ನ್ಯೂಯಾರ್ಕ್: ಕೊರೊನಾ ವೈರಸ್ ಸೋಂಕಿತರ ಸಂಖ್ಯೆ ಅಮೆರಿಕಾದಲ್ಲಿ ಕಡಿಮೆಯಾಗದಿದ್ದರು ಪ್ರತಿಷ್ಠಿತ ಗ್ರ್ಯಾಂಡ್ಸ್ಲಾಮ್ ಟೂರ್ನಮೆಂಟ್ಅನ್ನು ನಡೆಸಲು ಯುನೈಟೆಡ್ ಸ್ಟೇಟ್ಸ್ ಟೆನ್ನಿಸ್ ಅಸೊಸಿಯೇಶನ್ ನಿರ್ಧರಿಸಿದೆ. ನಿಗಧಿತ ವೇಳಾಪಟ್ಟಿಯಂತೆ ಟೂರ್ನಿ ಆಯೋಜನೆಯಾಗಲಿದೆ.
ಆದರೆ ಟೂರ್ನಮೆಂಟ್ನಲ್ಲಿ ಟೆನ್ನಿಸ್ ದಿಗ್ಗಜರಾದ ರೋಜರ್ ಫೆಡರರ್, ರಾಫೆಲ್ ನಡಾಲ್ ಹಾಗೂ ನೂವಾಕ್ ಜಾಕೋವಿಕ್ ಭಾಗವಿಸುವುದಿಲ್ಲ ಎಂಬ ಮಾಹಿತಿ ಹೊರಬಿದ್ದಿದೆ. ಈಗಾಗಲೆ ವಿಂಬಲ್ಡನ್ ಕೂಡ ಕೊರೊನಾ ಭೀತಿಯಿಂದ ರದ್ದುಗೊಂಡಿತ್ತು. ಯುಎಸ್ಎ ಓಪನ್ ಕೂಡ ನಿಲ್ಲಲಿದೆ ಎನ್ನುತ್ತಿರುವಾಗಲೆ ಅಲ್ಲಿನ ಟೆನ್ನಿಸ್ ಆಕಾಡೆಮಿ ಟೂರ್ನಿಯನ್ನು ಆಯೋಜಿಸಲು ನಿರ್ಧರಿಸಿದರೂ ದಿಗ್ಗಜ ಟೆನ್ನಿಸಿಗರು ಟೂರ್ನಿಗೆ ಭಾಗವಹಿಸದಿರುವುದರಿಂದ ಟೂರ್ನಿ ಸಪ್ಪೆಯಾಗಲಿದೆ ಎನ್ನಲಾಗುತ್ತಿದೆ.
ಈಗಾಗಲೆ ರೋಜರ್ ಫೆಡರರ್ ಮೊಣಕಾಲು ಶಸ್ತ್ರಚಿಕಿತ್ಸೆಗೆ ಒಳಗಾಗಿರುವುದರಿಂದ ಟೂರ್ನಿಯಿಂದ ಹೊರಬಿದ್ದಿದ್ದರು. ನಂತರ ರಾಫೆಲ್ ನಡಾಲ್ ಕೊರೊನಾ ವೈರಸ್ ಭೀತಿಗೆ ಎದುರಿ ಟೂರ್ನಿಯಿಂದ ಹೊರ ಹೋಗುವ ಮಾತನಾಡಿದ್ದರು. ಇದೀಗ ಜೋಕೋವಿಕ್ ಕೂಡ ಯುಎಸ್ಎ ಗ್ರ್ಯಾಂಡ್ಸ್ಲಾಮ್ಗೆ ತಾವು ಲಭ್ಯರಿರುವುದಿಲ್ಲ ಎಂದು ತಿಳಿಸಿದ್ದಾರೆ.
" ಸದ್ಯಕ್ಕೆ ನಾನು ಫ್ರೆಂಚ್ ಓಪನ್‌ನಲ್ಲಿ ಪಾಲ್ಗೊಳ್ಳುವುದರ ಕಡೆಗೆ ಗಮನ ನೀಡಿದ್ದೇನೆ. ಆದರೆ ಇದಕ್ಕಿಂತ ಮೊದಲು ನಡೆಯುವ ಯುಎಸ್ ಓಪನ್ ಟೂರ್ನಮೆಂಟ್ನಲ್ಲಿ ಆಡುವುದೆ ಇಲ್ಲ. ನ್ಯೂಯಾರ್ಕ್‌ಗೆ ತೆರಳುವ ಕುರಿತು ಬಹುತೇಕ ಟೆನಿಸ್ ಗೆಳೆಯರು ನಕಾರಾತ್ಮಕ ಅಭಿಪ್ರಾಯವನ್ನೇ ವ್ಯಕ್ತಪಡಿಸಿದ್ದಾರೆ" ಎಂದು ನೊವಾಕ್ ಜೊಕೊವಿಕ್ ಹೇಳಿದ್ದಾರೆ.