ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಸಕ್ರಿಯರಾಗಿರುವ ಭಾರತದ ಮಾಜಿ ಕ್ರಿಕೆಟಿಗ, ಸಿಕ್ಸರ್ ಕಿಂಗ್ ಯುವರಾಜ್ ಸಿಂಗ್, ದುಬೈನ 'ಫೇಮ್ ಪಾರ್ಕ್'ನಲ್ಲಿ ಪ್ರಾಣಿಗಳೊಂದಿಗೆ ಮಸ್ತಿ ಮಾಡುತ್ತಿರುವ ವಿಡಿಯೋವನ್ನು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಪೋಸ್ಟ್ ಮಾಡಿರೋದು ಸಖತ್ ವೈರಲ್ ಆಗಿದೆ.
'ಟೈಗರ್ ವರ್ಸಸ್ ಲೈಗರ್' ಎಂಬ ಶೀರ್ಷಿಕೆಯೊಂದಿಗೆ ಯುವಿ ಹಂಚಿಕೊಂಡಿರುವ ವಿಡಿಯೋದಲ್ಲಿ ಯುವರಾಜ್ ಸಿಂಗ್ ತನ್ನ ಇಬ್ಬರು ಸ್ನೇಹಿತರೊಂದಿಗೆ ಲೈಗರ್ ಜೊತೆ ಟಗ್ ಆಫ್ ವಾರ್ ಆಡುತ್ತಿದ್ದಾರೆ. "ಟೈಗರ್ ವರ್ಸಸ್ ಲೈಗರ್, ಆದರೆ ಅಂತಿಮ ಫಲಿತಾಂಶವು ನನ್ನ ಭಯವನ್ನು ಮೀರಿ ಒಂದು ಸುಂದರ ಅನುಭವವನ್ನು ಪಡೆದುಕೊಂಡಿದೆ, ಕಾಡಿನ ನೈಜ ರೂಪದೊಂದಿಗೆ ಸಂವಹನ ನಡೆಸುತ್ತಿದೆ" ಎಂದು ಯುವಿ ಬರೆದುಕೊಂಡಿದ್ದಾರೆ.
- " class="align-text-top noRightClick twitterSection" data="
">
ಇದೇ ವಿಡಿಯೋದಲ್ಲಿ ಭಾರತ ಕ್ರಿಕೆಟ್ ತಂಡದ ಮಾಜಿ ಆಲ್ರೌಂಡರ್ ಯುವರಾಜ್ ಸಿಂಗ್, ದೊಡ್ಡ ಹಾವೊಂದನ್ನು ಕುತ್ತಿಗೆಗೆ ಹಾಕಿಕೊಂಡಿರುವುದು, ಕರಡಿ, ಮಂಗ ಮತ್ತು ಇತರ ಕಾಡು ಪ್ರಾಣಿಗಳಿಗೆ ಆಹಾರವನ್ನು ನೀಡುತ್ತಿರುವುದು ಕಂಡು ಬಂದಿದೆ.
"ಫೇಮ್ ಪಾರ್ಕ್-ಇದು ಎಲ್ಲಾ ಪ್ರಾಣಿಗಳನ್ನು ನೋಡಿಕೊಳ್ಳುವ ಮತ್ತು ಸುರಕ್ಷಿತ ವಾತಾವರಣದಲ್ಲಿ ಒದಗಿಸುವ ಸುರಕ್ಷಿತ ಧಾಮವಾಗಿದೆ. ಆರೈಕೆದಾರರು ಕೂಡ ಉತ್ತಮ ತರಬೇತಿ ಹೊಂದಿದ್ದಾರೆ ಮತ್ತು ಸಜ್ಜುಗೊಳಿಸಿದ್ದಾರೆ. ಈ ವಿಡಿಯೋ ಚಿತ್ರೀಕರಣದ ಸಮಯದಲ್ಲಿ ಯಾವುದೇ ಪ್ರಾಣಿಗಳಿಗೆ ತೊಂದರೆಯಾಗಿಲ್ಲ" ಎಂದು ಯುವಿ ಹೇಳಿದ್ದಾರೆ.