ETV Bharat / sports

ಫ್ರೆಂಚ್​ ಓಪನ್​ನಿಂದ ಹಿಂದೆ ಸರಿದ ಫೆಡರರ್​: ವಿಶ್ವದಾಖಲೆ ಸರಿಗಟ್ಟಲು ನಡಾಲ್ ದಾರಿ ಸುಗಮ​ - ಅತಿ ಹೆಚ್ಚು ಗ್ರ್ಯಾಂಡ್​ಸ್ಲಾಮ್

2020ರ ಆಸ್ಟ್ರೇಲಿಯಾ ಓಪನ್​ನಲ್ಲಿ ಫೆಡರರ್​ ಸೆಮಿಫೈನಲ್​ ತಲುಪಿದರೂ ಜೋಕೊವಿಕ್​ ವಿರುದ್ಧ ಸೋಲನುಭವಿಸಿ ನಿರಾಶೆಯನುಭವಿಸಿದ್ದರು. ಇದೀಗ ಮಂಡಿ ಶಸ್ತ್ರಚಿಕಿತ್ಸೆಗೆ ಒಳಗಾಗುತ್ತಿದ್ದು ಪ್ರತಿಷ್ಠಿತ ಫ್ರೆಂಚ್​ ಓಪನ್​ನಿಂದಲೂ ಹೊರಬಿದ್ದಿದ್ದಾರೆ. 38 ವರ್ಷದ ರೋಜರ್​ ಬುಧವಾರ ಸ್ವಿಟ್ಜರ್​​ಲ್ಯಾಂಡ್​​ ಆರ್ತ್ರೋಸ್ಕೋಪಿಕ್​ ಸರ್ಜರಿಗೆ ಒಳಾಗಾಗಲಿದ್ದೇನೆ ಎಂದು ತಮ್ಮ ಟ್ವಿಟರ್​ ಖಾತೆ ಮೂಲಕ ತಿಳಿಸಿದ್ದಾರೆ.

Federer to miss French Open due to knee surgery
ಫ್ರೆಂಚ್​ ಓಪನ್​ನಿಂದ ಹಿಂದೆ ಸರಿದ ಫೆಡರರ್​
author img

By

Published : Feb 20, 2020, 9:05 PM IST

ಜುರಿಚ್​(ಸ್ವಿಟ್ಜರ್​ಲ್ಯಾಂಡ್​): ಟೆನ್ನಿಸ್​ ಲೋಕದ ಲೆಜೆಂಡ್​ ರೋಜರ್​ ಫೆಡರರ್​ ಮಂಡಿ ನೋವಿನಿಂದ ಬಳಲುತ್ತಿದ್ದು, ಮುಂಬರುವ ಫ್ರೆಂಚ್​ ಓಪನ್​ನಿಂದ ಹಿಂದೆ ಸರಿದಿದ್ದಾರೆ.

2020ರ ಆಸ್ಟ್ರೇಲಿಯಾ ಓಪನ್​ನಲ್ಲಿ ಸೆಮಿಫೈನಲ್​ ತಲುಪಿದರೂ ಜೋಕೊವಿಕ್​ ವಿರುದ್ಧ ಸೋಲನುಭವಿಸಿ ನಿರಾಶೆಯನುಭವಿಸಿದ್ದರು. ಇದೀಗ ಮಂಡಿ ಶಸ್ತ್ರಚಿಕಿತ್ಸೆಗೆ ಒಳಗಾಗುತ್ತಿದ್ದು ಪ್ರತಿಷ್ಠಿತ ಫ್ರೆಂಚ್​ ಓಪನ್​ನಿಂದಲೂ ಹೊರಬಿದ್ದಿದ್ದಾರೆ. 38 ವರ್ಷದ ರೋಜರ್​ ಬುಧವಾರ ಸ್ವಿಟ್ಜರ್​​ಲ್ಯಾಂಡ್​​ನಲ್ಲಿ ಆರ್ತ್ರೋಸ್ಕೋಪಿಕ್​ ಸರ್ಜರಿಗೆ ಒಳಾಗಾಗಲಿದ್ದೇನೆ ತಮ್ಮ ಟ್ವಿಟರ್​ ಮೂಲಕ ತಿಳಿಸಿದ್ದಾರೆ.

French Open
ರೋಜರ್​ ಫೆಡರರ್​

" ಬಲ ಮಂಡಿಯ ನೋವು ನನ್ನನ್ನು ಕಾಡುತ್ತಿದೆ. ಹಾಗಾಗಿ ನನ್ನ ತಂಡದೊಂದಿಗೆ ಚರ್ಚೆ ಹಾಗೂ ಪರೀಕ್ಷೆ ನಡೆಸಿದ ನಂತರ ಫ್ರೆಂಚ್​ ಓಪನ್​ನಿಂದ ಹೊರಗುಳಿಯುವ ನಿರ್ಧಾರ ಕೈಗೊಂಡಿದ್ದೇನೆ. ನಾನು ನಿನ್ನೆ ಸ್ವಿಟ್ಜರ್​​ಲ್ಯಾಂಡ್​ನಲ್ಲಿ ಆರ್ತ್ರೋಸ್ಕೊಪಿಕ್ ಸರ್ಜರಿ ಮಾಡಿಸಿಕೊಳ್ಳಲು ನಿರ್ಧರಿಸಿದೆ" ಎಂದು ಬರೆದುಕೊಂಡಿದ್ದಾರೆ.

ರೋಜರ್​ ಫೆಡರರ್​

"ನನ್ನ ನಿರ್ಧಾರ ಉತ್ತಮ ಸಮಯದಲ್ಲಾಗಿದೆ ಎಂದು ವೈದ್ಯರು ಕೂಡ ಖಚಿತಪಡಿಸಿದ್ದು, ಆದಷ್ಟು ಬೇಗ ಚೇತರಿಸಿಕೊಳ್ಳಬಹುದು ಎಂಬ ಭರವಸೆ ನೀಡಿದ್ದಾರೆ. ಇದರಿಂದ ನಾನು ಅನಿವಾರ್ಯವಾಗಿ, ದುಬೈ ಓಪನ್​, ಇಂಡಿಯನ್​ ವೆಲ್ಸ್​, ಬೊಗೋಟ, ಮಿಯಾಮಿ, ಹಾಗೂ ಫ್ರೆಂಚ್​ ಓಪನ್​ನ ಮಿಸ್​ ಮಾಡಿಕೊಳ್ಳುತ್ತಿರುವೆ, ನನ್ನನ್ನು ಬೆಂಬಲಿಸಿದ ಪ್ರತಿಯೊಬ್ಬರಿಗೂ ಧನ್ಯವಾದಗಳು. ಮತ್ತೆ ಆಟವಾಡುವುದಕ್ಕೆ ಕಾಯಲು ನನ್ನಿಂದಲೂ ಸಾಧ್ಯವಿಲ್ಲ, ಶೀಘ್ರದಲ್ಲೇ ಹುಲ್ಲಿನ ಅಂಕಣದಲ್ಲಿ ಸಿಗೋಣ ಎಂದು ಬರೆದುಕೊಂಡಿದ್ದಾರೆ.

French Open
ಫೆಡರರ್​ ದಾಖಲೆಗಳು

ಫೆಡರರ್​ ಈಗಾಗಲೆ 20 ಗ್ರ್ಯಾಂಡ್​ಸ್ಲಾಮ್ ಗೆದ್ದು ಅಧಿಕ ಪ್ರಶಸ್ತಿ ಗೆದ್ದ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದಾರೆ. ಎರಡನೇ ಸ್ಥಾನದಲ್ಲಿರುವ ರಫೆಲ್​ ನಡಾಲ್​ 19 ಗ್ರ್ಯಾಂಡ್​ಸ್ಲಾಮ್ ಗೆದ್ದಿದ್ದಾರೆ. ಇದೀಗ ಫೆಡರರ್​ ಹೊರಬಿದ್ದಿರುವುದು ನಡಾಲ್​ ಕೊಂಚ ಒತ್ತಡ ಕಡಿಮೆಯಾಗಿದ್ದು, ಈಗೇನಿದ್ದರೂ ಆಸ್ಟ್ರೇಲಿಯನ್​ ಓಪನ್​ ಚಾಂಪಿಯನ್​ ಜೋಕೊವಿಕ್​ರಿಂದ ಮಾತ್ರ ಪ್ರಬಲ ಪೈಪೋಟಿಯ ನಿರೀಕ್ಷೆಯಲ್ಲಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.