ETV Bharat / sports

ಲಾಕ್​​ಡೌನ್​​​​​ ಬೇಸರ ನೀಗಿಸಲು ದಿಗ್ಗಜರ ಟೆನಿಸ್​​​​​​​​​​​ ಪಂದ್ಯಾವಳಿ: ಫೇಸ್​​​ಬುಕ್​​ನಲ್ಲಿ ಸ್ಟ್ರೀಮಿಂಗ್​

ಐಎಂಜಿ ಕಂಪನಿ ಸಂಘಟಿಸುತ್ತಿರುವ 'ವರ್ಚ್ಯುಯಲ್​ ಚಾರಿಟಿ ಟೆನಿಸ್​​​​​ ಪಂದ್ಯಾವಳಿ' ಇದೇ ಭಾನುವಾರ ನಡೆಯಲಿದೆ.

author img

By

Published : May 1, 2020, 4:21 PM IST

Serena, Sharapova to take part in charity virtual tennis event
ಸೆರೆನಾ ವಿಲಿಯಮ್ಸ್​​, ಮಾರಿಯಾ ಶರಪೋವಾ

ನ್ಯೂಯಾರ್ಕ್​​: ಫೇಸ್​ಬುಕ್​​ನಲ್ಲಿ ಜನರನ್ನು ಮನರಂಜಿಸಲು ಮತ್ತು ಪರಿಣಾಮಕಾರಿ ಸ್ಪರ್ಧೆಗಾಗಿ ಆಯೋಜಿಸಲಾಗಿರುವ 'ವರ್ಚ್ಯುಯಲ್​ ಚಾರಿಟಿ ಟೆನಿಸ್​​ ಪಂದ್ಯಾವಳಿ'ಯಲ್ಲಿ ಸೆರೆನಾ ವಿಲಿಯಮ್ಸ್​​, ಮಾರಿಯಾ ಶರಪೋವಾ, ನವೋಮಿ ಒಸಾಕಾ, ಕಿ ನಿಶಿಕೋರಿ ಸೇರಿದಂತೆ ಟೆನ್ನಿಸ್​ ತಾರೆಗಳು ಪಾಲ್ಗೊಳ್ಳಲಿದ್ದಾರೆ.

'ಸ್ಟೇ ಅಟ್​​ ​​ಹೋಮ್​ ಸ್ಲ್ಯಾಮ್​​' ಎಂಬ ಶೀರ್ಷಿಕೆಯಡಿ ಟೂರ್ನ್​ಮೆಂಟ್​ ಅನ್ನು ಐಎಂಜಿ ಕಂಪನಿ ಸಂಘಟಿಸುತ್ತಿದೆ. ಈ ಪಂದ್ಯಾವಳಿಯನ್ನು ಭಾನುವಾರ 'ಫೇಸ್​​ಬುಕ್​ ಗೇಮಿಂಗ್'​ ಮತ್ತು 'ಐಎಂಜಿ ಟೆನಿಸ್​' ಫೇಸ್​​ಬುಕ್​ ಪುಟದಲ್ಲಿ ಸ್ಟ್ರೀಮಿಂಗ್​​ ಮಾಡಲಾಗುತ್ತದೆ.

ನಿಂಟೆಂಡೊ ಸ್ವಿಚ್‌ನಲ್ಲಿ ಮಾರಿಯೋ ಟೆನಿಸ್ ಏಸಸ್ ಆಟವನ್ನು​​ ಬಳಸಿಕೊಂಡು ಇಬ್ಬರಿರುವ ತಂಡಗಳು ಸ್ಪರ್ಧಿಸಲಿವೆ. ಈ ಟೂರ್ನ್​ಮೆಂಟ್​​ನಲ್ಲಿ ವಿಜೇತರಿಗೆ 1 ಮಿಲಿಯನ್ ಡಾಲರ್​ ಬಹುಮಾನ ಸಿಗಲಿದೆ. ಪ್ರತಿಯೊಂದು ತಂಡವೂ 25,000 ಡಾಲರ್​ ದಾನ ಮಾಡಬೇಕಿದೆ.

ಲಾಕ್​ಡೌನ್​ ಹೇರಿರುವ ಪರಿಣಾಮ ಮನೆಯಲ್ಲೇ ಕೂತು ಬೇಸತ್ತು ಹೋಗಿರುವ ಜನರನ್ನು ರಂಜಿಸಲು ಮತ್ತು ಪರಿಣಾಮಕಾರಿ ಸ್ಪರ್ಧೆಗಾಗಿ ವಿಶ್ವದ ಉನ್ನತ ಕ್ರೀಡಾಪಟುಗಳು ಈ ಟೂರ್ನ್​​ಮೆಂಟ್​​ನಲ್ಲಿ ಭಾಗಿಯಾಗುತ್ತಿದ್ದಾರೆ ಎಂದು ಫೇಸ್‌ಬುಕ್ ಅಥ್ಲೀಟ್ ಪಾಟ್ನರ್​ಶಿಫ್​​ ಲೀಡ್ ಇವಾನ್ ಶುಗರ್ಮನ್ ಹೇಳಿದ್ದಾರೆ.

ಲೆಜೆಂಡರಿ ಟೆನಿಸ್ ಆಟಗಾರ ಜಾನ್ ಮೆಕೆನ್ರೋ ಮತ್ತು ಜನಪ್ರಿಯ ಯೂಟ್ಯೂಬ್ ಸ್ಟಾರ್​​ ಐಜಸ್ಟಿನ್ (ಜಸ್ಟಿನ್ ಎಜಾರಿಕ್) ಅವರು ಕಾಮೆಂಟರಿ ನಡೆಸಿಕೊಡಲಿದ್ದಾರೆ.

ಐಎಂಜಿ ಕ್ಲೈಂಟ್ಸ್​​ ಒಟ್ಟಾಗಿ ಟೂರ್ನ್​ಮೆಂಟ್​ಗೆ ಬೆಂಬಲಿಸಿದ್ದು ಹೆಮ್ಮೆ ಅನಿಸುತ್ತದೆ. ಕಂಪನಿಯ ನೌಕರರಿಗೆ ಇದು ಉಪಯೋಗವಾಗಲಿದೆ ಎಂದು ಟೆನಿಸ್ ಕ್ಲೈಂಟ್‌ಗಳ ಎಸ್‌ವಿಪಿ ಮ್ಯಾಕ್ಸ್ ಐಸೆನ್‌ಬುಡ್ ಹರ್ಷ ವ್ಯಕ್ತಪಡಿಸಿದರು.

ಭಾಗವಹಿಸಲಿರುವ ತಂಡಗಳು

  • ಸೆರೆನಾ ವಿಲಿಯಮ್ಸ್​ & ಗಿಗಿ ಹಡಿದ್​
  • ನವೋಮಿ ಒಸಾಕಾ & ಹೇಲಿ ಬೈಬರ್
  • ವೀನಸ್ ವಿಲಿಯಮ್ಸ್ & ಜುಜು ಸ್ಮಿತ್-ಶುಸ್ಟರ್
  • ಮರಿಯಾ ಶರಪೋವಾ & ಕಾರ್ಲಿ ಕ್ಲೋಸ್
  • ಕಿ ನಿಶಿಕೋರಿ & ಸ್ಟೀವ್ ಆಕಿ
  • ಮ್ಯಾಡಿಸನ್​ ಕೇ & ಸೀಲ್​
  • ಟೇಲರ್​ ಫ್ರಿಟ್ಜ್​​ & ಆ್ಯಡಿಸನ್​ ರೇ
  • ಕೆವಿನ್​ ಆ್ಯಂಡರ್​ಸನ್​ & ರಿಯಾನ್​ ತಾನೆಹಿಲ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.