ಹಾಲೆ (ಜರ್ಮನಿ) : ಭಾರತದ ರೋಹನ್ ಬೋಪಣ್ಣ ಮತ್ತು ದಿವಿಜ್ ಶರಣ್ ಅವರು ನೊವೆಂಟಿ ಓಪನ್ ಪುರುಷರ ಡಬಲ್ಸ್ ಪಂದ್ಯಾವಳಿಯಿಂದ ಹೊರ ಬಿದ್ದಿದ್ದಾರೆ. ಆರನೇ ಶ್ರೇಯಾಂಕಿತ ಬೆಲ್ಜಿಯಂ ಜೋಡಿ ಸ್ಯಾಂಡರ್ ಗಿಲ್ಲೆ ಮತ್ತು ಜೋರನ್ ವಿಲೆಗೆನ್ ವಿರುದ್ಧ ಭಾರತದ ಜೋಡಿ 3-6, 6-7ರಿಂದ ಪರಾಭವಗೊಂಡಿದೆ. ಗುರುವಾರ ನಡೆದ ಸೆಮಿಫೈನಲ್ ಪಂದ್ಯಕ್ಕೆ ಮುನ್ನಡೆಯಲು ವಿಫಲವಾಗಿದ್ದಾರೆ.
ಟೋಕಿಯೊ ಒಲಿಂಪಿಕ್ಸ್‌ನಲ್ಲಿ ತಂಡವಾಗಿ ಪಂದ್ಯವಾಡಲು ಸಾಧ್ಯವೇ ಎಂದು ತಿಳಿಯಲು ಕಾಯುತ್ತಿರುವ ಬೋಪಣ್ಣ ಮತ್ತು ಶರಣ್, ಯುರೋ 14,55,925 ಪಂದ್ಯಾವಳಿಯ ಎರಡನೇ ಸುತ್ತಿನಲ್ಲಿ ಎರಡನೇ ಶ್ರೇಯಾಂಕದ ಆಟಗಾರರಾದ ಲುಕಾಸ್ ಕುಬೊಟ್ ಮತ್ತು ಎಡ್ವರ್ಡ್ ರೋಜರ್ ವಾಸೆಲಿನ್ ಅವರ ವಿರುದ್ಧ ಉತ್ತಮವಾಗಿ ಆಡಿದ್ದಾರೆ.
41 ವರ್ಷದ ಬೋಪಣ್ಣ 38ನೇ ಸ್ಥಾನದಲ್ಲಿದ್ದರೆ, ಎಡಗೈ ಆಟಗಾರ ಶರಣ್ 75ನೇ ಸ್ಥಾನದಲ್ಲಿದ್ದಾರೆ. ಜೂನ್ 14ರಂದು ಪ್ರಕಟಿಸಿದ ಪಟ್ಟಿಯಲ್ಲಿ ಈ ಶ್ರೇಯಾಂಕ ಲಭಿಸಿದೆ. ಇದು ಟೋಕಿಯೊ ಒಲಿಂಪಿಕ್ಸ್‌ಗೆ ಪ್ರವೇಶ ಪಡೆಯಲು ಸಹಕಾರಿಯಾಗಲಿದೆ.