ETV Bharat / sports

ಜನಾಂಗೀಯ ಅನ್ಯಾಯದ ವಿರುದ್ಧ ಹೋರಾಡಲು ವೆಸ್ಟರ್ನ್​ & ಸದರ್ನ್​ ಸೆಮಿಯಿಂದ ಹೊರಬಂದ ಒಸಾಕ - ಎನ್​ಬಿಎ

ಅಮೇರಿಕಾದಲ್ಲಿ ಪೊಲೀಸ್​ ಜಾಕೋಬ್ ಬ್ಲೇಕ್ ಎನ್ನುವ ಕಪ್ಪು ವರ್ಣಿಯನನ್ನು ಗುಂಡಿಕ್ಕಿ ಕೊಂದಿರುವುದು ಅಮೆರಿಕದಲ್ಲಿ ಬೆಳಕಿಗೆ ಬಂದಿದೆ. ಇದರ ಬಗ್ಗೆ ಟ್ವಿಟ್ಟರ್​​ನಲ್ಲಿ ಅಸಮಾಧಾನ ವ್ಯಕ್ತಪಡಿಸಿರುವ ಜಪಾನ್​ ಟೆನ್ನಿಸ್​ ತಾರೆ ಕಪ್ಪುಜನರ ನರಮೇಧ ನನ್ನನ್ನು ವಿಚಲಿತಳನ್ನಾಗಿ ಮಾಡುತ್ತಿದೆ ಎಂದು ಟ್ವಿಟ್ಟರ್​ನಲ್ಲಿ ಬರೆದುಕೊಂಡಿದ್ದಾರೆ.

ವೆಸ್ಟರ್ನ್​ & ಸದರ್ನ್​ ಸೆಮಿಯಿಂದ ಹೊರಬಂದ ನವೋಮಿ ಒಸಾಕ

author img

By

Published : Aug 27, 2020, 12:51 PM IST

ನ್ಯೂಯಾರ್ಕ್​: ಜನಾಂಗೀಯ ಅನ್ಯಾಯದ ವಿರುದ್ಧದ ಹೋರಾಟಕ್ಕೆ ಬೆಂಬಲ ನೀಡುವ ಉದ್ದೇಶದಿಂದ ಜಪಾನ್​ ಹಾಗೂ ಮಾಜಿ ನಂಬರ್​ ಒನ್​ ಆಟಗಾರ್ತಿ ನವೋಮಿ ಒಸಾಕ ವೆಸ್ಟರ್ನ್​ ಮತ್ತು ಸದರ್ನ್​ ಓಪನ್​ ಸೆಮಿಫೈನಲ್ ಪಂದ್ಯದಿಂದ ಹೊರಬಂದಿದ್ದಾರೆ.

ಅಮೆರಿಕದಲ್ಲಿ ಪೊಲೀಸ್​ ಜಾಕೋಬ್ ಬ್ಲೇಕ್ ಎನ್ನುವ ಕಪ್ಪು ವರ್ಣಿಯನನ್ನು ಗುಂಡಿಕ್ಕಿ ಕೊಂದಿರುವುದು ಬೆಳಕಿಗೆ ಬಂದಿದೆ. ಈ ಬಗ್ಗೆ ಟ್ವಟ್ಟರ್​ನಲ್ಲಿ ಅಸಮಾಧಾನ ವ್ಯಕ್ತಪಡಿಸಿರುವ ಜಪಾನ್​ ಟೆನ್ನಿಸ್​ ತಾರೆ ಕಪ್ಪುಜನರ ಮೇಲಿನ ನರಮೇಧ ನನ್ನನ್ನು ವಿಚಲಿತಳನ್ನಾಗಿ ಮಾಡುತ್ತಿದೆ ಎಂದು ಟ್ವಿಟ್ಟರ್​ನಲ್ಲಿ ಬರೆದುಕೊಂಡಿದ್ದಾರೆ.

ನಿಮ್ಮಲ್ಲಿ ಅನೇಕರಿಗೆ ತಿಳಿದಿರುವಂತೆ ನಾನು ನಾಳೆ ಸೆಮಿಫೈನಲ್​ ಪಂದ್ಯವನ್ನು ಆಡಲು ನಿರ್ಧರಿಸಿದ್ದೆ. ಆದರೂ ನಾನು ಕ್ರೀಡಾಪಟುವಾಗುವ ಮೊದಲು ನಾನೊಬ್ಬ ಕಪ್ಪು ಮಹಿಳೆ. ನಾನೊಬ್ಬ ಕಪ್ಪು ಮಹಿಳೆಯಾಗಿ ಟೆನ್ನಿಸ್​ ಆಡುವುದನ್ನು ನೋಡುವ ಮೊದಲು, ಕಪ್ಪು ವರ್ಣದವರ ಮೇಲಿನ ದೌರ್ಜನ್ಯದ ವಿರುದ್ಧ ಗಮನ ಹರಿಸಬೇಕಾಗಿದೆ.

ಪೊಲೀಸರಿಂದ ಕಪ್ಪುಜನರ ನರಮೇಧವನ್ನು ನೋಡುತ್ತಿದ್ದರೆ ನನ್ನ ಮನಸಿ ಘಾಸಿಯನ್ನುಂಟು ಮಾಡುತ್ತಿದೆ. ಪ್ರತಿದಿನವೂ ಇದರ ವಿರುದ್ಧ ಹೊಸ ಹ್ಯಾಶ್​ ಟ್ಯಾಗ್​ ಹಾಕುವುದರಿಂದ ನಾನು ದಣಿದಿದ್ದೇನೆ. ಇದರ ಬಗ್ಗೆ ಪದೇ ದಪೇ ಮಾತನಾಡುವುದರಿಂದ ನನಗೆ ಆಯಾಸವಾಗುತ್ತದೆ. ಇದು ಯಾವಾಗ ನಿಲ್ಲುತ್ತದೆ? ಎಂದು ಬರೆದುಕೊಂಡು ಅಕ್ರೋಶ ವ್ಯಕ್ತಪಡಿಸಿದ್ದಾರೆ.

ಆಗಸ್ಟ್ 26ರ ಬುಧವಾರ ನಡೆದಿದ್ದ ಕ್ವಾರ್ಟರ್ ಫೈನಲ್‌ನಲ್ಲಿ ಎಸ್ಟೋನಿಯಾ ಆಟಗಾರ್ತಿ ಆನೆಟ್ ಕಾಂಟಾವಿಟ್ ವಿರುದ್ಧ ಒಸಾಕಾ 4-6, 6-2, 7-5ರ ಗೆಲುವು ದಾಖಲಿಸಿದ್ದರು. ಸೆಮಿಫೈನಲ್​ನಲ್ಲಿ ಎಲಿಸ್​ ಮೆಟೆರ್ನ್​ ವಿರುದ್ಧ ಆಡಬೇಕಿತ್ತು. ಎನ್​ಬಿಎ ಆಟಗಾರರು ತಮ್ಮ ಅಟವನ್ನು ನಿಲ್ಲಿಸಿ ಪ್ರತಿಭಟನೆ ನಡೆಸಲು ನಿರ್ಧರಿಸಿದ್ದರು. ಆ ಪ್ರತಿಭಟನೆಗೆ ಬೆಂಬಲ ಸೂಚಿಸುವ ಸಲುವಾಗಿ ಒಸಾಕ ಈ ನಿರ್ಧಾರ ತೆಗೆದುಕೊಂಡಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.