ETV Bharat / sports

ಡೇವಿಸ್​ ಕಪ್ ಪಾಕಿಸ್ತಾನದಿಂದ ಸ್ಥಳಾಂತರವಿಲ್ಲ: ಗೊಂದಲದಲ್ಲಿ ​ಭಾರತೀಯ ಆಟಗಾರರು - ಅಂತಾರಾಷ್ಟ್ರೀಯ ಟೆನ್ನಿಸ್​

ಭಾರತ ಹಾಗೂ ಪಾಕಿಸ್ತಾನ ನಡುವೆ ನಡೆಯುವ ಡೇವಿಸ್​ ಕಪ್​ ಟೆನಿಸ್​​​​ ಟೂರ್ನಿಯಲ್ಲಿ ಸ್ಥಳಾಂತರಿಸಲ್ಪಡುವ ಪ್ರಶ್ನೆಯಿಲ್ಲ ಎಂದು ಪಾಕಿಸ್ತಾನ ಟೆನ್ನಿಸ್​ ಫೆಡರೇಷನ್ ಮುಖ್ಯಸ್ಥ ಸೈಫುಲ್ಲ ತಿಳಿಸಿದ್ದಾರೆ.

Davis Cup
author img

By

Published : Aug 12, 2019, 1:46 PM IST

ನವದೆಹಲಿ: ಭಾರತ ಹಾಗೂ ಪಾಕಿಸ್ತಾನ ನಡುವೆ ನಡೆಯುವ ಡೇವಿಸ್​ ಕಪ್​ ಟೆನಿಸ್​​​ ಟೂರ್ನಿಯಲ್ಲಿ ಸ್ಥಳಾಂತರಿಸಲ್ಪಡುವ ಪ್ರಶ್ನೆಯಿಲ್ಲ ಎಂದು ಪಾಕಿಸ್ತಾನ ಟೆನ್ನಿಸ್​ ಫೆಡರೇಷನ್​ ತಿಳಿಸಿದೆ.

ಕಾಶ್ಮೀರದಲ್ಲಿ 370 ವಿಧಿಯನ್ನು ಭಾರತ ಸರ್ಕಾರ ರದ್ದು ಮಾಡಿರುವುದರಿಂದ ಎರಡು ದೇಶಗಳ ನಡುವೆ ರಾಜಕೀಯ ಸ್ಥಿತಿ ಹದಗೆಟ್ಟಿದೆ. ಇದರಿಂದ ಈ ಸಂದರ್ಭದಲ್ಲಿ ಡೇವಿಸ್​ ಕಪ್​ ಟೂರ್ನಿಯನ್ನು ತಟಸ್ಥ ಸ್ಥಳದಲ್ಲಿ ನಡೆಸುವಂತೆ ಕೋರಿಕೊಂಡಿತ್ತು. ಆದರೆ, ಈ ಮನವಿಯನ್ನು ತಿರಸ್ಕರಿಸುವ ಪಾಕ್​ ಮಂಡಳಿ ಭಾರತೀಯ ಆಟಗಾರರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳುವುದು ನಮ್ಮ ಜವಾಬ್ದಾರಿ. ಬೇಕಾದರೆ ಪ್ರೇಕ್ಷಕರಿಲ್ಲದೇ ಟೂರ್ನಿ ನಡೆಸಲು ನಾವು ಸಿದ್ದ ಎಂದು ಪಿಟಿಎಫ್ ಮುಖ್ಯಸ್ಥ ಸಲೀಂ ಸೈಫ‌ುಲ್ಲಾ ತಿಳಿಸಿದ್ದಾರೆ.

  • Union Sports Min Kiren Rijiju on Indian team's Davis Cup tie scheduled to be held in Islamabad, Pakistan: Any bilateral match with Pak will have to get clearance from govt but if it's a multilateral event organised by international bodies then we can't take our own isolated stand pic.twitter.com/UP6FQQXgYM

    — ANI (@ANI) August 12, 2019 " class="align-text-top noRightClick twitterSection" data=" ">
ಭಾರತೀಯ ಆಟಗಾರರಿಗೆ ಅವರು ತಂಗುವ ಹೋಟೆಲ್​ ಹಾಗೂ ಪಂದ್ಯ ನಡೆಯುವ ಸ್ಥಳದಲ್ಲಿ ಸೂಕ್ತ ಭದ್ರತೆ ಒದಗಿಸಲಿದ್ದೇವೆ. ಹೀಗಿರುವಾಗ ಭಾರತೀಯ ಆಟಗಾರರಿಗೆ ಇಲ್ಲಿ ಆಡಲು ಏನು ತೊಂದರೆ? ಎಂದು ಸೈಫುಲ್ಲಾ ಪ್ರಶ್ನಿಸಿದ್ದಾರೆ.

ಇನ್ನು ಈ ಕುರಿತು ಹೇಳಿಕೆ ನೀಡಿರುವ ಕ್ರೀಡಾ ಸಚಿವ ಕಿರಣ್​ ರಿಜಿಜು ಯಾವುದೇ ದ್ವಿಪಕ್ಷೀಯ ಸರಣಿಯಾದರೆ ಸರ್ಕಾರದ ಅನುಮತಿ ಬೇಕಾಗುತ್ತದೆ. ಆದರೆ ಡೇವಿಸ್​ ಕಪ್​ ಅಂತಾರಾಷ್ಟ್ರೀಯ ಟೆನ್ನಿಸ್​ ಸಮಿತಿ ಆಯೋಜನೆ ಯಾಗಿರುವುದರಿಂದ ನಮಗೆ ಏಕಪಕ್ಷೀಯ ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ.

ಸೆಪ್ಟೆಂಬರ್​ 14-15 ರಂದು ಭಾರತ ಹಾಗೂ ಪಾಕಿಸ್ತಾನ ತಂಡಗಳ ನಡುವೆ ಡೇವಿಸ್​ ಕಪ್ ಇಸ್ಲಾಮಾಬಾದ್​ನಲ್ಲಿ​ ನಡೆಯಲಿದೆ.

Intro:Body:Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.