ETV Bharat / sports

ಪ್ರಬಲ ಹೋರಾಟದಲ್ಲಿ ಗೆದ್ದು ಐದನೇ ಸುತ್ತಿಗೆ ಪ್ರವೇಶಿಸಿದ ಡೇನಿಯಲ್​ ಮೆಡ್ವೆಡೆವ್​​​ - ಆಸ್ಟ್ರೇಲಿಯನ್​​ ಓಪನ್

ನಾಲ್ಕನೇ ಶ್ರೇಯಾಂಕಿತ ಡೇನಿಯಲ್​ ಮೆಡ್ವೆಡೆವ್​​​ ಅವರು ಎದುರಾಳಿ 28ನೇ ಶ್ರೇಯಾಂಕಿತ ಫಿಲಿಪ್ ಕ್ರಜಿನೋವಿಕ್ ವಿರುದ್ಧ 6-3, 6-3, 4-6, 3-6, 6-0 ಸೆಟ್‌ಗಳಿಂದ ಜಯಗಳಿಸಿದರು.

Daniil Medvedev
ಡೆನಿಯಲ್​ ಮೆಡ್ವೆಡೆವ್​
author img

By

Published : Feb 13, 2021, 7:29 PM IST

ಮೆಲ್ಬೋರ್ನ್​​: ಆಸ್ಟ್ರೇಲಿಯನ್​​ ಓಪನ್​​​ನಲ್ಲಿ ನಾಲ್ಕನೇ ಶ್ರೇಯಾಂಕಿತ ಡೇನಿಯಲ್​ ಮೆಡ್ವೆಡೆವ್​​​ ಅವರು ತಮ್ಮ ವೃತ್ತಿ ಜೀವನದಲ್ಲೇ ಮೊದಲ ಬಾರಿಗೆ ನಾಲ್ಕನೇ ಸುತ್ತಿನಲ್ಲಿ ಗೆಲುವು ಸಾಧಿಸಿ ಐದನೇ ಸುತ್ತಿಗೆ ಲಗ್ಗೆಯಿಟ್ಟರು.

ಎದುರಾಳಿ 28ನೇ ಶ್ರೇಯಾಂಕಿತ ಫಿಲಿಪ್ ಕ್ರಜಿನೋವಿಕ್ ವಿರುದ್ಧ 6-3, 6-3, 4-6, 3-6, 6-0 ಸೆಟ್‌ಗಳಿಂದ ಜಯಗಳಿಸಿದರು. ಮೊದಲೆರಡು ಸೆಟ್​​ನಲ್ಲಿ ಗೆದ್ದು ಮುನ್ನಡೆ ಸಾಧಿಸಿದ್ದ ಮೆಡ್ವೆಡೆವ್​, ಮೂರನೇ ಸುತ್ತಿನ ಹಣಾಹಣಿಯಲ್ಲಿ ಕ್ರಜಿನೋವಿಕ್ ಎರಡು ಸೆಟ್‌ಗಳಲ್ಲಿ ಹಿಂದಿಕ್ಕಿದರು. ರೋಚಕ ಐದನೇ ಸೆಟ್​​​ನಲ್ಲಿ ಪುನರಾಗಮನ ಮಾಡಿ ಐದನೇ ಸುತ್ತಿಗೆ ಪ್ರವೇಶಿಸಿದರು.

ಡೆನಿಯಲ್​ ಮೆಡ್ವೆಡೆವ್​

ನಾಲ್ಕನೇ ಸೆಟ್​​ನಲ್ಲಿ ಮೆಡ್ವೆಡೆವ್​ ಹೆಣಗಾಡುತ್ತಿದ್ದ ಸಂದರ್ಭದಲ್ಲಿ ಅವರ ಕೋಚ್​ ಗಿಲ್ಲೆಸ್ ಸೆರ್ವಾರಾ ರಾಡ್ ಲಾವರ್ ಅಲ್ಲಿಂದ ಹೊರ ನಡೆದರು. ಈ ಪಂದ್ಯ ಗೆಲುವು ಸಾಧಿಸುವ ಮೂಲಕ ಸತತ 17 ಪಂದ್ಯಗಳಲ್ಲಿ ಗೆಲುವು ಕಂಡಿದ್ದಾರೆ. ಅದರಲ್ಲಿ 2020ರ ಋತುವಿನ ಅಂತ್ಯದ ಎಟಿಪಿ ಫೈನಲ್‌ ಗೆದ್ದ ಪಂದ್ಯವೂ ಸೇರಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.