ರೋಮ್: ವಿಶ್ವದ 3 ನೇ ಶ್ರೇಯಾಂಕದ ಸ್ಪೇನ್‌ನ ಟೆನ್ನಿಸ್ ಆಟಗಾರ ರಾಫೆಲ್ ನಡಾಲ್ ಭಾನುವಾರ 10 ನೇ ಇಟಾಲಿಯನ್ ಓಪನ್ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡರು. ಟೂರ್ನಿಯ ಅಂತಿಮ ಹಣಾಹಣಿಯಲ್ಲಿ ವಿಶ್ವದ ಅಗ್ರ ಶ್ರೇಯಾಂಕಿತ ಆಟಗಾರ ನೊವಾಕ್ ಜೊಕೊವಿಕ್ ವಿರುದ್ಧ ಗೆಲುವು ಪಡೆಯುವ ಮೂಲಕ ಈ ಸಾಧನೆ ಮಾಡಿದ್ದಾರೆ.
-
🏆 Best moment ever 🏆 #IBI21 #SparklingAttitude #FerrariTrento @FerrariTrento pic.twitter.com/ypM3Bn16zp
— Internazionali Bnl (@InteBNLdItalia) May 16, 2021 " class="align-text-top noRightClick twitterSection" data="
">🏆 Best moment ever 🏆 #IBI21 #SparklingAttitude #FerrariTrento @FerrariTrento pic.twitter.com/ypM3Bn16zp
— Internazionali Bnl (@InteBNLdItalia) May 16, 2021🏆 Best moment ever 🏆 #IBI21 #SparklingAttitude #FerrariTrento @FerrariTrento pic.twitter.com/ypM3Bn16zp
— Internazionali Bnl (@InteBNLdItalia) May 16, 2021
ಭಾನುವಾರ ನಡೆದ ಫೈನಲ್ ಪಂದ್ಯದಲ್ಲಿ ನಡಾಲ್ 7-5, 1-6, 6-3 ಸೆಟ್‌ಗಳಿಂದ ಜೋಕೊವಿಕ್ ಅವರನ್ನು ಸೋಲಿಸಿದರು. ಈ ಜಯದೊಡನೆ ನಡಾಲ್ ಎರಡು ವಾರಗಳಲ್ಲಿ ಪ್ರಾರಂಭವಾಗುವ ಫ್ರೆಂಚ್ ಓಪನ್ ಟೆನ್ನಿಸ್ ಟೂರ್ನಿಯಲ್ಲಿ ತಮ್ಮ 14 ನೇ ಪ್ರಶಸ್ತಿಯನ್ನು ಗೆಲ್ಲುವ ವಿಶ್ವಾಸವನ್ನು ಹೆಚ್ಚಿಸಿಕೊಂಡಿದ್ದಾರೆ.
ಕಳೆದ ವರ್ಷದ ರೋಲ್ಯಾಂಡ್ ಗ್ಯಾರೊಸ್(ಫ್ರೆಂಟ್ ಓಪನ್) ಫೈನಲ್‌ನಲ್ಲಿ ನಡಾಲ್ ಜೋಕೊವಿಕ್ ಅವರನ್ನು ನೇರ ಸೆಟ್‌ಗಳಲ್ಲಿ ಸೋಲಿಸಿದ್ದನ್ನು ಇಲ್ಲಿ ಸ್ಮರಿಸಬಹುದು.