ETV Bharat / sports

ಆಸ್ಟ್ರೇಲಿಯಾ ಓಪನ್​ಗೆ ತೆರಳುವ ಮುನ್ನವೇ ಆ್ಯಂಡಿ ಮರ್ರೆಗೆ ಕೊರೊನಾ

author img

By

Published : Jan 14, 2021, 8:25 PM IST

ಕೊರೊನಾ ವೈರಸ್​​ ನಿರ್ಬಂಧಗಳಿಂದಾಗಿ ಮೂರು ವಾರಗಳ ಕಾಲ ವಿಳಂಬವಾಗಿದ್ದ ಆಸ್ಟ್ರೇಲಿಯನ್ ಓಪನ್ ಫೆಬ್ರವರಿ 8ರಿಂದ ಪ್ರಾರಂಭವಾಗಲಿದ್ದು, ಆಟಗಾರರು ಮತ್ತು ಅಧಿಕಾರಿಗಳು ಆಸ್ಟ್ರೇಲಿಯಾಕ್ಕೆ ಬಂದ ನಂತರ 14 ದಿನಗಳ ಕಾಲ ಕ್ವಾರಂಟೈನ್​​​ನಲ್ಲಿ ಇರಬೇಕಾಗುತ್ತದೆ.

Andy Murray tests positive for virus before Australian Open
ಆ್ಯಂಡಿ ಮರ್ರೆಗೆ ಕೊರೊನಾ

ಲಂಡನ್​​: ಆಸ್ಟ್ರೇಲಿಯಾ​ ಓಪನ್​ ಟೂರ್ನಿಗೆ ಹೊರಡುವ ಮುನ್ನವೇ ಬ್ರಿಟನ್​​ ಟೆನ್ನಿಸ್​ ಆಟಗಾರ ಆ್ಯಂಡಿ ಮರ್ರೆ ಅವರಿಗೆ ಕೊರೊನಾ ಸೋಂಕು ತಗುಲಿದೆ.

ಕೊರೊನಾ ವೈರಸ್​​ ನಿರ್ಬಂಧಗಳಿಂದಾಗಿ ಮೂರು ವಾರಗಳ ಕಾಲ ವಿಳಂಬವಾಗಿದ್ದ ಆಸ್ಟ್ರೇಲಿಯನ್ ಓಪನ್ ಫೆಬ್ರವರಿ 8ರಿಂದ ಪ್ರಾರಂಭವಾಗಲಿದೆ. 2021ರ ಮೊದಲ ಗ್ರ್ಯಾಂಡ್ ಸ್ಲ್ಯಾಮ್ ಪಂದ್ಯಾವಳಿಗೂ ಮರ್ರೆಗೆ ವೈಲ್ಡ್-ಕಾರ್ಡ್ ಪ್ರವೇಶ ಸಿಕ್ಕಿದೆ.

ಇದನ್ನೂ ಓದಿ: ಕೇರಳ ಪರ ಶತಕ ಸಿಡಿಸಿದ ಅಜರುದ್ದೀನ್​ಗೆ ಬಂಪರ್​: 1 ರನ್​ಗೆ 1,000 ರೂ.ನಂತೆ ಬಹುಮಾನ!

ಮೂರು ಬಾರಿ ಗ್ರ್ಯಾಂಡ್ ಸ್ಲ್ಯಾಮ್ ಚಾಂಪಿಯನ್​​​ ಈಗ ಮನೆಯಲ್ಲೇ ಕ್ವಾರಂಟೈನ್​ಗೆ ಒಳಗಾಗಿದ್ದಾರೆ. ಸೋಂಕಿನಿಂದ ಮುಕ್ತರಾದ ಬಳಿಕ ಆಸ್ಟ್ರೇಲಿಯಾಕ್ಕೆ ಸುರಕ್ಷಿತ ಪ್ರಯಾಣ ಬೆಳೆಸಿ ಸ್ಪರ್ಧಿಸುವ ಸಾಧ್ಯತೆ ಇದೆ.

ಕ್ರೀಡಾಪಟುಗಳು ಮತ್ತು ಅಧಿಕಾರಿಗಳು ಆಸ್ಟ್ರೇಲಿಯಾಕ್ಕೆ ಬಂದ ನಂತರ 14 ದಿನಗಳ ಕ್ವಾರಂಟೈನ್​​ಗೆ ಒಳಗಾಗಬೇಕು. ಐದು ಬಾರಿ ಆಸ್ಟ್ರೇಲಿಯನ್​​ ಓಪನ್​​ ಟೂರ್ನಿಯ ರನ್ನರ್​​ಅಪ್​ ಮತ್ತು ಒಲಿಂಪಿಕ್​​ನಲ್ಲಿ ಚಿನ್ನದ ಪದಕ ವಿಜೇತನಾಗಿರುವ ಮರ್ರೆ, ಕೋವಿಡ್ ಲಾಕ್​​ಡೌನ್​ ನಿಯಮಗಳನ್ನು ಪಾಲಿಸಬೇಕಾದ ಕಾರಣ ಫ್ಲೋರಿಡಾ ಡೆಲ್ರೆ ಬೀಚ್ ಓಪನ್​​​ನಿಂದ ಹಿಂದೆ ಸರಿದಿದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.