಸ, ಸೋತರೆ ಫೆಡರರ್ ಅಂತಹ ಮಹಾನ್ ದಿಗ್ಗಜನ ಜೊತೆ ಆಡಿದ ಶ್ರೇಯಕ್ಕೆ 22 ವರ್ಷದ ನಾಗಲ್ ಪಾತ್ರರಾಗಲಿದ್ದಾರೆ.