ಜೂರಿಚ್: ಅತಿ ಹೆಚ್ಚು ಗ್ರ್ಯಾಂಡ್ ಸ್ಲಾಮ್ ಪ್ರಶಸ್ತಿಗಳನ್ನು ಗೆದ್ದಿರುವ ಸ್ವಿಟ್ಜರ್ಲೆಂಡ್‌ನ ರೋಜರ್ ಫೆಡರರ್ಗೆ ಅವರ ಪೋಷಕರು ಸಾಕಷ್ಟು ಹಣಕಾಸು ವ್ಯವಸ್ಥೆ ಕಲ್ಪಿಸಿಕೊಟ್ಟಿದ್ದರು. ಆದರೆ ಕ್ರೀಡೆಯಲ್ಲಿ ಯಶಸ್ಸು ಅವರು ನೀಡಿದ್ದು ಕೇವಲ 2 ವರ್ಷ ಕಾಲಾವಕಾಶ. ಈ ಅಲ್ಪ ಕಾಲಾವಧಿಯಲ್ಲೇನಾದ್ರೂ ವಿಫಲರಾದರೆ ಮತ್ತೆ ಶಾಲೆಗೆ ಹೋಗಬೇಕೆಂದು ಹೇಳಿದ್ದರು ಎಂಬ ವಿಚಾರವನ್ನು ವಿಶ್ವದ ಶ್ರೀಮಂತ ಕ್ರೀಡಾಪಟು ರೋಜರ್ ಪೆಡರರ್ ಹೇಳಿದ್ದಾರೆ.
![ರೋಜರ್ ಫೆಡರರ್](https://etvbharatimages.akamaized.net/etvbharat/prod-images/768-512-7989590-thumbnail-3x2-roger_1207newsroom_1594541150_843.jpg)
"ನಾನು 16 ವರ್ಷದವನಾಗಿದ್ದಾಗ ಶಾಲೆ ತ್ಯಜಿಸಿ ಟೆನ್ನಿಸ್ ಕ್ರೀಡಾಕೂಟಗಳಲ್ಲಿ ತೊಡಗಿಸಿಕೊಳ್ಳುವುದಾಗಿ ಪೋಷಕರಿಗೆ ತಿಳಿಸಿದ್ದೆ. ಅದಕ್ಕೆ ನನ್ನ ತಂದೆ ನನಗೆ 2 ವರ್ಷ ಕಾಲಾವಕಾಶ ನೀಡಿದ್ದರು. ಆ ಸಮಯದಲ್ಲಿ ನಾನು ವೃತ್ತಿಪರ ಟೆನ್ನಿಸಿಗನಾಗಲು ವಿಫಲನಾದರೆ, ಮತ್ತೆ ಶಾಲೆಗೆ ಹೋಗಬೇಕು ಎಂದು ಎಚ್ಚರಿಸಿದ್ದರು. ಅದಕ್ಕೆ ನಾನು ನನ್ನನ್ನು ನಂಬಿ ಎಂದು ಹೇಳಿದ್ದೆ. ಅದೃಷ್ಟವಶಾತ್ ನಾನು ಆ ವೇಳೆ ಜೂನಿಯರ್ ವಿಶ್ವಚಾಂಪಿಯನ್ ಆದೆ " ಎಂದು ಅವರು ತಿಳಿಸಿದ್ದಾರೆ.
ವಿಶ್ವದಲ್ಲೇ ಅತ್ಯುತ್ತಮ ಪುರುಷ ಟೆನ್ನಿಸ್ ಆಟಗಾರನಾಗಿರುವ ರೋಜರ್ 20 ಗ್ರ್ಯಾಂಡ್ಸ್ಲಾಮ್ ಪ್ರಶಸ್ತಿ ಗೆದ್ದಿದ್ದಾರೆ. ಟೆನ್ನಿಸ್ ಶ್ರೇಯಾಂಕದಲ್ಲಿ ರೋಜರ್ ಸತತ 237 ವಾರ ಸೇರಿದಂತೆ 310 ವಾರಗಳ ಕಾಲ ಮೊದಲ ಶ್ರೇಯಾಂಕದಲ್ಲಿದ್ದ ದಾಖಲೆ ಇದೆ. ಈ ಮೂಲಕ ಅತಿಹೆಚ್ಚು ವಾರಗಳ ಕಾಲ ಅಗ್ರ ಸ್ಥಾನದಲ್ಲಿದ್ದ ಆಟಗಾರ ಎಂಬ ದಾಖಲೆಗೂ ಅವರು ಪಾತ್ರರಾಗಿದ್ದಾರೆ.