ಒರ್ಲ್ಯಾಂಡೊ: ಒರ್ಲ್ಯಾಂಡೊ ಓಪನ್‌ನ ಫೈನಲ್ ಪಂದ್ಯದಲ್ಲಿ ಅಮೆರಿಕದ ಬ್ರಾಂಡನ್ ನಕಾಶಿಮಾ ವಿರುದ್ಧ ಸೋಲು ಕಂಡ ಭಾರತದ ಟೆನಿಸ್ ಆಟಗಾರ ಪ್ರಜ್ಞೇಶ್ ಗುಣೇಶ್ವರನ್ ರನ್ನರ್ ಅಪ್ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದ್ದಾರೆ.
ಭಾನುವಾರ ನಡೆದ ಹಾರ್ಡ್‌ಕೋರ್ಟ್ ಪಂದ್ಯಾವಳಿಯಲ್ಲಿ ಒಂದು ಗಂಟೆ 28 ನಿಮಿಷಗಳ ಹೋರಾಡಿದ ಪ್ರಜ್ಞೇಶ್ ಗುಣೇಶ್ವರನ್ 3-6, 4-6 ರಿಂದ ಸೋಲು ಅನುಭವಿಸಿದ್ರು.
ಇದು ಪ್ರಜ್ಞೇಶ್ ಅವರ ಎರಡನೇ ನೇರ ರನ್ನರ್ ಅಪ್ ಫಿನಿಶ್ ಆಗಿದೆ. ಕಳೆದ ವಾರ ಅಟ್ಲಾಂಟಿಕ್ ಟೈರ್ ಚಾಂಪಿಯನ್ಶಿಪ್ ಫೈನಲ್ನಲ್ಲಿ ಸೋಲು ಕಂಡು, ರನ್ನರ್ ಅಪ್ ಸ್ಥಾನ ಪಡೆದುಕೊಂಡಿದ್ದರು.
ಈ ಫಲಿತಾಂಶದಿಂದ ಪ್ರಜ್ಞೇಶ್ 137 ರಿಂದ 128ನೇ ರ್ಯಾಂಕಿಂಗ್ ತಲುಪಿದ್ದಾರೆ. ಒರ್ಲ್ಯಾಂಡೊ ಪ್ರದರ್ಶನದೊಂದಿಗೆ ಈಗಾಗಲೇ ಭಾರತದ ನಂಬರ್ ಒನ್ ಟೆನಿಸ್ ಆಟಗಾರ ಎಂಬ ಕೀರ್ತಿಗೆ ಪಾತ್ರರಾಗಿದ್ದಾರೆ.