ಮೆಲ್ಬೋರ್ನ್: ಸೆಮಿಫೈನಲ್ನಲ್ಲಿ ನಂಬರ್ ಒನ್ ಆಟಗಾರ್ತಿಗೆ ಸೋಲುಣಿಸಿದ್ದ ಅಮೆರಿಕಾದ ಸೋಫಿಯಾ ಕೆನಿನ್ ಚೊಚ್ಚಲ ಆಸ್ಟ್ರೇಲಿಯಾ ಓಪನ್ ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ.
ಮೊದಲ ಸುತ್ತಿನ ಪಂದ್ಯದಿಂದಲೂ ಆತ್ಯಾಕರ್ಷ ಪ್ರದರ್ಶನ ತೋರುತ್ತಿರುವ 21 ವರ್ಷದ ಕೆನಿನ್ ಶನಿವಾರ ನಡೆದ ಫೈನಲ್ನಲ್ಲಿ ಸ್ಪೇನಿನ ಗಾರ್ಬಿನಿಯಾ ಮುಗುರುಜ ಅವರನ್ನು 4-6,6-2, 6-2 ರಲ್ಲಿ ಮಣಿಸಿ ತಮ್ಮ ವೃತ್ತಿ ಜೀವನದ ಚೊಚ್ಚಲ ಗ್ರ್ಯಾಂಡ್ ಸ್ಲಾಮ್ ಕಿರೀಟಕ್ಕೆ ಮುತ್ತಿಕ್ಕಿದರು.
-
#AusOpen #AO2020 pic.twitter.com/5ZoAKVmbug
— #AusOpen (@AustralianOpen) February 1, 2020 " class="align-text-top noRightClick twitterSection" data="
">#AusOpen #AO2020 pic.twitter.com/5ZoAKVmbug
— #AusOpen (@AustralianOpen) February 1, 2020#AusOpen #AO2020 pic.twitter.com/5ZoAKVmbug
— #AusOpen (@AustralianOpen) February 1, 2020
ಅಮೆರಿಕದ ಈ ಯುವ ಪ್ರತಿಭೆ ಇದಕ್ಕೂ ಮುನ್ನ 2019ರ ಫ್ರೆಂಚ್ ಓಪನ್ ಟೂರ್ನಿಯಲ್ಲಿ ನಾಲ್ಕನೇ ಸುತ್ತು ಪ್ರವೇಶಿಸಿದ್ದೇ ಅವರ ಶ್ರೇಷ್ಠ ಪ್ರದರ್ಶನವಾಗಿತ್ತು. ಇದೀಗ ಚೊಚ್ಚಲ ಗ್ರ್ಯಾನ್ ಸ್ಲ್ಯಾಮ್ ಮುಡಿಗೇರಿಸಿಕೊಂಡಿದ್ದಾರೆ.
ಇದಕ್ಕೂ ಮುನ್ನ ನಾಲ್ಕನೇ ಸುತ್ತಿನಲ್ಲಿ ಜಪಾನ್ನ ಒಸಾಕರನ್ನು, ಸೆಮಿಫೈನಲ್ಲಿ ವಿಶ್ವದ ಹಾಲಿ ನಂ.1 ಆಟಗಾರ್ತಿ ಆಷ್ಲೇ ಬಾರ್ಟಿ ಅವರನ್ನು ಮಣಿಸಿದ್ದರು. ಕೇವಲ 21 ವರ್ಷಕ್ಕೆ ಆಸ್ಟ್ರೇಲಿಯಾ ಓಪನ್ ಪ್ರಶಸ್ತಿ ಗೆದ್ದ ವಿಶ್ವದ ಎರಡನೇ ಕಿರಿಯ ಆಟಗಾರ್ತಿ ಎನಿಸಿಕೊಂಡರು. ಇವರಿಗೂ ಮೊದಲು ರಷ್ಯಾದ ಮರಿಯಾ ಶರಫೋವಾ 2008ರಲ್ಲಿ 20 ವರ್ಷಕ್ಕೆ ಆಸ್ಟ್ರೇಲಿಯಾ ಓಪನ್ ಗೆದ್ದಿದ್ದರು.