ETV Bharat / sports

ವಿಶ್ವ ಬಾಕ್ಸಿಂಗ್ ಚಾಂಪಿಯನ್‌ಶಿಪ್‌: ಐತಿಹಾಸಿಕ ಚಿನ್ನದ ಪದಕ ಗೆದ್ದ ನಿತು - ಸ್ವೀಟಿ ಬೂರಾ - ಸ್ವೀಟಿ ಬೂರಾ

ಮಹಿಳಾ ವಿಶ್ವ ಬಾಕ್ಸಿಂಗ್ ಚಾಂಪಿಯನ್‌ಶಿಪ್‌ನಲ್ಲಿ ನಿತು ಘಂಘಾಸ್ ಮತ್ತು ಸ್ವೀಟಿ ಬೂರಾ ಐತಿಹಾಸಿಕ ಚಿನ್ನದ ಪದಕ ಗೆದ್ದಿದ್ದಾರೆ.

Womens World Boxing Championship
ವಿಶ್ವ ಬಾಕ್ಸಿಂಗ್ ಚಾಂಪಿಯನ್‌ಶಿಪ್‌: ಐತಿಹಾಸಿಕ ಚಿನ್ನದ ಪದಕ ಗೆದ್ದ ನಿತು - ಸ್ವೀಟಿ ಬೂರಾ
author img

By

Published : Mar 25, 2023, 8:40 PM IST

Updated : Mar 25, 2023, 11:07 PM IST

ನವದೆಹಲಿ: ಭಾರತದ ಬಾಕ್ಸರ್​ಗಳಾದ ನಿತು ಘಂಘಾಸ್ ಮತ್ತು ಸ್ವೀಟಿ ಬೂರಾ ಮೊದಲ ಬಾರಿಗೆ ವಿಶ್ವ ಚಾಂಪಿಯನ್‌ ಕಿರೀಟ ಮುಡಿಗೇರಿಸಿಕೊಂಡಿದ್ದಾರೆ. ದೆಹಲಿಯ ಇಂದಿರಾಗಾಂಧಿ ಸ್ಪೋರ್ಟ್ಸ್ ಕಾಂಪ್ಲೆಕ್ಸ್‌ನಲ್ಲಿ ಶನಿವಾರ ನಡೆದ ಐಬಿಎ ಮಹಿಳಾ ವಿಶ್ವ ಬಾಕ್ಸಿಂಗ್ ಚಾಂಪಿಯನ್‌ಶಿಪ್‌ನ ಫೈನಲ್‌ನಲ್ಲಿ ಇಬ್ಬರೂ ಕೂಡ ಚಿನ್ನದ ಪದಕಕ್ಕೆ ಮುತ್ತಿಕ್ಕಿದ್ದಾರೆ.

2022ರ ಕಾಮನ್‌ವೆಲ್ತ್ ಗೇಮ್ಸ್​ನಲ್ಲಿ ಚಿನ್ನದ ಪದಕ ವಿಜೇತೆ ನಿತು (48 ಕೆಜಿ) ಮಂಗೋಲಿಯಾದ ಲುತ್ಸೈಖಾನ್ ಅಲ್ಟಾಂಟ್ಸೆಟ್ಸೆಗ್ ಅವರನ್ನು 5-0 ಅಂಕಗಳೊಂದಿಗೆ ಸೋಲಿಸುವ ಮೂಲಕ ತನ್ನ ಮೊದಲ ವಿಶ್ವ ಚಾಂಪಿಯನ್‌ಶಿಪ್ ಪದಕವನ್ನು ಗೆದ್ದರು. ಮತ್ತೊಂದೆಡೆ, ಮೂರು ಬಾರಿ ಏಷ್ಯನ್ ಪದಕ ವಿಜೇತೆ ಸ್ವೀಟಿ (81 ಕೆಜಿ) ಎರಡನೇ ವರ್ಲ್ಡ್ಸ್ ಪದಕಕ್ಕೆ ಮುತ್ತಿಕ್ಕಿದರು. ಚೀನಾದ ವಾಂಗ್ ಲೀನಾ ವಿರುದ್ಧದ 4-3 ಪಾಯಿಂಟ್‌ಗಳಿಂದ ಗೆಲುವು ಸಾಧಿಸಿದರು.

ಇದಕ್ಕೂ ಮುನ್ನ ಕಜಕಿಸ್ತಾನದ ಬಾಕ್ಸರ್‌ನನ್ನು 5-2 ಅಂತರದಿಂದ ಸೋಲಿಸಿ ನಿತು ಫೈನಲ್‌ ಪ್ರವೇಶಿಸಿದ್ದರು. ನಿತು ಅವರನ್ನು ಪ್ರೋತ್ಸಾಹಿಸಲು, ದ್ರೋಣಾಚಾರ್ಯ ಪ್ರಶಸ್ತಿ ಪುರಸ್ಕೃತ ಕೋಚ್ ಜಗದೀಶ್ ಸಿಂಗ್, ತಂದೆ ಜೈ ಭಗವಾನ್ ಘಂಘಾಸ್ ಹಾಗೂ ಸಹೋದರ ಅಕ್ಷಿತ್ ಮತ್ತು ಕುಟುಂಬಸ್ಥರು ಸೇರಿ ಹಲವರು ಪಂದ್ಯದ ವೇಳೆ ಹಾಜರಿದ್ದರು.

ಪಂದ್ಯದ ಆರಂಭದಿಂದಲೂ ಮಂಗೋಲಿಯಾದ ಪ್ರತಿಸ್ಪರ್ಧಿಯ ಮೇಲೆ ಒತ್ತಡ ಹೇರಿದ ಅವರು ಏಕಪಕ್ಷೀಯ ಪಂದ್ಯದಲ್ಲಿ 5-0 ಅಂತರದಲ್ಲಿ ಗೆದ್ದು ಚಿನ್ನದ ಪದಕ ಮುಡಿಗೇರಿಸಿಕೊಂಡರು. ವಿಶ್ವದ ಶ್ರೇಷ್ಠ ಬಾಕ್ಸರ್ ಎಂಸಿ ಮೇರಿ ಕೋಮ್ ಅವರನ್ನು ಸೋಲಿಸಿದ ನಂತರ ನೀತು ಬೆಳಕಿಗೆ ಬಂದಿದ್ದರು. ನೀತು ಅವರನ್ನು ಐಬಿಎ ಮಹಿಳಾ ವಿಶ್ವ ಬಾಕ್ಸಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನದ ಪದಕಕ್ಕೆ ಸ್ಪರ್ಧಿಯಾಗಿ ಪರಿಗಣಿಸಲಾಗಿತ್ತು.

ಇದನ್ನೂ ಓದಿ: IPL 2023: ಕೆಕೆಆರ್​ಗೆ ಈ ಜಮೈಕನ್​ ಆಟಗಾರನೇ ಬಲ, ದಾಖಲೆಯ ಸ್ಟ್ರೈಕ್​ ರೇಟ್​ ಪ್ಲೇಯರ್​​

ನೀತು ಘಂಘಾಸ್ ತನ್ನ ಬಾಕ್ಸಿಂಗ್ ವೃತ್ತಿಜೀವನವನ್ನು 2012 ರಲ್ಲಿ ಪ್ರಾರಂಭಿಸಿದರು. 2022ರ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಚಿನ್ನದ ಪದಕ ಗೆದ್ದಿರುವ ನೀತು, ಇದೀಗ ಮಹಿಳಾ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನದ ಪದಕ ಗೆಲ್ಲುವ ಮೂಲಕ 125 ಕೋಟಿ ಭಾರತೀಯರು ಹೆಮ್ಮೆ ಪಡುವಂತೆ ಮಾಡಿದ್ದಾರೆ. ನಾಲ್ವರು ಭಾರತೀಯ ಬಾಕ್ಸರ್‌ಗಳಾದ ನಿಖತ್ ಜರೀನ್, ಲೊವ್ಲಿನಾ ಬೊರ್ಗೊಹೈನ್, ನೀತು ಘಂಘಾಸ್ ಮತ್ತು ಸ್ವೀಟಿ ಬೂರಾ ಅವರು ತಮ್ಮ ತೂಕದ ವಿಭಾಗಗಳಲ್ಲಿ ಮಹಿಳಾ ವಿಶ್ವ ಬಾಕ್ಸಿಂಗ್ ಚಾಂಪಿಯನ್‌ಶಿಪ್‌ನ ಫೈನಲ್‌ಗೆ ತಲುಪಿದ್ದಾರೆ. ಶನಿವಾರ ನಡೆದ ಫೈನಲ್ ಪಂದ್ಯದಲ್ಲಿ ನೀತು ಘಂಘಾಸ್ ಚಿನ್ನದ ಪದಕ ಗೆದ್ದಿದ್ದಾರೆ.

ನೀತು ಕುಟುಂಬ: ಬಾಕ್ಸರ್ ನೀತು ಅವರ ತಂದೆ ಜೈ ಭಗವಾನ್ ಅವರು ಅಸೆಂಬ್ಲಿಯಲ್ಲಿ ಕೆಲಸ ಮಾಡುತ್ತಾರೆ. ನೀತು 2012 ರಲ್ಲಿ ಭಿವಾನಿಯಲ್ಲಿ ಕೋಚ್ ಜಗದೀಶ್ ಅವರೊಂದಿಗೆ ತರಬೇತಿ ಪ್ರಾರಂಭಿಸಿದರು. ನೀತು ಪ್ರಸ್ತುತ ಚೌಧರಿ ಬನ್ಸಿಲಾಲ್ ವಿಶ್ವವಿದ್ಯಾಲಯದಿಂದ ಎಂಪೆಡ್​ ವ್ಯಾಸಂಗ ಮಾಡುತ್ತಿದ್ದಾರೆ. ಅವರ ಕಿರಿಯ ಸಹೋದರ ಅಕ್ಷಿತ್ ಕುಮಾರ್ ಶೂಟಿಂಗ್ ಆಟಗಾರರಾಗಿದ್ದು, ಅವರು ಇತ್ತೀಚೆಗೆ ರಾಷ್ಟ್ರೀಯ ಮಟ್ಟದಲ್ಲಿ ಭಾಗವಹಿಸಿದ್ದರು. ಈ ಹಿಂದೆಯೂ ನೀತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಹಲವು ಪದಕಗಳನ್ನು ಗೆದ್ದಿದ್ದಾರೆ. ಇದೀಗ ವಿಶ್ವ ಚಾಂಪಿಯನ್‌ಶಿಪ್‌ನಲ್ಲೂ ಚಿನ್ನದ ಪದಕ ಗೆದ್ದು ದೇಶಕ್ಕೆ ಕೀರ್ತಿ ತಂದಿದ್ದಾರೆ.

ಇದನ್ನೂ ಓದಿ: ಪಾಕಿಸ್ತಾನಕ್ಕೆ ಸೋಲು: 11 ವರ್ಷಗಳ ನಂತರ ಮುಖಾಮುಖಿಯಲ್ಲಿ ಅಫ್ಘಾನ್​ಗೆ​​ ಐತಿಹಾಸಿಕ ಗೆಲುವು

Last Updated : Mar 25, 2023, 11:07 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.