ಸೋನಿಪತ್: ಕುಸ್ತಿಪಟು ಸಾಗರ್ ರಾಣಾ ಕೊಲೆಗೆ ಸಂಬಂಧಿಸಿದಂತೆ ಒಲಿಂಪಿಕ್ ಪದಕ ವಿಜೇತ ಕುಸ್ತಿಪಟು ಸುಶೀಲ್ ಕುಮಾರ್ ಅವರನ್ನು 18 ದಿನಗಳ ನಂತರ ಪೊಲೀಸರು ಬಂಧಿಸಿದ್ದಾರೆ.
ಈಗಾಗಲೇ ನ್ಯಾಯಾಲಯ ಅವರನ್ನು 6 ದಿನಗಳ ಪೊಲೀಸ್ ಕಸ್ಟಡಿಗೆ ವಿಚಾರಣೆಗಾಗಿ ಒಪ್ಪಿಸಿದೆ. ಈ ಸಂದರ್ಭದಲ್ಲಿ 'ಈಟಿವಿ ಭಾರತ' ಜೊತೆಗೆ ಮಾತನಾಡಿರುವ ಮೃತ ಕುಸ್ತಿಪಟುವಿನ ತಂದೆ ಹಾಗೂ ನಿವೃತ್ತ ದೆಹಲಿ ಪೊಲೀಸ್ ಅಧಿಕಾರಿಯಾರಿಯಾಗಿರುವ ಆಶೋಕ್ ಧಾಂಖರ್- "ನಮಗೆ ನ್ಯಾಯ ಸಿಗಬೇಕು, ದೆಹಲಿ ಪೊಲೀಸರ ಮೇಲೆ ವಿಶ್ವಾಸವಿದೆ." ಎಂದಿದ್ದಾರೆ.
ಸಾಗರ್ ತಾಯಿ ಸವಿತಾ ಧಾಂಖರ್ ಮಾತನಾಡಿ, "ಆರೋಪಿ ಸುಶೀಲ್ ಕುಮಾರ್ಗೆ ಮರಣದಂಡನೆ ಶಿಕ್ಷೆಯಾಗಬೇಕು. ಜೊತೆಗೆ ಸುಶೀಲ್ ಪಡೆದಿರುವ ಎಲ್ಲಾ ಮೆಡಲ್ ಮತ್ತು ಗೌರವಾನ್ವಿತ ಪ್ರಶಸ್ತಿಗಳನ್ನು ವಾಪಸ್ ಪಡೆಯಬೇಕು. ಸ್ಟೇಡಿಯಂನಿಂದ ಮತ್ತು ಕುಸ್ತಿ ಕ್ರೀಡಾ ವಿಭಾಗದಿಂದ ಸುಶೀಲ್ ಕುಮಾರ್ರನ್ನು ತೆಗೆದು ಹಾಕಬೇಕು." ಎಂದು ಹೇಳಿದ್ದಾರೆ.
ಪೊಲೀಸರ ವರದಿ ಪ್ರಕಾರ ಮೇ 4 ರಂದು ಸುಶೀಲ್ ಕುಮಾರ್ ಮತ್ತು ಅವರ ಸಹಚರರು ಛತ್ರಸಾಲ್ ಸ್ಟೇಡಿಯಂಗೆ ಸಾಗರ್ ಮತ್ತು ಅವರ ಸ್ನೇಹಿತರನ್ನು ಕರೆತಂದು ಹಲ್ಲೆ ಮಾಡಿದ್ದಾರೆ. ಘಟನೆಯಲ್ಲಿ ಸಾಗರ್ ಮೃತಪಟ್ಟರೆ, ಸ್ನೇಹಿತರು ಗಾಯಗೊಂಡಿದ್ದರು. ಸಾಗರ್ ಮೃತಪಟ್ಟ ನಂತರ ಸುಶೀಲ್ ಕುಮಾರ್ ನಾಪತ್ತೆಯಾಗಿದ್ದರು. ಕೊನೆಗೆ ಮೇ 23ರಂದು ದೆಹಲಿ ಪೊಲೀಸರಿಂದ ಬಂಧನವಾಗಿದ್ದರು.
ಇದನ್ನು ಓದಿ:ಸಾಗರ್ ರಾಣಾ ಕೊಲೆ ಪ್ರಕರಣ: 6 ದಿನಗಳ ಪೊಲೀಸ್ ಕಸ್ಟಡಿಗೆ ಕುಸ್ತಿಪಟು ಸುಶೀಲ್ ಕುಮಾರ್