ETV Bharat / sports

ಭಾರತದ ಕೀರ್ತಿ ಪತಾಕೆ ಹಾರಿಸಿದ 94ರ ವೃದ್ಧೆ: ವಿಶ್ವ ಮಾಸ್ಟರ್ಸ್​ ಅಥ್ಲೆಟಿಕ್ಸ್​​ನಲ್ಲಿ ಚಿನ್ನ,ಕಂಚು ಗೆದ್ದ ಭಗವಾನಿ - ಚಿನ್ನ ಗೆದ್ದ ಭಗವಾನಿ ದೇವಿ

ಫಿನ್​ಲ್ಯಾಂಡ್​ನಲ್ಲಿ ನಡೆದ ವಿಶ್ವ ಮಾಸ್ಟರ್ಸ್​ ಅಥ್ಲೆಟಿಕ್ಸ್​​ನಲ್ಲಿ ಭಾಗಿಯಾಗಿದ್ದ ಭಾರತದ 94 ವರ್ಷದ ವೃದ್ಧೆ ಓಟದಲ್ಲಿ ಚಿನ್ನದ ಪದಕ ಗೆದ್ದಿದ್ದಾರೆ.

Bhagwani Devi Dagar
Bhagwani Devi Dagar
author img

By

Published : Jul 11, 2022, 3:22 PM IST

ಫಿನ್​ಲ್ಯಾಂಡ್​: ಸಾಧನೆ ಮಾಡಬೇಕು ಎಂಬ ಛಲ, ಉತ್ಸಾಹ ಇದ್ದರೆ ಯಾವುದೇ ವಯಸ್ಸಿನಲ್ಲಾದರೂ ಇತಿಹಾಸ ಸೃಷ್ಟಿ ಮಾಡಬಹುದು. ಅಂತಹ ಅನೇಕ ನಿದರ್ಶನಗಳು ಈಗಾಗಲೇ ನಮ್ಮ ಕಣ್ಮುಂದೆ ಇವೆ. ಅದಕ್ಕೆ ಮತ್ತೊಂದು ಉದಾಹರಣೆ ಎಂಬ ರೀತಿಯಲ್ಲಿ 94 ವರ್ಷದ ಭಗವಾನಿ ದೇವಿ ಫಿನ್​​ಲ್ಯಾಂಡ್​ನಲ್ಲಿ ಭಾರತದ ಕೀರ್ತಿ ಪತಾಕೆ ಹಾರಿಸಿದ್ದಾರೆ.

ಫಿನ್​ಲ್ಯಾಂಡ್​ನ ಟಂಪೆರೆ ಎಂಬಲ್ಲಿ ನಡೆದ ವಿಶ್ವ ಮಾಸ್ಟರ್ಸ್​​ ಅಥ್ಲೆಟಿಕ್ಸ್ ಚಾಂಪಿಯನ್​ಶಿಪ್​​ನಲ್ಲಿ ಭಾಗಿಯಾಗಿದ್ದ ಹರಿಯಾಣದ ಖಿಡ್ಕಾ ಗ್ರಾಮದ ನಿವಾಸಿ ಭಗವಾನಿ ದೇವಿ(94ವರ್ಷ) 100 ಮೀಟರ್​ ಓಟದಲ್ಲಿ ಚಿನ್ನದ ಪದಕ ಗೆದ್ದಿದ್ದು, ಶಾಟ್​​ಪುಟ್​​ನಲ್ಲಿ ಕಂಚಿನ ಪದಕಕ್ಕೆ ಕೊರಳೊಡಿದ್ದಾರೆ.

ಭಗವಾನಿ ದೇವಿ ಅವರ ಮೊಮ್ಮಗ ವಿಕಾಸ್ ಅಂತಾರಾಷ್ಟ್ರೀಯ ಪ್ಯಾರಾ ಅಥ್ಲೀಟ್​​ ಆಗಿದ್ದಾರೆ. ಆದರೆ, ಫಿನ್​ಲ್ಯಾಂಡ್​​ನಲ್ಲಿ ನಡೆದ ಸ್ಪರ್ಧೆಯಲ್ಲಿ 94ರ ಭಗವಾನಿ ದೇವಿ ಈ ಸಾಧನೆ ಮಾಡಿದ್ದು, ಇದೀಗ ಭಾರತದ ಕೀರ್ತಿ ಮತ್ತಷ್ಟು ಉತ್ತುಂಗಕ್ಕೆ ಒಯ್ದಿದ್ದಾರೆ. ಕೇವಲ 24.74 ಸೆಕೆಂಡುಗಳಲ್ಲಿ 100 ಮೀಟರ್ ಗುರಿ ಮುಟ್ಟಿದ ಭಗವಾನಿ ಚಿನ್ನ ಗೆದ್ದಿದ್ದಾರೆ.

ಇದನ್ನೂ ಓದಿರಿ: SL vs AUS 2nd Test: 1992ರ ಬಳಿಕ ಮೊದಲ ಸಲ ಆಸ್ಟ್ರೇಲಿಯಾ ವಿರುದ್ಧ 500+ ರನ್​​ಗಳಿಸಿದ ಲಂಕಾ

ಇವರ ಸಾಧನೆಗೆ ಕೇಂದ್ರ ಯುವ ವ್ಯವಹಾರ ಮತ್ತು ಕ್ರೀಡಾ ಸಚಿವಾಲಯ ತನ್ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ಪದಕಗಳೊಂದಿಗೆ ಇರುವ ಚಿತ್ರ ಪೋಸ್ಟ್ ಮಾಡಿ, ಶ್ಲಾಘನೆ ವ್ಯಕ್ತಪಡಿಸಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.