ETV Bharat / sports

ಟಿ-20 ವಿಶ್ವಕಪ್: ವಿಂಡೀಸ್ ವಿರುದ್ಧ ಭರ್ಜರಿ ಜಯ ದಾಖಲಿಸಿದ ದಕ್ಷಿಣ ಆಫ್ರಿಕ

ಟಾಸ್ ಗೆದ್ದು ಮೊದಲು ಬೌಲಿಂಗ್ ಆಯ್ದುಕೊಂಡಿದ್ದ ಆಫ್ರಿಕ ಪಡೆ ವಿಂಡೀಸ್ ಬ್ಯಾಟ್ಸ್​​ಮನ್​ಗಳಿಗೆ ಅಬ್ಬರದ ಬ್ಯಾಟಿಂಗ್ ನಡೆಸಲು ಅವಕಾಶ ನೀಡದೇ 8 ವಿಕೆಟ್ ಉರುಳಿಸಿ ಕೇವಲ 143 ರನ್​​ಗಳಿಗೆ ಕಟ್ಟಿಹಾಕಿದ್ದರು.

South Africa wins against West Indies t-20 world cup match
ಟಿ-20 ವಿಶ್ವಕಪ್: ವಿಂಡೀಸ್ ವಿರುದ್ಧ ಭರ್ಜರಿ ಜಯ ದಾಖಲಿಸಿದ ದಕ್ಷಿಣ ಆಫ್ರಿಕಾ
author img

By

Published : Oct 26, 2021, 7:09 PM IST

ದುಬೈ: ಐಸಿಸಿ ಟಿ-20 ವಿಶ್ವಕಪ್​ನ ಸೂಪರ್​-12 ಹಂತದ ಗ್ರೂಪ್​​ 1ರ ದಕ್ಷಿಣ ಆಫ್ರಿಕ ಹಾಗೂ ವೆಸ್ಟ್​ ಇಂಡೀಸ್ ನಡುವಿನ ಪಂದ್ಯದಲ್ಲಿ ಹರಿಣಗಳ ಪಡೆ 8 ವಿಕೆಟ್​​ಗಳಿಂದ ಜಯದಾಖಲಿಸಿದೆ. 144 ರನ್​ಗಳ ಟಾರ್ಗೆಟ್ ನೀಡಿದ್ದ ವಿಂಡೀಸ್ ಪಡೆಗೆ ಮತ್ತೆ ಸೋಲಿನ ಆಘಾತವಾಗಿದ್ದು, ಟೂರ್ನಿಯಲ್ಲಿ 2ನೇ ಸೋಲು ಅನುಭವಿಸಿದೆ.

ಟಾಸ್ ಗೆದ್ದು ಮೊದಲು ಬೌಲಿಂಗ್ ಆಯ್ದುಕೊಂಡಿದ್ದ ಆಫ್ರಿಕಾ ಪಡೆ ವಿಂಡೀಸ್ ಬ್ಯಾಟ್ಸ್​​ಮನ್​ಗಳಿಗೆ ಅಬ್ಬರದ ಬ್ಯಾಟಿಂಗ್ ನಡೆಸಲು ಅವಕಾಶ ನೀಡದೇ 8 ವಿಕೆಟ್ ಉರುಳಿಸಿ ಕೇವಲ 143 ರನ್​​ಗಳಿಗೆ ಕಟ್ಟಿಹಾಕಿದ್ದರು.

ಈ ಮೊತ್ತ ಬೆನ್ನಟ್ಟಿದ ಆಫ್ರಿಕಾ ಪಡೆ ಆರಂಭದಲ್ಲೇ ನಾಯಕ ಟೆಂಬ ಬುವಂ 2 (3) ವಿಕೆಟ್ ಕಳೆದುಕೊಂಡು ಆಘಾತ ಅನುಭವಿಸಿತು. ಆದರೆ, ರೀಝಾ ಹೆನ್ರಿಕ್ಸ್​ 39 (30) ರನ್ ಗಳಿಸಿ ತಂಡಕ್ಕೆ ನೆರವಾದರು. ಈ ನಡುವೆ, 39 ರನ್ ಗಳಿಸಿದ್ದಾಗ ಹೊಸೆನ್​ಗೆ ವಿಕೆಟ್ ಒಪ್ಪಿಸಿದರು. ಇನ್ನೊಂದೆಡೆ ದುಸ್ಸೆನ್ ಹಾಗೂ ಮಾರ್ಕ್ರಾಮ್ ತಂಡವನ್ನ ಗೆಲುವಿನ ದಡ ಸೇರಿಸಲು ಜವಾಬ್ದಾರಿಯುತ ಬ್ಯಾಟಿಂಗ್ ನಡೆಸಿದರು.

ವಿಂಡೀಸ್ ಬೌಲರ್​ಗಳ ವಿರುದ್ಧ ಅಬ್ಬರಿಸಿದ ಮರ್ಕ್ರಾಮ್ 4 ಸಿಕ್ಸರ್​ಗಳ ನೆರವಿನಿಂದಾಗಿ ಭರ್ಜರಿ ಅರ್ಧ ಶತಕ ಗಳಿಸಿದರು. 26 ಎಸೆತದಲ್ಲಿ 51 ರನ್​ಗಳಿಸಿದರೆ ಇತ್ತ ದುಸ್ಸೆನ್ 43 (51) ರನ್​​​ ಗಳಿಸಿದರು.

ಅಂತಿಮವಾಗಿ ಆಫ್ರಿಕಾ ತಂಡ 10 ಬಾಲ್ ಬಾಕಿ ಇರುವಂತೆಯೇ ನಿಗದಿತ ಗುರಿ ತಲುಪಿದ್ದು, ಈ ಮೂಲಕ ಟೂರ್ನಿಯಲ್ಲಿ ಗೆಲುವಿನ ಖಾತೆ ಆರಂಭಿಸಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.