ETV Bharat / sports

ನಾಳೆಯಿಂದ ಯುಎಸ್​ ಓಪನ್​: ದಾಖಲೆ ಗ್ರ್ಯಾಂಡ್​ಸ್ಲಾಮ್​ನತ್ತ ವಿಲಿಯಮ್ಸ್​, ಜೊಕೋವಿಕ್​

ಟೆನ್ನಿಸ್​ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಪ್ರೇಕ್ಷಕರಿಲ್ಲದೆ ಟೂರ್ನಿ ಆರಂಭಗೊಳ್ಳುತ್ತಿದೆ. ಇನ್ನು ಟೂರ್ನಿಗೆ ಅತಿ ಹೆಚ್ಚು ಗ್ರ್ಯಾಂಡ್​ ಸ್ಲಾಮ್​ ವಿಜೇತರಾಗಿರುವ ರೋಜರ್​ ಫೆಡರರ್​ ಹಾಗೂ ರಾಫೆಲ್​ ನಡಾಲ್​ ಸಹಿತ ಟಾಪ್​ ರ್ಯಾಂಕ್​ ಆಟಗಾರರು ಗೈರಾಗಲಿರುವುದು ಟೂರ್ನಿಗೆ ತೀವ್ರವಾದ ಹಿನ್ನಡೆಯಾಗಲಿದೆ.

ಯುಎಸ್​ ಓಪನ್​
ಯುಎಸ್​ ಓಪನ್​
author img

By

Published : Aug 30, 2020, 7:32 PM IST

ನ್ಯೂಯಾರ್ಕ್: ಕೊರೊನಾದಿಂದ ಹೆಚ್ಚು ಹಾನಿಗೊಳಗಾಗಿರುವ ದೇಶವಾದ ಅಮೆರಿಕಾದಲ್ಲಿ ಪ್ರತಿಷ್ಠಿತ ಟೆನ್ನಿಸ್​ ಟೂರ್ನಿಯಾದ ಯುಎಸ್​ ಓಪನ್​ ಸೋಮವಾರದಿಂದ ಜೈವಿಕ ಸುರಕ್ಷತಾ ವಲಯದಲ್ಲಿ ಆರಂಭವಾಗಲಿದೆ.

ಟೆನ್ನಿಸ್​ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಪ್ರೇಕ್ಷಕರಿಲ್ಲದೆ ಟೂರ್ನಿ ಆರಂಭಗೊಳ್ಳುತ್ತಿದೆ. ಇನ್ನು ಟೂರ್ನಿಗೆ ಅತಿ ಹೆಚ್ಚು ಗ್ರ್ಯಾಂಡ್​ ಸ್ಲಾಮ್​ ವಿಜೇತರಾಗಿರುವ ರೋಜರ್​ ಫೆಡರರ್​ ಹಾಗೂ ರಾಫೆಲ್​ ನಡಾಲ್​ ಸಹಿತ ಟಾಪ್​ ರ್ಯಾಂಕ್​ ಆಟಗಾರರು ಗೈರಾಗಲಿರುವುದು ಟೂರ್ನಿಗೆ ತೀವ್ರವಾದ ಹಿನ್ನಡೆಯಾಗಲಿದೆ.

ನಿನ್ನೆಯಷ್ಟೇ ಕೊವಿಡ್​ ಮಹಾಮಾರಿಯ ನಡುವೆಯೇ ವೆಸ್ಟರ್ನ್ ಅಂಡ್​ ಸದರ್ನ್ಸ್​ ಮಾಸ್ಟರ್ಸ್​ 1000 ಟೂರ್ನಿಯನ್ನು ಯಶಸ್ವಿಯಾಗಿ ಅಮೆರಿಕಾದಲ್ಲಿ ನಡೆದಿರುವುದರಿಂದ ಯುಎಸ್​ ಓಪನ್​ ಆರಂಭಿಸಲು ಅಂಘಟಕರಿಗೆ ಹೆಚ್ಚು ಆತ್ಮ ವಿಶ್ವಾಸವನ್ನು ತಂದುಕೊಟ್ಟಿದೆ. ಈ ಗ್ರ್ಯಾಂಡ್​ಸ್ಲಾಮ್​ ಯಶಸ್ವಿಯಾಗಿ ಪೂರ್ಣಗೊಂಡರೆ ಕ್ರೀಡಾಲೋಕದಲ್ಲೆ ಕೊರೊನಾ ಹೊರತಾಗಿಯೂ ಯಶಸ್ವಿಯಾದ ಬೃಹತ್​ ಟೂರ್ನಮೆಂಟ್​ ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿದೆ.

ನೊವಾಕ್​ ಜೋಕೊವಿಕ್​
ನೊವಾಕ್​ ಜೋಕೊವಿಕ್​

ಟೂರ್ನಿಯಲ್ಲಿ ಸ್ಪೇನಿನ ರಾಫೆಲ್‌ ನಡಾಲ್‌, ಸ್ವಿಟ್ಜರ್​ಲೆಂಡ್​ನ ರೋಜರ್‌ ಫೆಡರರ್‌, ನಿಕ್‌ ಕಿರ್ಗಿಯೋಸ್‌, ಜಪಾನ್​ನ ಕೀ ನಿಶಿಕೊರಿ ಗೈರಾಗುತ್ತಿರುವ ಪ್ರಮುಖ ಪುರುಷ ಟೆನ್ನಿಸ್​ ಆಟಗಾರರಾದರೆ. ಮಹಿಳೆಯರ ವಿಭಾದದಲ್ಲಿ ಅಗ್ರ ರ್‍ಯಾಂಕಿಂಗ್‌ನ ಆ್ಯಶ್ಲೆ ಬಾರ್ಟಿ, 2ನೇ ಶ್ರೇಯಾಂಕದ ಆಟಗಾರ್ತಿ ಸಿಮೋನಾ ಹಾಲೆಪ್‌, ಎಲಿನಾ ಸ್ವಿಟೋಲಿನಾ, ಹಾಲಿ ಚಾಂಪಿಯನ್‌ ಬಿಯಾಂಕಾ ಆ್ಯಂಡ್ರಿಸ್ಕೂ, ಕಿಕಿ ಬರ್ಟೆನ್ಸ್‌ ಮುಂತಾದ ಸ್ಟಾರ್​ ಆಟಗಾರರ ಕೋವಿಡ್ ಭೀತಿಯಿಂದ ಹೊರಗುಳಿದಿದ್ದಾರೆ.

23 ಗ್ರ್ಯಾಂಡ್​ ಸ್ಲಾಮ್​ ಗೆದ್ದು 2 ನೇ ಸ್ಥಾನದಲ್ಲಿರುವ ಸೆರೆನಾ ವಿಲಿಯಮ್ಸ್​ ಇನ್ನೊಂದು ಗ್ರ್ಯಾಂಡ್​ ಸ್ಲಾಮ್​ ಗೆದ್ದರೆ ಸಾರ್ವಕಾಲಿಕ ದಾಖಲೆಯನ್ನು ಮಾರ್ಗರೇಟ್​ ಕೋರ್ಟ್​(24) ಅವರೊಂದಿಗೆ ಹಂಚಿಕೊಳ್ಳಲಿದ್ದಾರೆ.

ಕಳೆದ 7 ಅಮೆರಿಕಾ ಓಪನ್​ ಗ್ರಾನ್‌ಸ್ಲಾಮ್‌ನಲ್ಲಿ 5 ಬಾರಿ ಚಾಂಪಿಯನ್‌ ಆಗಿರುವ ಜೋಕೊವಿಕ್​ ಪುರುಷರ ವಿಭಾಗದಲ್ಲಿ ಪ್ರಶಸ್ತಿ ಗೆಲ್ಲುವ ನೆಚ್ಚಿನ ಆಟಗಾರರಾಗಿದ್ದಾರೆ. ಜೋಕೊವಿಕ್​ ಯುಎಸ್​ ಓಪನ್​ ಗೆದ್ದರೆ ಅವರ ಗ್ರ್ಯಾಂಡ್ಸ್​ಸ್ಲಾಮ್​ ಪ್ರಶಸ್ತಿ 18ಕ್ಕೆ ಏರಲಿದೆ. ಪ್ರಸ್ತುತ ರೋಜರ್​ ಫೆಡರರ್‌ (20) ಹಾಗೂ ರಾಫೆಲ್​ ನಡಾಲ್​ (19) ಅತಿ ಹೆಚ್ಚು ಗ್ರ್ಯಾಂಡ್​ಸ್ಲಾಮ್​ ಗೆದ್ದಿರುವ ಆಟಗಾರರಾಗಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.