ಮೆಲ್ಬೋರ್ನ್: ವಿಶ್ವದ ನಂಬರ್ ಒನ್ ಆಟಗಾರ ನೊವಾಕ್ ಜೊಕೊವಿಕ್ ಮಂಗಳವಾರ ನಡೆದ ಕ್ವಾರ್ಟರ್ ಫೈನಲ್ ರೋಚಕ ಕದನದಲ್ಲಿ ಜರ್ಮನಿಯ ಅಲೆಕ್ಸಾಂಡರ್ ಜ್ವರೆವ್ ವಿರುದ್ಧ ಗೆಲುವು ಸಾಧಿಸಿ ಆಸ್ಟ್ರೇಲಿಯನ್ ಓಪನ್ನಲ್ಲಿ ಸೆಮಿಫೈನಲ್ ಪ್ರವೇಶಿಸಿದ್ದಾರೆ.
ಮೆಲ್ಬೋರ್ನ್ನ ರೋಡ್ ಲೇವರ್ ಅರೇನಾದಲ್ಲಿ ನಡೆದ ಪಂದ್ಯದಲ್ಲಿ 22 ವರ್ಷದ ಜ್ವರೆವ್ ವಿರುದ್ಧ ಹಾಲಿ ಚಾಂಪಿಯನ್ ಜೊಕೊವಿಕ್ 6(8), 6-2, 6-4, 7(8)-6(6) ರಲ್ಲಿ ಮಣಿಸಿದರು.
8 ಬಾರಿಯ ಚಾಂಪಿಯನ್ ನೊವಾಕ್ ಮೊದಲ ಸೆಟ್ನಲ್ಲಿ ಯುವ ಆಟಗಾರನಿಗೆ ಪ್ರಬಲ ಪೈಪೋಟಿ ನೀಡಿದರೂ ಟೈ ಬ್ರೇಕರ್ನಲ್ಲಿ ಸೋಲುಂಡರು. ಆದರೆ, 2 ಮತ್ತು 3ನೇ ಸೆಟ್ನಲ್ಲಿ ಸುಲಭ ಜಯ ಸಾಧಿಸಿದರೆ 4ನೇ ಸೆಟ್ನಲ್ಲಿ ಜ್ವರೆವ್ ಮತ್ತೆ ಪ್ರಬಲ ಪೈಪೋಟಿ ನೀಡಿದರು. ಆದರೆ ಟೈ ಬ್ರೇಕರ್ನಲ್ಲಿ 6-8ರಲ್ಲಿ ಸೋಲು ಕಾಣುವ ಮೂಲಕ ಟೂರ್ನಿಯಿಂದ ಹೊರಬಿದ್ದರು.
-
Serbian delight 🇷🇸💪@DjokerNole advances to his 9️⃣th #AusOpen semifinal.#AO2021 pic.twitter.com/59WWPzThwB
— #AusOpen (@AustralianOpen) February 16, 2021 " class="align-text-top noRightClick twitterSection" data="
">Serbian delight 🇷🇸💪@DjokerNole advances to his 9️⃣th #AusOpen semifinal.#AO2021 pic.twitter.com/59WWPzThwB
— #AusOpen (@AustralianOpen) February 16, 2021Serbian delight 🇷🇸💪@DjokerNole advances to his 9️⃣th #AusOpen semifinal.#AO2021 pic.twitter.com/59WWPzThwB
— #AusOpen (@AustralianOpen) February 16, 2021
ಸರ್ಬಿಯನ್ ಸ್ಟಾರ್ ಸೆಮಿಫೈನಲ್ ಪಂದ್ಯದಲ್ಲಿ ಸರ್ಪ್ರೈಸ್ ಸ್ಟಾರ್ ಆಗಿ ಸೆಮಿಫೈನಲ್ ಪ್ರವೇಶಿಸಿರುವ ರಷ್ಯಾದ ಅಸ್ಲಾನ್ ಕರಾತ್ಸೆವ್ ವಿರುದ್ಧ ಸೆಣಸಾಡಲಿದ್ದಾರೆ. ಅರ್ಹತಾ ಸುತ್ತಿನ ಮೂಲಕ ಟೂರ್ನಿಗೆ ಪ್ರವೇಶ ಪಡೆದಿದ್ದ ಅಸ್ಲಾನ್ ಅದ್ಭುತ ಪ್ರದರ್ಶನ ತೋರಿ ಸೆಮಿಫೈನಲ್ವರೆಗೆ ಬಂದಿದ್ದಾರೆ. ಅವರು ಓಪನ್ ಎರಾದಲ್ಲಿ ಪದಾರ್ಪಣೆ ಟೂರ್ನಿಯಲ್ಲಿ ಸೆಮಿಫೈನಲ್ ಪ್ರವೇಶಿಸಿದ ಮೊದಲ ಟೆನ್ನಿಸ್ ಪ್ಲೇಯರ್ ಎನಿಸಿಕೊಂಡಿದ್ದಾರೆ.
ಇದನ್ನು ಓದಿ:ಆಸ್ಟ್ರೇಲಿಯಾ ಓಪನ್: ದ್ವಿತೀಯ ಶ್ರೇಯಾಂಕದ ಹಾಲೆಪ್ ವಿರುದ್ಧ ಗೆದ್ದು ಸೆಮಿಫೈನಲ್ಗೆ ಎಂಟ್ರಿ ಕೊಟ್ಟ ಸೆರೆನಾ