ನವದೆಹಲಿ: ಪ್ರತಿಷ್ಠಿತ ಟೆನಿಸ್ ಟೂರ್ನಿ ಡೇವಿಸ್ ಕಪ್ಗೆ ಭಾರತ ಆತಿಥ್ಯ ವಹಿಸಲಿದೆ. ಮುಂದಿನ ವರ್ಷ ಮಾರ್ಚ್ 4- ಹಾಗೂ 5 ರಂದು ಪಂದ್ಯಗಳು ನಡೆಯಲಿವೆ. ಭಾರತ ಡೆನ್ಮಾರ್ಕ್ ವಿರುದ್ಧ ಗುಂಪು ಹಂತದ ಮೊದಲ ಪ್ಲೇ ಆಫ್ ಪಂದ್ಯಕ್ಕೆ ಆತಿಥ್ಯವಹಿಸಲಿದೆ.
2019ರ ನಂತರ ಇದೇ ಮೊದಲು ಬಾರಿ ಭಾರತ ಡೇವಿಸ್ ಕಪ್ ಆತಿಥ್ಯ ವಹಿಸುತ್ತಿದೆ. ಟೂರ್ನಿಯ ಭಾಗವಾಗಿ ಭಾರತ ಪಿನ್ಲೆಂಡ್(2021), ಕ್ರೋವೇಷ್ಯಾ(2020) ಮತ್ತು 2019ರಲ್ಲಿ ಕಜಕಸ್ತಾನಕ್ಕೆ ತೆರಳಿತ್ತು. ಭಾರತ 2019ರಲ್ಲಿ ಕೋಲ್ಕತ್ತಾದಲ್ಲಿ ಇಟಲಿ ತಂಡಕ್ಕೆ ಆತಿಥ್ಯವಹಿಸಿ 1-3ರಲ್ಲಿ ಸೋಲು ಕಂಡಿತ್ತು.
ಇನ್ನು ಡೆನ್ಮಾರ್ಕ್ ತಂಡವನ್ನು 3ನೇ ಬಾರಿ ಎದುರಿಸಲಿದೆ. 1984ರಲ್ಲಿ ಮೊದಲ ಬಾರಿ ಅರ್ಹಸ್ನಲ್ಲಿ ಎದುರಿಸಿ 3-2 ರಿಂದ ಗೆಲುವು ಸಾಧಿಸಿತ್ತು. 1927ರಲ್ಲಿ ಕೋಪನ್ಹೇಗನ್ ನಲ್ಲಿ ನಡೆದ ಪಂದ್ಯದಲ್ಲಿ ಡೆನ್ಮಾರ್ಕ್ ಭಾರತವನ್ನು 5-0 ಅಂತರದಿಂದ ವೈಟ್ ವಾಶ್ ಮಾಡಿತ್ತು.
ಸದ್ಯದ ಶ್ರೇಯಾಂಕಗಳನ್ನು ಗಮನಿಸಿದರೆ ಮುಂಬರುವ ಡೆನ್ಮಾರ್ಕ್ ವಿರುದ್ಧದ ಪಂದ್ಯ ಭಾರತಕ್ಕೆ ಸವಾಲಾಗಿದೆ. ಏಕೆಂದರೆ ಡೆನ್ಮಾರ್ಕ್ ತಂಡದ ಭಾರತದ ಎಲ್ಲ ಆಟಗಾರರಿಗಿಂತ ಹೆಚ್ಚಿನ ರ‍್ಯಾಂಕಿಂಗ್ ಹೊಂದಿರುವ ಸಿಂಗಲ್ಸ್ ಆಟಗಾರ ಹೋಲ್ಗರ್ ರೂನ್ (103) ಇದ್ದಾರೆ.
ಬಹುದಿನಗಳ ಕಾಯುವಿಕೆಯ ನಂತರ ತವರು ನೆಲದಲ್ಲಿ ಡೇವಿಸ್ ಕಪ್ ಪಂದ್ಯಗಳನ್ನು ಭಾರತದಲ್ಲಿ ಆಯೋಜಿಸುವ ಅವಕಾಶ ಸಿಕ್ಕಿದೆ ಭಾರತ ತಂಡದ ಕೋಚ್ ಜೀಶನ್ ಅಲಿ ಸಂತೋಷ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ:ವಾಂಖೆಡೆ ಮೈದಾನ ಸಿಬ್ಬಂದಿಗೆ 35,000 ರೂ. ದೇಣಿಗೆ ನೀಡಿದ ವಿರಾಟ್ ಬಳಗ