ಶಾರ್ಜಾ: ಟಿ20 ವಿಶ್ವಕಪ್ ಟೂರ್ನಿಯ 19ನೇ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ದ ಪಾಕಿಸ್ತಾನವು 5 ವಿಕೆಟ್ಗಳ ಭರ್ಜರಿ ಜಯ ಸಾಧಿಸಿದೆ. ಕಿವೀಸ್ ಸೋಲುಂಡರೂ ಕೂಡ, ತಂಡದ ಆಟಗಾರ ಡೆವೊನ್ ಕಾನ್ವೆ ಅದ್ಭುತ ಕ್ಯಾಚ್ ಮೂಲಕ ಎಲ್ಲರನ್ನು ನಿಬ್ಬೆರಗಾಗಿಸಿದರು.
ನ್ಯೂಜಿಲೆಂಡ್ ತಂಡವು ಮೊದಲಿನಿಂದಲೂ ಕೂಡ ಅದ್ಭುತ ಕ್ಷೇತ್ರರಕ್ಷಣೆಗೆ ಹೆಸರುವಾಸಿಯಾಗಿದೆ. ತಂಡದಲ್ಲಿ ಪ್ರತಿಯೊಬ್ಬರೂ ಕೂಡ ಫೀಲ್ಡಿಂಗ್ನಲ್ಲಿ ಚಾತುರ್ಯತೆ ಹೊಂದಿದ್ದು, ಎದುರಾಳಿಗಳ ರನ್ ವೇಗಕ್ಕೆ ಕಡಿವಾಣ ಹಾಕುವ ಸಾಮರ್ಥ್ಯ ಹೊಂದಿದ್ದಾರೆ. ಅಂತೆಯೇ ಇತ್ತೀಚೆಗೆ ಸ್ಥಿರ ಪ್ರದರ್ಶನದಿಂದ ಕ್ರಿಕೆಟ್‌ಪ್ರಿಯರ ಗಮನ ಸೆಳೆದಿರುವ ನ್ಯೂಜಿಲೆಂಡ್ನ ಡೆವೊನ್ ಕಾನ್ವೆ ನಿನ್ನೆಯ ಪಂದ್ಯದಲ್ಲಿ ಚತುರ ಕ್ಷೇತ್ರರಕ್ಷಣೆಯಿಂದ ಪ್ರೇಕ್ಷಕರು ಹುಬ್ಬೇರಿಸುವಂತೆ ಮಾಡಿದರು.
- " class="align-text-top noRightClick twitterSection" data="
">
ಮಿಚೆಲ್ ಸ್ಯಾಂಟ್ನರ್ ಎಸೆದ 16ನೇ ಓವರ್ನ ಕೊನೆಯ ಎಸೆತವನ್ನು ಮೊಹಮದ್ ಹಫೀಜ್ ಮುಂದೆ ಬಂದು ಲಾಂಗ್ ಆಫ್ನತ್ತ ಬಲವಾಗಿ ಬಾರಿಸಿದ್ದರು. ಲಾಂಗ್ ಆಫ್ನಲ್ಲಿದ್ದ ಕಾನ್ವೆ, ಡೀಪ್ ಕವರ್ನತ್ತ ಓಡಿಬಂದು ಡೈವ್ ಮೂಲಕ ಕ್ಯಾಚ್ ಪಡೆಯುವಲ್ಲಿ ಯಶಸ್ವಿಯಾದರು. ಕಾನ್ವೆ ಕ್ಷೇತ್ರ ರಕ್ಷಣೆ ಶೈಲಿಗೆ ಬೆರಗಾದ ವೀಕ್ಷಕ ವಿವರಣೆಕಾರರು, 'ಕ್ಯಾಚ್ ಆಫ್ ದಿ ಟೂರ್ನಮೆಂಟ್' ಎಂದು ಬಣ್ಣಿಸಿದರು.
ಅಲ್ಲದೆ, ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಫುಲ್ ವೈರಲ್ ಆಗಿದ್ದು, ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ಬಾರಿಯ ಟಿ-20 ವಿಶ್ವಕಪ್ನ ಅತ್ಯುತ್ತಮ ಕ್ಯಾಚ್ ಎಂದು ಹೇಳಲಾಗುತ್ತಿದೆ.
ಇದನ್ನೂ ಓದಿ: ಬಂಟ್ವಾಳದಲ್ಲಿ ಬಿಜೆಪಿ ಮುಖಂಡನ ಕೊಲೆ ಯತ್ನ: 'ಹಲ್ಲೆ ತಡೆಯಲು ಬಂದವರಿಗೆ ಜೀವ ಬೆದರಿಕೆ'