ETV Bharat / sports

ಟೆನ್ನಿಸ್​ ಲೋಕಕ್ಕೆ ಗುಡ್ ಬೈ ಹೇಳಿದ ರಷ್ಯಾ ಸುಂದರಿ ಮರಿಯಾ ಶರಪೋವಾ

5 ಬಾರಿಯ ಗ್ರ್ಯಾಂಡ್ಸ್​ಸ್ಲಾಮ್​ ವಿನ್ನರ್​ ಶರಪೋವಾ ಭುಜದ ಗಾಯಕ್ಕೆ ತುತ್ತಾಗಿ 373 ನೇ ಸ್ಥಾನಕ್ಕೆ ಕುಸಿದಿದ್ದರು. ಗಾಯದಿಂದ ಚೇತರಿಸಿಕೊಂಡು ಮತ್ತೆ ಆಸ್ಟ್ರೇಲಿಯನ್​ ಓಪನ್​ನಲ್ಲಿ ಅದೃಷ್ಠ ಪರೀಕ್ಷೆಗೆ ಇಳಿದಿದ್ದರೂ ಮೊದಲ ಸುತ್ತಿನಲ್ಲೇ ಹೊರಬಿದ್ದಿದ್ದರು.

author img

By

Published : Feb 26, 2020, 8:24 PM IST

Sharapova announces retirement
Sharapova announces retirement

ನವದೆಹಲಿ: ವಿಶ್ವದ ಮಾಜಿ ನಂಬರ್​ ಒನ್​ ಟೆನ್ನಿಸ್​ ಆಟಗಾರ್ತಿ ರಷ್ಯಾದ ಮರಿಯಾ ಶರಪೋವಾ ಬುಧವಾರ ತಮ್ಮ ಟೆನ್ನಿಸ್​ ವೃತ್ತಿ ಬದುಕಿಗೆ ವಿದಾಯ ಘೋಷಿಸಿದ್ದಾರೆ.

5 ಬಾರಿಯ ಗ್ರ್ಯಾಂಡ್ಸ್​ಸ್ಲಾಮ್​ ವಿನ್ನರ್​ ಶರಪೋವಾ ಭುಜದ ಗಾಯಕ್ಕೆ ತುತ್ತಾಗಿ 373 ನೇ ಸ್ಥಾನಕ್ಕೆ ಕುಸಿದಿದ್ದರು. ಗಾಯದಿಂದ ಚೇತರಿಸಿಕೊಂಡು ಮತ್ತೆ ಆಸ್ಟ್ರೇಲಿಯನ್​ ಓಪನ್​ನಲ್ಲಿ ಅದೃಷ್ಠ ಪರೀಕ್ಷೆಗೆ ಇಳಿದಿದ್ದರೂ ಮೊದಲ ಸುತ್ತಿನಲ್ಲೇ ಹೊರಬಿದ್ದಿದ್ದರು.

ಅಂತಾರಾಷ್ಟ್ರೀಯ ಮ್ಯಾಗ್​ಜೀನ್​ಗೆ ನೀಡಿದ ಸಂದರ್ಶನದಲ್ಲಿ" ನಾನು ಟೆನಿಸ್​ಗೆ ಗುಡ್​ಬೈ ಹೇಳುತ್ತಿದ್ದೇನೆ" ಎಂದಿರುವ ಶರಫೋವಾ "ನಾನು ಟೆನ್ನಿಸ್​ಗೆ ನನ್ನ ಜೀವನವನ್ನೇಅರ್ಪಿಸಿದ್ದೆ, ಟೆನ್ನಿಸ್​ ನನಗೆ ಜೀವನ ನೀಡಿತ್ತು, ಎಂದು ಭಾವುಕರಾಗಿ ನುಡಿದಿದ್ದಾರೆ.

Sharapova announces retirement
ಮರಿಯಾ ಶರಪೋವಾ

ನಾನು ನಿತ್ಯ ಇದನ್ನು (ಟೆನ್ನಿಸ್) ಮಿಸ್​ ಮಾಡಿಕೊಳ್ಳಲಿದ್ದೇನೆ, ನನ್ನ ತರಬೇತಿ, ನನ್ನ ದೈನಂದಿನ ಚಟುವಟಿಕೆ, ಬೆಳಗ್ಗೆ ಹೇಳುವುದು, ಮೊದಲು ಬಲ ‘ಶೂ’ ದ ಲೇಸ್​ ಕಟ್ಟುವುದರ ಬದಲು ಎಡ ಕಾಲಿನ ಶೂ ಲೇಸ್​ ಕಟ್ಟುತ್ತಿದ್ದದ್ದು, ಮೊದಲ ಚೆಂಡನ್ನು ಎದುರಿಸುವ ಮೊದಲು ಟೆನಿಸ್​ ಕೋರ್ಟ್​ನ ಗೇಟ್​ ಮುಚ್ಚುತ್ತಿದ್ದದ್ದು, ಈಗೇ ನನಗೆ ಪ್ರಿಯವಾಗಿದ್ದ ಹಲವಾರು ಘಟನೆಗಳು ಇನ್ನು ಮುಂದೆ ನನ್ನ ಪಾಲಿಗೆ ಇರುವುದಿಲ್ಲ ಎಂದು ಕಣ್ಣೀರಿಟ್ಟಿದ್ದಾರೆ.

Maria Sharapova announces retirement
ಮರಿಯಾ ಶರಪೋವಾ

ಕೇವಲ 14 ವರ್ಷಕ್ಕೆ ಸ್ಪರ್ಧಾತ್ಮಕ ಟೆನ್ನಿಸ್​​ಗೆ ಪದಾರ್ಪಣೆ ಮಾಡಿದ್ದ ಮರಿಯಾ ಶರಪೋವಾ 2001ರಲ್ಲಿ ಅವರ ಜನ್ಮದಿನದಂದೇ ಮೊದಲ ಅಂತಾರಾಷ್ಟ್ರೀಯ ಪಂದ್ಯವನ್ನಾಡಿದ್ದರು. ತಮ್ಮ 16ನೇ ವಯಸ್ಸಿಗೆ 2003ರಲ್ಲಿ ಮೊದಲ ಅಂತಾರಾಷ್ಟ್ರೀಯ ಟೂರ್ನಮೆಂಟ್​ ಗೆದ್ದು ಸಾಧನೆ ಮಾಡಿದ್ದರು.

ಗ್ಯಾಂಡ್​ಸ್ಲಾನ್​ನಲ್ಲಿ ಸಾಧನೆ:

ತಮ್ಮ 17ನೇ ವಯಸ್ಸಿನಲ್ಲಿ ವಿಂಬಲ್ಡನ್(2004)​ ಚಾಂಪಿಯನ್​ ಆಗುವ ಗ್ರ್ಯಾಂಡ್​ಸ್ಲಾಮ್​ ಗೆದ್ದ 3ನೇ ಕಿರಿಯ ಆಟಗಾರ್ತಿ ಎಂಬ ಕೀರ್ತಿಗೆ ಪಾತ್ರರಾಗಿದ್ದರು. 2005ರಲ್ಲಿ ರ್ಯಾಂಕಿಂಗ್​ನಲ್ಲಿ ಮೊದಲ ಸ್ಥಾನಕ್ಕೇರಿದ್ದರು. 2006ರಲ್ಲಿ ಅಮೆರಿಕನ್​ ಓಪನ್​, 2008ರಲ್ಲಿ ಆಸ್ಟ್ರೇಲಿಯಾ ಓಪನ್​, 2012ರಲ್ಲಿ ಫ್ರೆಂಚ್​ ಓಪನ್​, 2014ರಲ್ಲಿ ಆದ ಫ್ರೆಂಚ್​ ಓಪನ್​ ಗೆದ್ದಿದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.