ಲಂಡನ್: ವಿಂಬಲ್ಡನ್ ಬಾಲಕರ ವಿಭಾಗದ ಸಿಂಗಲ್ಸ್ ಗ್ರ್ಯಾನ್‌ಸ್ಲಾಮ್ ಟೂರ್ನಿ ಫೈನಲ್ನಲ್ಲಿ ಭಾರತ ಮೂಲದ ಅಮೆರಿಕದ ಟೆನಿಸ್ ಆಟಗಾರ ಸಮೀರ್ ಬ್ಯಾನರ್ಜಿ, ಪ್ರಶಸ್ತಿ ಮುಡಿಗೇರಿಸಿಕೊಂಡರು. ಭಾನುವಾರ ನಡೆದ ಪ್ರಶಸ್ತಿ ಸುತ್ತಿನ ಹೋರಾಟದಲ್ಲಿ ವಿಕ್ಟರ್ ಲಿಲೊವ್ ವಿರುದ್ಧ 7-5, 6-3ರ ಅಂತರದಲ್ಲಿ ಇವರು ಜಯ ಗಳಿಸಿದರು.
-
Remember the name - Samir Banerjee 🇺🇸
— Wimbledon (@Wimbledon) July 11, 2021 " class="align-text-top noRightClick twitterSection" data="
The American wins his first junior Grand Slam singles title by beating Victor Lilov in the boys' singles final#Wimbledon pic.twitter.com/Xc3ueczg5m
">Remember the name - Samir Banerjee 🇺🇸
— Wimbledon (@Wimbledon) July 11, 2021
The American wins his first junior Grand Slam singles title by beating Victor Lilov in the boys' singles final#Wimbledon pic.twitter.com/Xc3ueczg5mRemember the name - Samir Banerjee 🇺🇸
— Wimbledon (@Wimbledon) July 11, 2021
The American wins his first junior Grand Slam singles title by beating Victor Lilov in the boys' singles final#Wimbledon pic.twitter.com/Xc3ueczg5m
ಗ್ರ್ಯಾನ್‌ಸ್ಲಾಮ್ ಜೂನಿಯರ್ ವಿಭಾಗದಲ್ಲಿ ಎರಡನೇ ಬಾರಿಗೆ ಸ್ಪರ್ಧಿಸುತ್ತಿರುವ ಸಮೀರ್ ಬ್ಯಾನರ್ಜಿ, ಇತ್ತೀಚೆಗಷ್ಟೇ ನಡೆದ ಫ್ರೆಂಚ್ ಓಪನ್‌ನಲ್ಲಿ ಮೊದಲ ಸುತ್ತಿನಲ್ಲೇ ಸೋತು ಹೊರಬಿದ್ದಿದ್ದರು. ಸಮೀರ್ ಬ್ಯಾನರ್ಜಿ ಹೆತ್ತವರು ಭಾರತದ ಮೂಲದವರಾಗಿದ್ದು, 1980ರಿಂದ ಅಮೆರಿಕದಲ್ಲಿ ನೆಲೆಸಿದ್ದಾರೆ.
ರಾಮನಾಥನ್ ಕೃಷ್ಣನ್, ಬಾಲಕರ ವಿಭಾಗದಲ್ಲಿ ಗ್ರ್ಯಾನ್‍ಸ್ಲಾಮ್ ಪ್ರಶಸ್ತಿ ಗೆದ್ದ ಮೊದಲ ಭಾರತೀಯ. 1954ರಲ್ಲಿ ಇವರು ವಿಂಬಲ್ಡನ್ ಜೂನಿಯರ್ ಗ್ರ್ಯಾನ್‌ಸ್ಲಾಮ್ ಪ್ರಶಸ್ತಿ ಜಯಿಸಿದ್ದರು.
ಇದನ್ನೂ ಓದಿ: Wimbledon 2021: ಕರೋಲಿನಾ ಮಣಿಸಿ ಚೊಚ್ಚಲ ಪ್ರಶಸ್ತಿ ಗೆದ್ದ ಆ್ಯಶ್ಲಿ ಬಾರ್ಟಿ