ETV Bharat / sports

ಡಬ್ಲ್ಯುಎಫ್‌ಐ ಅಧ್ಯಕ್ಷರ ವಿರುದ್ಧ ದಾಖಲಾಗದ ಎಫ್‌ಐಆರ್: ಜಂತರ್ ಮಂತರ್‌ನಲ್ಲಿ ಕುಸ್ತಿಪಟುಗಳ ಪ್ರತಿಭಟನೆ

ವ್ರೆಸ್ಲಿಂಗ್ ಫೆಡರೇಶನ್ ಆಫ್ ಇಂಡಿಯಾ (ಡಬ್ಲ್ಯುಎಫ್‌ಐ) ಮುಖ್ಯಸ್ಥ ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧ ಎಫ್​ಐಆರ್​ ದಾಖಲಿಸುವಂತೆ ಒತ್ತಾಯಿಸಿ ಜಂತರ್ ಮಂತರ್‌ನಲ್ಲಿ ಮತ್ತೆ ಕುಸ್ತಿಪಟುಗಳು ಪ್ರತಿಭಟನೆ ಆರಂಭಿಸಿದ್ದಾರೆ.

wrestlers protest at Jantar Mantar for No FIR filed against WFI President
ಡಬ್ಲ್ಯುಎಫ್‌ಐ ಅಧ್ಯಕ್ಷರ ವಿರುದ್ಧ ದಾಖಲಾಗದ ಎಫ್‌ಐಆರ್: ಜಂತರ್ ಮಂತರ್‌ನಲ್ಲಿ ಕುಸ್ತಿಪಟುಗಳ ಪ್ರತಿಭಟನೆ
author img

By

Published : Apr 23, 2023, 7:12 PM IST

ನವದೆಹಲಿ: ಮೂರು ತಿಂಗಳ ಕಾಲ ಕಾದ ನಂತರ ಸ್ಟಾರ್ ಕುಸ್ತಿಪಟುಗಳು ವ್ರೆಸ್ಲಿಂಗ್ ಫೆಡರೇಶನ್ ಆಫ್ ಇಂಡಿಯಾ (ಡಬ್ಲ್ಯುಎಫ್‌ಐ) ಮುಖ್ಯಸ್ಥ ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧ ಭಾನುವಾರ ಮತ್ತೆ ತಮ್ಮ ಪ್ರತಿಭಟನೆಯನ್ನು ಪ್ರಾರಂಭಿಸಿದ್ದಾರೆ. ದೂರು ನೀಡಿದರೂ ಡಬ್ಲ್ಯುಎಫ್‌ಐ ಮುಖ್ಯಸ್ಥ ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧ ಎಫ್​ಐಆರ್​ ದಾಖಲಾಗದ ಹಿನ್ನೆಲೆಯಲ್ಲಿ ಮತ್ತೆ ಪ್ರತಿಭಟಿಸುತ್ತಿರುವುದಾಗಿ ಹೇಳಿದ್ದಾರೆ.

  • Delhi | It's been 3 months, and we haven't got justice, that's why we are protesting again. We demand justice, FIR has not been registered yet. We are grateful that DCW is supporting us: Wrestler Vinesh Phogat on DCW's notice to Delhi Police for reportedly failing to register FIR… https://t.co/j7gWJNeeBn pic.twitter.com/cvSyCTV3JF

    — ANI (@ANI) April 23, 2023 " class="align-text-top noRightClick twitterSection" data=" ">

ಕುಸ್ತಿಪಟುಗಳಾದ ವಿನೇಶ್ ಫೋಗಟ್, ಸಾಕ್ಷಿ ಮಲಿಕ್ ಮತ್ತು ಬಜರಂಗ್ ಪುನಿಯಾ ಅವರು ನವದೆಹಲಿಯ ಜಂತರ್ ಮಂತರ್‌ನಲ್ಲಿ ಕುಸ್ತಿ ಫೆಡರೇಶನ್ ಆಫ್ ಇಂಡಿಯಾ (ಡಬ್ಲ್ಯುಎಫ್‌ಐ) ವಿರುದ್ಧ ತಮ್ಮ ಪ್ರತಿಭಟನೆಯನ್ನು ಪುನರಾರಂಭಿಸಿದ್ದಾರೆ. ಜಂತರ್ ಮಂತರ್‌ನಲ್ಲಿ ಕುಸ್ತಿಪಟುಗಳು ಪ್ರತಿಭಟನೆ ನಡೆಸುತ್ತಿರುವಾಗ ಸಾಕ್ಷಿ ಮಲಿಕ್ ಮಾಧ್ಯಮಗಳೊಂದಿಗೆ ಮಾತನಾಡಿ," ನಾವು ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧ ಲೈಂಗಿಕ ಕಿರುಕುಳದ ಎಫ್‌ಐಆರ್ ದಾಖಲಿಸಲು ಬಯಸಿದ್ದೇವೆ. ಎರಡು ದಿನಗಳ ಹಿಂದೆ ನಾವು ದೂರು ದಾಖಲಿಸಿದ್ದೇವೆ. ಆದರೆ, ಇನ್ನೂ ಎಫ್‌ಐಆರ್ ದಾಖಲಾಗಿಲ್ಲ. 7 ಮಹಿಳಾ ಕುಸ್ತಿಪಟುಗಳಿದ್ದಾರೆ ಮತ್ತು ಅವರಲ್ಲಿ ಒಬ್ಬರು ಅಪ್ರಾಪ್ತರಾಗಿದ್ದಾರೆ" ಎಂದರು.

  • #WATCH |Seven girls including a minor gave a complaint at CP PS against Brijbhushan Singh regarding sexual harassment but yet to be filed.There must be POCSO case. We've been waiting for 2.5 months...:Wrestlers protest against then WFI chief & BJP strongman Brij Bhushan Singh pic.twitter.com/SvAvSk9hNz

ಇದು ಸೂಕ್ಷ್ಮ ವಿಷಯ, ತನಿಖೆಯನ್ನು ನಾವು ಬಯಸುತ್ತೇವೆ. ನಮ್ಮ ಆರೋಪವನ್ನು ಸುಳ್ಳು ಎಂದು ಬಿಂಬಿಸಲಾಗುತ್ತಿದೆ. ಎರಡೂವರೆ ತಿಂಗಳಿಂದ ಕಾಯುತ್ತಿದ್ದರೂ ಯಾರೂ ಕೇಳುತ್ತಿಲ್ಲ. ನಾವು ಅಪ್ರಾಪ್ತರ ಹೆಸರು ಬಹಿರಂಗಪಡಿಸಲು ಸಾಧ್ಯವಿಲ್ಲ. ಆಕೆಯ ಹೆಸರು ಮತ್ತು ವೃತ್ತಿ ಹಾಳಾಗುತ್ತದೆ. ನಾವು ಕಾಮನ್ವೆಲ್ತ್ ಗೇಮ್ಸ್ 2022 ರಲ್ಲಿ ಪದಕ ಗೆದ್ದಿದ್ದೇವೆ ಎಂದು ಸಾಕ್ಷಿ ಮಲಿಕ್ ಜಂತರ್ ಮಂತರ್‌ನಲ್ಲಿ ಮಾಧ್ಯಮಗಳಿಗೆ ತಿಳಿಸಿದರು.

  • #WATCH | "We have been going through mental torture, it's about the respect of women athletes...We aren't receiving any response from Sports Ministry, it's been 3 months": Wrestlers protest against then WFI chief and BJP strongman Brijbhushan Singh pic.twitter.com/44qfs8APbs

ಬಜರಂಗ್ ಪೂನಿಯಾ, ವಿನೇಶ್ ಫೋಗಟ್, ರವಿ ದಹಿಯಾ ಮತ್ತು ಸಾಕ್ಷಿ ಮಲಿಕ್ ಸೇರಿದಂತೆ ಭಾರತದ ಪ್ರಮುಖ ಕುಸ್ತಿಪಟುಗಳು ಈ ವರ್ಷದ ಜನವರಿಯಲ್ಲಿ ಜಂತರ್ ಮಂತರ್‌ನಲ್ಲಿ ಧರಣಿ ಪ್ರತಿಭಟನೆ ನಡೆಸಿದರು. ಬ್ರಿಜ್ ಭೂಷಣ್ ಅವರನ್ನು ಕೇಂದ್ರ ಕಚೇರಿಯಿಂದ ತೆಗೆದುಹಾಕಬೇಕು ಮತ್ತು ರೆಸ್ಲಿಂಗ್ ಫೆಡರೇಶನ್ ಆಫ್ ಇಂಡಿಯಾವನ್ನು ವಿಸರ್ಜಿಸಬೇಕೆಂದು ಒತ್ತಾಯಿಸಿದರು. ಅವರು ಸಂಸ್ಥೆ ಮತ್ತು ಅದರ ಮುಖ್ಯಸ್ಥರು ಲೈಂಗಿಕ ಕಿರುಕುಳ ಮತ್ತು ಕುಸ್ತಿಪಟುಗಳ ಜೊತೆ ದುರ್ವರ್ತನೆಯ ಬಗ್ಗೆ ಆರೋಪಿಸಿದ್ದರು.

ಈ ವರ್ಷದ ಜನವರಿಯಲ್ಲಿ ಕುಸ್ತಿ ಫೆಡರೇಶನ್ ಆಫ್ ಇಂಡಿಯಾ (ಡಬ್ಲ್ಯುಎಫ್‌ಐ) ವಿರುದ್ಧ ಕುಸ್ತಿ ಪಟುಗಳು ಪ್ರತಿಭಟಿಸಿದರು. ಪ್ರತಿಭಟನೆಯ ನಂತರ, ಜನವರಿಯಲ್ಲಿ ಕೇಂದ್ರ ಯುವ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯವು ಕುಸ್ತಿ ಫೆಡರೇಶನ್ ಆಫ್ ಇಂಡಿಯಾ (ಡಬ್ಲ್ಯುಎಫ್‌ಐ) ಮತ್ತು ಅದರ ಮುಖ್ಯಸ್ಥ ಬ್ರಿಜ್ ಭೂಷಣ್ ಶರಣ್ ಸಿಂಗ್ ಮತ್ತು ಇತರ ತರಬೇತುದಾರರ ವಿರುದ್ಧದ ಆರೋಪಗಳನ್ನು ತನಿಖೆ ಮಾಡಲು 'ಮೇಲ್ವಿಚಾರಣಾ ಸಮಿತಿ' ರಚನೆ ಮಾಡಿತು. ಸಮಿತಿಗೆ ಸಮಸ್ಯೆಯ ಕುರಿತು ವರದಿಯನ್ನು ಸಚಿವಾಲಯಕ್ಕೆ ಸಲ್ಲಿಸುವ ಕಾರ್ಯವನ್ನು ನೀಡಲಾಯಿತು.

  • #WATCH | Delhi: Wrestlers Vinesh Phogat and Sakshi Malik break down while interacting with the media as they protest against WFI chief Brij Bhushan Singh pic.twitter.com/OVsWDp2YuA

ಒಲಿಂಪಿಕ್ ಪದಕ ವಿಜೇತೆ ಮೇರಿ ಕೋಮ್ ಉಸ್ತುವಾರಿ ಸಮಿತಿಯ ಮುಖ್ಯಸ್ಥರಾಗಿದ್ದಾರೆ. ಮಾಜಿ ಕುಸ್ತಿಪಟು ಯೋಗೇಶ್ವರ್ ದತ್, ಮಾಜಿ ಶಟ್ಲರ್ ತೃಪ್ತಿ ಮುರ್ಗುಂಡೆ, ಸಾಯ್ ಸದಸ್ಯೆ ರಾಧಿಕಾ ಶ್ರೀಮನ್, ಟಾರ್ಗೆಟ್ ಒಲಿಂಪಿಕ್ ಪೋಡಿಯಂ ಯೋಜನೆಯ ಮಾಜಿ ಸಿಇಒ ರಾಜೇಶ್ ರಾಜಗೋಪಾಲನ್ ಮತ್ತು ಸಿಡಬ್ಲ್ಯೂಜಿ ಚಿನ್ನದ ಪದಕ ವಿಜೇತೆ ಬಬಿತಾ ಫೋಗಟ್ ಮೇರಿ ಕೋಮ್ ನೇತೃತ್ವದ ಸಮಿತಿಯ ಇತರ ಸದಸ್ಯರಾಗಿದ್ದರು.

ಪುನಿಯಾ ಮಾತನಾಡಿ,"ಸಮಿತಿಯ ಸದಸ್ಯರಲ್ಲಿ ಒಬ್ಬರು ತಮ್ಮ ಸಹಿ ಇಲ್ಲದೆ ವರದಿಯನ್ನು ಕ್ರೀಡಾ ಸಚಿವಾಲಯಕ್ಕೆ ಸಲ್ಲಿಸಲಾಗಿದೆ ಎಂದು ಹೇಳುವ ಲೇಖನವನ್ನು ನಾನು ಓದಿದ್ದೇನೆ. ಸದಸ್ಯರೂ ವರದಿಯೊಂದಿಗೆ ತಮ್ಮ ಅಸಮ್ಮತಿ ವ್ಯಕ್ತಪಡಿಸಿದ್ದಾರೆ. ಸಮಿತಿಯ ಸದಸ್ಯರು ವರದಿ ಸಲ್ಲಿಕೆ ವೇಳೆ ಭಾಗಿಯಾಗಿಲ್ಲ ಮತ್ತು ವರದಿಯನ್ನು ಅವರೇ ಒಪ್ಪುವುದಿಲ್ಲ, ನಾವು ಅದನ್ನು ಹೇಗೆ ನಂಬಬೇಕು?, ವರದಿಯನ್ನು ಸಚಿವಾಲಯಕ್ಕೆ ಸಲ್ಲಿಸಲಾಗಿದೆ ಎಂದು ನಮಗೆ ತಿಳಿಸಲಾಗಿಲ್ಲ. ನಾವು ನಮ್ಮ ಕ್ರೀಡೆಯನ್ನು ಮುಂದುವರಿಸಬೇಕಾಗಿದೆ. ಆದರೆ ನಾವು ಪ್ರತಿಭಟಿಸುತ್ತೇವೆ ಮತ್ತು ಸಾಧ್ಯವಾದಷ್ಟು ಬೇಗ ಹೈಕೋರ್ಟ್‌ಗೆ ಹೋಗುತ್ತೇವೆ" ಎಂದು ಅವರು ಹೇಳಿದರು.

ಇದನ್ನೂ ಓದಿ: ನಿನ್ನೆ ಅರ್ಷದೀಪ್​ ಮುರಿದ ವಿಕೆಟ್​ನ ಬೆಲೆ ಎಷ್ಟು ನಿಮಗೆ ಗೊತ್ತೇ?

ETV Bharat Logo

Copyright © 2024 Ushodaya Enterprises Pvt. Ltd., All Rights Reserved.