ನ್ಯೂಯಾರ್ಕ್ : ಜುಲೈ 23ರಿಂದ ಟೋಕಿಯೋದಲ್ಲಿ ಆರಂಭವಾಗಲಿರುವ ಒಲಿಂಪಿಕ್ಸ್ನಿಂದ ಹಿಂದೆ ಸರಿಯುವುದಾಗಿ ಅಮೆರಿಕಾದ ಸ್ಟಾರ್ ಟೆನಿಸ್ ಆಟಗಾರ್ತಿ ಸೆರೆನಾ ವಿಲಿಯಮ್ಸ್ ಭಾನುವಾರ ಘೋಷಿಸಿದ್ದಾರೆ. 2020ರಲ್ಲಿ ನಡೆಯಬೇಕಿದ್ದ ಒಲಿಂಪಿಕ್ಸ್ ಒಂದು ವರ್ಷ ಮುಂದೂಡಿ ನಡೆಯುತ್ತಿದೆ. ಆದರೆ, ಈ ವರ್ಷವೂ ಸ್ಥಳೀಯರಿಂದ ವಿಶ್ವ ಕ್ರೀಡಾಕೂಟ ವಿರೋಧಿಸಿ ಶೇ.80ಕ್ಕೂ ಹೆಚ್ಚು ಜಪಾನಿಯರು ಪ್ರತಿಟಿಭಟಿಸುತ್ತಿದ್ದಾರೆ.
ಇದರ ಜೊತೆಗೆ ಅನೇಕ ದಿಗ್ಗಜ ಕ್ರೀಡಾಪಟುಗಳು ಈ ಕ್ರೀಡಾಕೂಟದಲ್ಲಿ ಆಡದಿರಲು ನಿರ್ಧರಿಸಿದ್ದಾರೆ. ಮೊದಲು ಸ್ಪೇನಿನ ನಡಾಲ್ ಒಲಿಂಪಿಕ್ಸ್ನಿಂದ ಹಿಂದೆ ಸರಿದಿದ್ದರೂ, ಇದೀಗ 23 ಗ್ರ್ಯಾಂಡ್ ಸ್ಲಾಮ್ ಒಡತಿ ಸೆರೆನಾ ವಿಲಿಯಮ್ಸ್ ಕೂಡ ಸ್ಪಷ್ಟ ಕಾರಣ ಹೇಳದೇ ಟೋಕಿಯೋ ಒಲಿಂಪಿಕ್ಸ್ನಿಂದ ಹಿಂದೆ ಸರಿಯುವುದಾಗಿ ತಿಳಿಸಿದ್ದಾರೆ. ಭಾನುವಾರದಿಂದ ಆರಂಭವಾಗಲಿರುವ ವಿಂಬಲ್ಡನ್ ಟೂರ್ನಿಯ ಭಾಗವಾಗಿ ಭಾನುವಾರ ನಡೆದ ವರ್ಚುವಲ್ ಕಾನ್ಫರೆನ್ಸ್ನಲ್ಲಿ ಸೆರೆನಾ ಈ ವಿಷಯ ಹೊರ ಹಾಕಿದ್ದಾರೆ.
ನಾನು ಒಲಿಂಪಿಕ್ ಪಟ್ಟಿಯಲ್ಲಿ ಇಲ್ಲ, ಇದರ ಬಗ್ಗೆ ನನಗೆ ಯಾವುದೇ ಮಾಹಿತಿಯಿಲ್ಲ. ಹಾಗಾಗಿ, ನಾನು ಅಲ್ಲಿ ಇರಬಾರದು. ಆದರೆ, ನಾನು ಒಲಿಂಪಿಕ್ಸ್ ಕುರಿತು ತೆಗೆದುಕೊಂಡಿರುವ ನಿರ್ಧಾರದ ಹಿಂದೆ ಹಲವು ಕಾರಣಗಳಿವೆ. ಆದರೆ, ನಾನು ಅಲ್ಲಿಗೆ ಹೋಗಲು ಬಯಸುತ್ತಿಲ್ಲ, ಕ್ಷಮಿಸಿ ಎಂದು ತಿಳಿಸಿದ್ದಾರೆ. 39 ವರ್ಷದ ಆಟಗಾರ್ತಿ ಪ್ರಸ್ತುತ ತಮ್ಮ 24ನೇ ಗ್ರ್ಯಾಂಡ್ ಸ್ಲಾಮ್ ಗೆಲ್ಲುವತ್ತ ಗಮನ ಹರಿಸಿದ್ದಾರೆ.
ಇದನ್ನು ಓದಿ: ವಿಂಬಲ್ಡನ್ ಆಡಲು ಆಶಾದಾಯಕವಾಗಿದ್ದೇನೆ : ನೊವಾಕ್ ಜೊಕೊವಿಕ್