ETV Bharat / sports

French ಒಪನ್​ 2021: ಹಾಲಿ ಚಾಂಪಿಯನ್​ ಸ್ವಿಯಾಟೆಕ್​ಗೆ ಸೋಲುಣಿಸಿದ ಮರಿಯಾ ಸಕ್ಕರಿ

ಫಿಲಿಪ್ ಚಾಟ್ರಿಯರ್​ ಮೈದಾನದಲ್ಲಿ ನಡೆದ ಕೊನೆಯ ಕ್ವಾರ್ಟರ್​ ಫೈನಲ್​ನಲ್ಲಿ ಸಕ್ಕರಿ 6-4, 6-4 ರಲ್ಲಿ ಸ್ವಿಯಾಟೆಕ್​ರನ್ನು ಮಣಿಸಿ ಟೂರ್ನಿಯಿಂದ ಹೊರಗಟ್ಟಿದರು.

ಹಾಲಿ ಚಾಂಪಿಯನ್​ ಸ್ವಿಯಾಟೆಕ್​ಗೆ ಸೋಲುಣಿಸಿದ ಮರಿಯಾ ಸಕ್ಕರಿ

author img

By

Published : Jun 9, 2021, 7:36 PM IST

ಪ್ಯಾರಿಸ್​: 17ನೇ ಶ್ರೇಯಾಂಕದ ಗ್ರೀಕ್​ನ ಮರಿಯಾ ಸಕ್ಕರಿ ಫ್ರೆಂಚ್ ಓಪನ್​ ಕ್ವಾರ್ಟರ್​ ಫೈನಲ್​ನಲ್ಲಿ ಹಾಲಿ ಚಾಂಪಿಯನ್​ ಪೋಲೆಂಡ್​ ಆಟಗಾರ್ತಿ ಇಗಾ ಸ್ವಿಯಾಟೆಕ್​ ಅವರನ್ನು ಮಣಿಸಿ ಸೆಮಿಫೈನಲ್​ ಪ್ರವೇಶಿಸಿದ್ದಾರೆ. ಸೋಮವಾರ 4ನೇ ಶ್ರೇಯಾಂಕದ ಸೋಫಿಯಾ ಕೆನಿನ್​ ಅವರನ್ನು ನೇರ ಸೆಟ್​ಗಳಿಂದ ಮಣಿಸಿದ್ದ ಸಕ್ಕರಿ ಇಂದು 8ನೇ ಶ್ರೇಯಾಂಕದ ಸ್ವಿಯಾಟೆಕ್ ವಿರುದ್ಧವೂ ಸುಲಭ ಜಯ ಸಾಧಿಸಿದ್ದಾರೆ.

ಫಿಲಿಪ್ ಚಾಟ್ರಿಯರ್​ ಮೈದಾನದಲ್ಲಿ ನಡೆದ ಕೊನೆಯ ಕ್ವಾರ್ಟರ್​ ಫೈನಲ್​ನಲ್ಲಿ ಸಕ್ಕರಿ 6-4, 6-4 ರಲ್ಲಿ ಸ್ವಿಯಾಟೆಕ್​ರನ್ನು ಮಣಿಸಿ ಟೂರ್ನಿಯಿಂದ ಹೊರಗಟ್ಟಿದರು.

25 ವರ್ಷದ ಗ್ರೀಕ್ ಆಟಗಾರ್ತಿ ಇದೇ ಮೊದಲ ಬಾರಿಗೆ ಗ್ರ್ಯಾಂಡ್​ಸ್ಲಾಮ್​ನಲ್ಲಿ ಸೆಮಿಫೈನಲ್ ಪ್ರವೇಶಿಸಿದ್ದಾರೆ. ನಾಲ್ಕನೇ ಸುತ್ತಿನಲ್ಲಿ ಅವರು ಅಮೆರಿಕದ ಮಾಜಿ ಆಸ್ಟ್ರೇಲಿಯನ್ ಓಪನ್ ಚಾಂಪಿಯನ್​ ಕೆನಿನ್​ರನ್ನು 6-1, 6-3ರಲ್ಲಿ ಮಣಿಸಿದ್ದರು. 3ನೇ ಸುತ್ತಿನ ಪಂದ್ಯದಲ್ಲಿ 14ನೇ ಶ್ರೇಯಾಂಕದ ಮೆರ್ಟೆನ್ಸ್​ ವಿರುದ್ಧ ಗೆಲುವು ದಾಖಲಿಸಿದ್ದರು.

ಇದೀಗ ಸೆಮಿಫೈನಲ್ ಪಂದ್ಯದಲ್ಲಿ ಶ್ರೇಯಾಂಕ ರಹಿತ ಜೆಕ್​ ಗಣರಾಜ್ಯದ ಬಾರ್ಬೊರಾ ಕ್ರೆಜ್ಕಿಕೋವಾರನ್ನು ಎದುರಿಸಲಿದ್ದಾರೆ. ಮತ್ತೊಂದು ಸೆಮಿಫೈನಲ್​ನಲ್ಲಿ 31ನೇ ಶ್ರೇಯಾಂಕದ ರಷ್ಯಾದ ಅನಸ್ತಾಸಿಯಾ ಪಾವಲ್ಯುಚೆಂಕೋವಾ ಸ್ಲೊವೆನಿಯಾದ ​ತಮಾರಾ ಜಿಡಾನ್ಸೆಕ್ ಸವಾಲನ್ನು ಎದುರಿಸಲಿದ್ದಾರೆ.

ಇದನ್ನು ಓದಿ:ಫ್ರೆಂಚ್ ಓಪನ್: 2ನೇ ಶ್ರೇಯಾಂಕದ ಮೆಡ್ವೆಡೆವ್​ಗೆ ಶಾಕ್ ನೀಡಿ ಸೆಮಿಫೈನಲ್ ಪ್ರವೇಶಿಸಿದ ಸಿಟ್ಸಿಪಾಸ್​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.