ಪ್ಯಾರೀಸ್: ಭಾರತದ ರಾಮ್ ಕುಮಾರ್ ರಾಮನಾಥನ್ ಫ್ರೆಂಚ್ ಓಪನ್ ಕ್ವಾಲಿಫೈಯರ್ಸ್ನ ಪುರುಷರ ಸಿಂಗಲ್ಸ್ ವಿಭಾಗದಲ್ಲಿ 2ನೇ ಸುತ್ತಿಗೆ ಪ್ರವೇಶಿಸಿದ್ದಾರೆ. ಆದರೆ, ಪ್ರಜ್ನೇಶ್ ಗುಣೇಶ್ವರ್ ಮೊದಲ ಸುತ್ತಿನ ಸೋಲಿನೊಂದಿಗೆ ಮಂಗಳವಾರ ಟೂರ್ನಿಯಿಂದ ಹೊರಬಿದ್ದಿದ್ದಾರೆ.
ರಾಮ್ಕುಮಾರ್ ಮಂಗಳವಾರ ನಡೆದ ಪಂದ್ಯದಲ್ಲಿ ಅಮೆರಿಕದ ಮೈಕಲ್ ಮೋಹ್ ಅವರನ್ನು 2-6, 7-6(4), 6-3 ರಲ್ಲಿ ಒಂದು ಗಂಟೆ 54 ನಿಮಿಷಗಳಲ್ಲಿ ಮಣಿಸುವ ಮೂಲಕ ದ್ವಿತೀಯ ಸುತ್ತು ಪ್ರವೇಶಿಸಿದರು. ಅವರು ತಮ್ಮ ಮುಂದಿನ ಸುತ್ತಿನಲ್ಲಿ ಉಜ್ಬೆಕಿಸ್ತಾನದ ಡೆನಿಸ್ ಇಸ್ತೋಮಿನ್ ಸವಾಲನ್ನು ಎದುರಿಸಬೇಕಾಗಿದೆ.
ಆದರೆ, ಟೂರ್ನಿಯಲ್ಲಿ 32ನೇ ಶ್ರೇಯಾಂಕ ಪಡೆದಿದ್ದ ಭಾರತದ ಎಡಗೈ ಆಟಗಾರ ಪ್ರಜ್ನೇಶ್ 2-6, 2-6ರಲ್ಲಿ ಜರ್ಮನಿಯ ಆಸ್ಕರ್ ಒಟ್ಟೆ ಅವರ ವಿರುದ್ಧ ಸೋಲು ಕಂಡು ನಿರಾಸೆಯನುಭವಿಸಿದರು.
ಭಾರತ ತಂಡದ ಟಾಪ್ ಸಿಂಗಲ್ಸ್ ಆಟಗಾರ ಹಾಗೂ ಟೂರ್ನಿಯಲ್ಲಿ 27ನೇ ಶ್ರೇಯಾಂಕ ಪಡೆದಿರುವ ಸುಮಿತ್ ನಗಾಲ್ ಇಂದು ರಾತ್ರಿ ಇಟಲಿಯ ರಾಬರ್ಟೊ ಮಾರ್ಕೊರಾ ಸವಾಲನ್ನು ಎದುರಿಸಲಿದ್ದಾರೆ.
ಇದನ್ನು ಓದಿ:ದ್ರಾವಿಡ್ ಸರ್ ಯಾವಾಗಲೂ ತಮ್ಮಂತೆ ಆಡಿ ಎಂದು ಒತ್ತಾಯಿಸುತ್ತಿರಲಿಲ್ಲ: ಪೃಥ್ವಿ ಶಾ