ಲಂಡನ್: ರೋಹಾಂಪ್ಟನ್ನಲ್ಲಿ ನಡೆಯುತ್ತಿರುವ ಬ್ರಿಟ್ಸ್ ಪ್ರೀಮಿಯರ್ ಲೀಗ್ ಟೆನಿಸ್ ಪಂದ್ಯಾವಳಿಯಲ್ಲಿ ಮೂರು ಬಾರಿ ಗ್ರ್ಯಾಂಡ್ಸ್ಸ್ಲಾಮ್ ಚಾಂಪಿಯನ್ ಆ್ಯಂಡಿ ಮರ್ರೆ ಡಾನ್ ಇವಾನ್ಸ್ ಅವರನ್ನು ನೇರ ಸೆಟ್ಗಳಲ್ಲಿ ಸೋಲಿಸಿ, ಎರಡು ತಿಂಗಳಲ್ಲಿ ಮೊದಲ ಪಂದ್ಯವನ್ನು ಗೆದ್ದಿದ್ದಾರೆ.
ಅನಾರೋಗ್ಯದಿಂದ ಈ ಅಕ್ಟೋಬರ್ನಲ್ಲಿ ಜರ್ಮನಿಯ ಕಲೋನ್ನಲ್ಲಿ ನಡೆದ ಪಂದ್ಯಾವಳಿಯಿಂದ ಹಿಂದೆ ಸರಿದ ನಂತರ ಇಲ್ಲಿಯವರೆಗೂ ಕಣಕ್ಕಿಳಿದಿರಲಿಲ್ಲ. ಬ್ರಿಟ್ಸ್ ಪ್ರೀಮಿಯರ್ ಲೀಗ್ನ ಮೊದಲ ಪಂದ್ಯದಲ್ಲಿ ಬ್ರಿಟಿಷ್ ನಂಬರ್ ಒನ್ ಆಟಗಾರ ಇವಾನ್ಸ್ ಅವರನ್ನು 7-6 (7-5), 6-4 ರಿಂದ ಸೋಲಿಸಿದರು.
ಕೋವಿಡ್ -19 ಲಾಕ್ಡೌನ್ ಮತ್ತು ಗಾಯಗಳಿಂದಾಗಿ ಈ ವರ್ಷ ಕೇವಲ ಏಳು ಪಂದ್ಯಗಳನ್ನು ಆಡಿದ್ದ ಮರ್ರೆ, ಮೊದಲ ಪಂದ್ಯದಲ್ಲೇ ಉತ್ತಮ ಪ್ರದರ್ಶನ ತೋರಿದ್ದಾರೆ.
ನಾಲ್ಕು ದಿನಗಳ ಬ್ರಿಟ್ಸ್ ಪ್ರೀಮಿಯರ್ ಲೀಗ್ ಪಂದ್ಯಾವಳಿಯನ್ನು ಯುಕೆ ಟೆನಿಸ್ನ ಆಡಳಿತ ಮಂಡಳಿಯಾದ ಲಾನ್ ಟೆನಿಸ್ ಅಸೋಸಿಯೇಷನ್ ಆಯೋಜಿಸಿದೆ. ಇದು ಬ್ರಿಟಿಷ್ ಆಟಗಾರರಿಗೆ 2021ರ ಸೀಸನ್ಗೆ ಸಜ್ಜಾಗಲು ಸಹಾಯ ಮಾಡುವ ಗುರಿಯನ್ನು ಹೊಂದಿದೆ.