ETV Bharat / sports

ಇಟಾಲಿಯನ್ ಓಪನ್​ ಟೈಟಲ್​ಗಾಗಿ​ ಜೋಕೊವಿಕ್-ನಡಾಲ್​ ನಡುವೆ ಬಿಗ್ ​ಫೈಟ್​ - ಇಟಾಲಿಯನ್ ಓಪನ್​ ಫೈನಲ್

ಶನಿವಾರ ನಡೆದ 2ನೇ ಸೆಮಿಫೈನಲ್ ಪಂದ್ಯದಲ್ಲಿ 18 ಗ್ರ್ಯಾಂಡ್​ಸ್ಲಾಮ್​ ವಿಜೇತ ಜೋಕೋವಿಕ್ ಸ್ಥಳೀಯ ಆಟಗಾರ ಲೊರೆಂಜೋ ಸೊನೆಗೊ ವಿರುದ್ಧ 6-3, 6-7(5), 6-2ರಲ್ಲಿ ಮಣಿಸಿ ಫೈನಲ್ ಪ್ರವೇಶಿಸಿದರು.

ಇಟಾಲಿಯನ್ ಓಪನ್​
ಇಟಾಲಿಯನ್ ಓಪನ್​
author img

By

Published : May 16, 2021, 5:04 PM IST

ರೋಮ್​: ವಿಶ್ವದ ನಂ.1 ಜೋಕೊವಿಕ್ ಮತ್ತು ನಂ.​ 3ನೇ ಶ್ರೇಯಾಂಕದ ರಾಫೆಲ್ ನಡಾಲ್ ನಡುವೆ ಇಟಾಲಿಯನ್​ ಓಪನ್ ಫೈನಲ್​ನಲ್ಲಿ ಪ್ರಶಸ್ತಿ ಸುತ್ತಿನಲ್ಲಿ ಪೈಪೋಟಿ ನಡೆಯಲಿದೆ.

ಶನಿವಾರ ನಡೆದ 2ನೇ ಸೆಮಿಫೈನಲ್ ಪಂದ್ಯದಲ್ಲಿ 18 ಗ್ರ್ಯಾಂಡ್​ಸ್ಲಾಮ್​ ವಿಜೇತ ಜೋಕೋವಿಕ್ ಸ್ಥಳೀಯ ಆಟಗಾರ ಲೊರೆಂಜೋ ಸೊನೆಗೊ ವಿರುದ್ಧ 6-3, 6-7(5), 6-2ರಲ್ಲಿ ಮಣಿಸಿ ಫೈನಲ್ ಪ್ರವೇಶಿಸಿದರು.

ಇದಕ್ಕೂ ಮುನ್ನ ನಡೆದಿದ್ದ ಮೊದಲ ಸೆಮಿಫೈನಲ್​ನಲ್ಲಿ 20 ಗ್ರ್ಯಾಂಡ್​ ಸ್ಲಾಮ್ ವಿಜೇತ ರಾಫೆಲ್ ನಡಾಲ್ ಅಮೆರಿಕಾದ ರೀಲೆ ಒಪೆಲ್ಕಾ ವಿರುದ್ಧ 6-4,6-4ರ ನೇರ ಸೆಟ್​ಗಳ ಅಂತರದ ಜಯ ಸಾಧಿಸಿ ಫೈನಲ್ ಪ್ರವೇಶಿಸಿದ್ದರು. ಇದೀಗ ನಡಾಲ್ ಮತ್ತು ಜೋಕೋವಿಕ್​ ಭಾನುವಾರ ರಾತ್ರಿ ನಡೆಯುವ ಫೈನಲ್ ಕದನದಲ್ಲಿ ಮುಖಾಮುಖಿಯಾಗಲಿದ್ದಾರೆ.

ನಡಾಲ್ ಮತ್ತು ಜೋಕೊವಿಕ್​ ಒಟ್ಟು 5 ಬಾರಿ ಇಟಾಲಿಯನ್ ಓಪನ್ ಫೈನಲ್​ನಲ್ಲಿ ಎದುರುಬದುರಾಗಿದ್ದು, ಸ್ಪೇನ್​ ಆಟಗಾರ 3ರಲ್ಲಿ ಜಯಿಸಿದ್ದರೆ ಜೋಕೊವಿಕ್​ 2 ಬಾರಿ ಚಾಂಪಿಯನ್ ಆಗಿದ್ದರು. ನಡಾಲ್​ ಇಂದು ತಮ್ಮ 10ನೇ ಪ್ರಶಸ್ತಿಗೆ ಪೈಪೋಟಿ ನಡೆಸಿದರೆ, ಜೋಕೊವಿಕ್​ಗೆ ಇದು 6ನೇ ಪ್ರಶಸ್ತಿಯಾಗಲಿದೆ.

ಇದನ್ನು ಓದಿ:ಇಟಾಲಿಯನ್ ಓಪನ್ 2021..12ನೇ ಬಾರಿ ಫೈನಲ್ ಪ್ರವೇಶಿಸಿದ ರಾಫೆಲ್ ನಡಾಲ್

ETV Bharat Logo

Copyright © 2025 Ushodaya Enterprises Pvt. Ltd., All Rights Reserved.