ದುಬೈ: ಭಾರತದ ಅಗ್ರ ಶ್ರೇಯಾಂಕಿತ ಸಿಂಗಲ್ಸ್ ಮತ್ತು ಡಬಲ್ಸ್ ಟೆನ್ನಿಸ್ ಆಟಗಾರ್ತಿ ಅಂಕಿತಾ ರೈನಾ, ಜಾರ್ಜಿಯಾದ ಎಕಟೆರಿನ್ ಗೋರ್ಗೊಡ್ಜ್ ಜೊತೆಗೂಡಿ ಅಲ್ ಹಬ್ಟೂರ್ ಟೆನ್ನಿಸ್ ಚಾಲೆಂಜ್‌ನಲ್ಲಿ ಡಬಲ್ಸ್ ಕಿರೀಟ ಗೆದ್ದು ಸಂಭ್ರಮಿಸಿದ್ದಾರೆ.
ಶನಿವಾರ ಹ್ಯಾಬ್ಟೂರ್ ಗ್ರ್ಯಾಂಡ್ ಬೀಚ್ ರೆಸಾರ್ಟ್ ಮತ್ತು ಸ್ಪಾದಲ್ಲಿ ನಡೆದ ಫೈನಲ್‌ನಲ್ಲಿ ಅಂಕಿತಾ ರೈನಾ ಮತ್ತು ಗೋರ್ಗೊಡ್ಜ್ 6-4, 3-6, 10-6ರಿಂದ ಬೊಲ್ಸೊವಾ ಮತ್ತು ಜುವಾನ್ ಅವರನ್ನು ಮಣಿಸಿ ಡಬಲ್ಸ್ ಪ್ರಶಸ್ತಿಗೆ ಮುತ್ತಿಕ್ಕಿದರು.

'ನಾವು ಡಬಲ್ಸ್‌ಗೆ ಪ್ರವೇಶಿಸಿದವರಲ್ಲಿ ಕೊನೆಯವರು, ಆದರೆ ಇಂದು ಟ್ರೋಫಿಯ ಜೊತೆಯಲ್ಲಿದ್ದೇವೆ' ಎಂದು ಅಂಕಿತಾ ರೈನಾ ಹೇಳಿದ್ದಾರೆ.
ಅಂಕಿತಾ ರೈನಾ, ಪ್ರಸ್ತುತ ಮಹಿಳಾ ಸಿಂಗಲ್ಸ್ (2013 ರಿಂದ) ಮತ್ತು ಡಬಲ್ಸ್ (2019 ರಿಂದ) ಎರಡರಲ್ಲೂ ಭಾರತದ ನಂ.1 ಆಟಗಾರ್ತಿಯಾಗಿದ್ದಾರೆ. ಏಪ್ರಿಲ್ 2018ರಲ್ಲಿ ಮೊದಲ ಬಾರಿಗೆ ಟಾಪ್ -200 ಸಿಂಗಲ್ಸ್ ಶ್ರೇಯಾಂಕಕ್ಕೆ ಪ್ರವೇಶಿಸಿದ್ದ ಇವರು, ಈ ಸಾಧನೆ ಮಾಡಿದ ಭಾರತದ ಐದನೇ ಆಟಗಾರ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.