ETV Bharat / sports

ಟೋಕಿಯೋ ಒಲಿಂಪಿಕ್ಸ್​ಗೆ ಅರ್ಹತೆ ಗಿಟ್ಟಿಸಿಕೊಂಡ ಭಾರತದ ಮಿಶ್ರ ರಿಲೇ ತಂಡ - Muhammed Anas-V K Vismaya-Jisna Mathew-Tom Nirmal Noah

ಮೊಹಮ್ಮದ್ ಅನಾಸ್, ವಿ.ಕೆ. ವಿಸ್ಮಯ, ಜಿಸ್ನಾ ಮ್ಯಾಥ್ಯೂ, ನಿರ್ಮಲ್ ತೋಮ್​ರಿದ್ದ ರಿಲೇ ತಂಡ ಖತಾರ್​ನ ದೋಹಾದಲ್ಲಿ ನಡೆಯುತ್ತಿರುವ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್​ಶಿಪ್​ನ 4X400 ಮೀಟರ್​ ರಿಲೇಯಲ್ಲಿ ಫೈನಲ್​ ಪ್ರವೇಶಿಸುವ ಮೂಲಕ 2020ರ ಟೋಕಿಯೋ ಒಲಿಂಪಿಕ್ಸ್​ಗೆ ಅರ್ಹತೆ ಪಡೆದು ಇತಿಹಾಸ ನಿರ್ಮಿಸಿದೆ.

World Athletics Championships:
author img

By

Published : Sep 29, 2019, 4:55 PM IST

ದೋಹಾ: ಭಾರತದ ಮಿಶ್ರ ರಿಲೇ ತಂಡ ದೋಹಾದಲ್ಲಿ ನಡೆಯುತ್ತಿರುವ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್​ಶಿಪ್​ನ 4X400 ಮೀಟರ್​ ರಿಲೇ ಓಟದಲ್ಲಿ ಫೈನಲ್​ ಪ್ರವೇಶಿಸುವ ಮೂಲಕ 2020ರ ಟೋಕಿಯೋ ಒಲಿಂಪಿಕ್ಸ್​ಗೆ ಅರ್ಹತೆ ಪಡೆಯುವ ಮೂಲಕ ಇತಿಹಾಸ ನಿರ್ಮಿಸಿದೆ.

ಭಾರತ ತಂಡದಲ್ಲಿ ಮೊಹಮ್ಮದ್ ಅನಾಸ್, ವಿ.ಕೆ. ವಿಸ್ಮಯ, ಜಿಸ್ನಾ ಮ್ಯಾಥ್ಯೂ, ನಿರ್ಮಲ್ ತೋಮ್​ರಿದ್ದ ರಿಲೇ ತಂಡ 4X400ಮೀಟರ್​ ಓಟವನ್ನು 3 ನಿಮಿಷ 16.14 ಸೆಕಂಡ್ಸ್​ನಲ್ಲಿ ಗುರಿ ಮುಟ್ಟುವ ಮೂಲಕ ತೃತೀಯ ಸ್ಥಾನ ಗಳಿಸಿ ಫೈನಲ್​ ಪ್ರವೇಶಿಸಿತು. ಪೊಲೆಂಡ್ ಹಾಗೂ ​ ಬೆಲ್ಜಿಯಂ ಮೊದಲೆರಡು ಸ್ಥಾನ ಗಳಿಸಿದವು.

ಈ ವಿಭಾಗದಲ್ಲಿ ಫೈನಲ್​ ಪ್ರವೇಶಿಸುವ ಮೊದಲ ಎಂಟು ತಂಡಗಳು ಟೋಕಿಯೋ ಒಲಂಪಿಕ್ಸ್​ಗೆ ಅರ್ಹತೆ ಹೊಂದಲಿದ್ದು, ಭಾರತ ತಂಡವೂ ಕೂಡ ಮೂರನೇ ತಂಡವಾಗಿ ಒಲಂಪಿಕ್ಸ್​ ಕ್ರೀಡಾಕೂಟಕ್ಕೆ ಅರ್ಹತೆ ಗಿಟ್ಟಿಸಿಕೊಂಡಿತು.

400 ಮೀಟರ್​ ಹರ್ಡಲ್ಸ್​ನಲ್ಲಿ ಭಾರತದ ಎಂ.ಪಿ. ಜಬೀರ್​ ಸೆಮಿಫೈನಲ್​ ಪ್ರವೇಶಿಸಿದ್ದಾರೆ. ಜಬೀರ್​ 49.62 ಸೆಕೆಂಡ್​ಗಳಲ್ಲಿ ಗುರಿ ತಲುಪಿದ್ದರು.

ಇನ್ನು, ಭಾರತದ ಸ್ಟಾರ್​ ಓಟಗಾರ್ತಿ ದ್ಯುತಿ ಚಾಂದ್ ​7ನೇಯವರಾಗಿ ಗುರಿ ತಲುಪುವ ಮೂಲಕ ಸೆಮಿಫೈನಲ್​​ ಪ್ರವೇಶಿಸುವಲ್ಲಿ ವಿಫಲರಾದರು. ದ್ಯುತಿ 47 ಸ್ಪರ್ಧಿಗಳ ಪೈಕಿ 37ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡರು.

Intro:Body:Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.