ದುಬೈ: ಐಸಿಸಿ ಟಿ20 ವಿಶ್ವಕಪ್ನ ಸೆಮಿಫೈನಲ್ನಲ್ಲಿ (ICC T20 SemiFinal Match) ಇಂಗ್ಲೆಂಡ್ ವಿರುದ್ಧ ಭರ್ಜರಿ ಗೆಲುವು ದಾಖಲಿಸಿರುವ ನ್ಯೂಜಿಲ್ಯಾಂಡ್ (England vs New Zealand) ಇದೇ ಮೊದಲ ಸಲ ಫೈನಲ್ಗೆ ಲಗ್ಗೆ ಹಾಕಿದೆ.
ಈ ಪಂದ್ಯ ಮುಕ್ತಾಯದ ಬಳಿಕ ತಂಡದ ಬಹುತೇಕ ಎಲ್ಲ ಆಟಗಾರರು ಡಗೌಟ್ನಲ್ಲಿ ಕುಳಿತುಕೊಂಡು ಸಂಭ್ರಮಿಸುತ್ತಿದ್ದರು. ಆದರೆ ಬ್ಯಾಟರ್ ಜೇಮ್ಸ್ ನಿಶಾಮ್ ಮಾತ್ರ ಈ ಸಂಭ್ರಮದಲ್ಲಿ ಭಾಗಿಯಾಗಿರಲಿಲ್ಲ. ಇವರ ನಡೆ ಕ್ರಿಕೆಟ್ ಪ್ರೇಮಿಗಳಲ್ಲಿ ಅಚ್ಚರಿ ಮೂಡಿಸಿತ್ತು.
ನಿನ್ನೆಯ ಪಂದ್ಯದಲ್ಲಿ ಕೇವಲ 11 ಎಸೆತಗಳಲ್ಲಿ 27 ರನ್ಗಳಿಕೆ ಮಾಡಿ ಕೊನೆ ಕ್ಷಣದಲ್ಲಿ ಜೇಮ್ಸ್ ನಿಶಾಮ್ (James Neesham) ವಿಕೆಟ್ ಒಪ್ಪಿಸಿದ್ದರು. ಇದಾದ ಬಳಿಕ ಕಣಕ್ಕಿಳಿದಿದ್ದ ಮಿಚೆಲ್ ಸ್ಫೋಟಕ ಆಟವಾಡಿ ತಂಡವನ್ನು ಫೈನಲ್ಗೆ ತೆಗೆದುಕೊಂಡು ಹೋಗಿದ್ದರು. ನ್ಯೂಜಿಲ್ಯಾಂಡ್ ಫೈನಲ್ಗೆ ಲಗ್ಗೆ ಹಾಕುತ್ತಿದ್ದಂತೆ ಡಗೌಟ್ನಲ್ಲಿ ಕುಳಿತುಕೊಂಡಿದ್ದ ನ್ಯೂಜಿಲ್ಯಾಂಡ್ನ ಎಲ್ಲ ಪ್ಲೇಯರ್ಸ್, ಸಿಬ್ಬಂದಿ ವರ್ಗ ಸಂತೋಷದಿಂದ ಕುಣಿದಾಡುತ್ತಿದ್ದರು. ಆದರೆ ನಿಶಾಮ್ ಮಾತ್ರ ಸುಮ್ಮನೆ ಕುಳಿತುಕೊಂಡಿದ್ದರು.
-
Job finished? I don’t think so. https://t.co/uBCLLUuf6B
— Jimmy Neesham (@JimmyNeesh) November 10, 2021 " class="align-text-top noRightClick twitterSection" data="
">Job finished? I don’t think so. https://t.co/uBCLLUuf6B
— Jimmy Neesham (@JimmyNeesh) November 10, 2021Job finished? I don’t think so. https://t.co/uBCLLUuf6B
— Jimmy Neesham (@JimmyNeesh) November 10, 2021
ಇದನ್ನೂ ಓದಿ: T20 World Cup: ಆಸ್ಟ್ರೇಲಿಯಾ ವಿರುದ್ಧದ ಸೆಮಿಫೈನಲ್ ಪಂದ್ಯಕ್ಕೆ ರಿಜ್ವಾನ್, ಶೋಯೆಬ್ ಫಿಟ್
ಈ ವಿಚಾರಕ್ಕೆ ಸಂಬಂಧಿಸಿದಂತೆ ಇದೀಗ ಪ್ರತಿಕ್ರಿಯೆ ನೀಡಿರುವ ನಿಶಾಮ್, ಕರ್ತವ್ಯ ಮುಕ್ತಾಯಗೊಂಡಿತೇ? ನನಗೆ ಹಾಗೇ ಅನಿಸುತ್ತಿಲ್ಲ (Job finished? I don’t think so) ಎಂದು ಬರೆದುಕೊಂಡಿದ್ದಾರೆ. ಐಸಿಸಿ ಟಿ20 ವಿಶ್ವಕಪ್ (ICC T20 World Cup)ನಲ್ಲಿ ಲೀಗ್ ಹಂತದಲ್ಲಿ ಪಾಕ್ ವಿರುದ್ಧ ಸೋಲು ಕಂಡಿದ್ದ ನ್ಯೂಜಿಲ್ಯಾಂಡ್ ತಂಡ ತಂದನಂತರ ಭರ್ಜರಿಯಾಗಿ ಕಮ್ಬ್ಯಾಕ್ ಮಾಡಿ, ಭಾರತ ಸೇರಿದಂತೆ ಅನೇಕ ತಂಡಗಳಿಗೆ ಸೋಲಿನ ರುಚಿ ತೋರಿಸಿ, ಇದೀಗ ಫೈನಲ್ಗೆ ಬಂದು ನಿಂತಿದೆ.
ಇಂದು ನಡೆಯುವ ಮತ್ತೊಂದು ಸೆಮಿಫೈನಲ್ ಪಂದ್ಯದಲ್ಲಿ ಪಾಕಿಸ್ತಾನ-ಆಸ್ಟ್ರೇಲಿಯಾ ಖಾಮುಖಿಯಾಗುತ್ತಿದ್ದು, ಗೆಲುವು ಸಾಧಿಸುವ ತಂಡದೊಂದಿಗೆ ಕಿವೀಸ್ ಎದುರು ಸೆಣಸಲಿದೆ.