ಲಂಡನ್: ಉಕ್ರೇನಿಯನ್ ವೈಲ್ಡ್ ಕಾರ್ಡ್ ಎಲಿನಾ ಸ್ವಿಟೋಲಿನಾ ಮಂಗಳವಾರ ನಡೆದ ವಿಂಬಲ್ಡನ್ ಕ್ವಾರ್ಟರ್ ಫೈನಲ್ಸ್ನಲ್ಲಿ ವಿಶ್ವದ ಅಗ್ರ ಶ್ರೇಯಾಂಕದ ಆಟಗಾರ್ತಿ ಇಗಾ ಸ್ವಿಯಾಟೆಕ್ರನ್ನು ಮಣಿಸಿ ಸೆಮಿ ಫೈನಲ್ಗೆ ಪ್ರವೇಶ ಪಡೆದುಕೊಂಡಿದ್ದಾರೆ. ಹೆಚ್ಚು ಕಡಿಮೆ 3 ಗಂಟೆಗಳ ಕಾಲ ಎಲಿನಾ ಸ್ವಿಟೋಲಿನಾ ಮತ್ತು ಇಗಾ ಮೈದಾನದಲ್ಲಿ ಕಾದಾಡಿದರು. ನೆರೆದಿದ್ದ ಪ್ರೇಕ್ಷಕರಿಗೆ ಇಬ್ಬರು ಘಟಾನುಘಟಿಗಳ ಹೋರಾಟ ರೋಮಾಂಚನವನ್ನು ಉಂಟುಮಾಡಿತ್ತು. ಇಗಾ ಸ್ವಿಯಾಟೆಕ್ ವಿರುದ್ಧ 7-5, 6-7(5), 6-2 ರಿಂದ ಗೆದ್ದ ಎಲಿನಾ, ತಮ್ಮ ವೃತ್ತಿಜೀವನದ ಮೂರನೇ ಗ್ರ್ಯಾಂಡ್ ಸ್ಲಾಮ್ ಸೆಮಿಫೈನಲ್‌ಗೆ ಪ್ರವೇಶಿಸಿದ್ದಾರೆ.
28 ವರ್ಷ ವಯಸ್ಸಿನವರಾದ ಎಲಿನಾ ಕಳೆದ ಅಕ್ಟೋಬರ್‌ನಲ್ಲಿ ಮಗಳು ಸ್ಕೈಗೆ ಜನ್ಮ ನೀಡಿದ್ದರು. ನಂತರ ಅವರು ಗಂಭೀರ ಅನಾರೋಗ್ಯಕ್ಕೂ ತುತ್ತಾಗಿದ್ದರು. ಇದೆಲ್ಲದರ ಜೊತೆಗೆ ಅವರ ದೇಶವನ್ನು ರಷ್ಯಾ ಆಕ್ರಮಿಸಿಕೊಂಡು ನಾಗರೀಕರು ಸಂಕಷ್ಟದಲ್ಲಿದ್ದಾಗ ನೆರವಿಗೂ ದಾವಿಸಿದ್ದರು. ಈಗ ಇದೆಲ್ಲದರಿಂದ ಗಟ್ಟಿಯಾಗಿರುವ ಎಲಿನಾ ಅಗ್ರ ಶ್ರೇಯಾಂಕಿತೆಯನ್ನು ಮಣಿಸಲು ತಮ್ಮ ಸರ್ವ ಶಕ್ತಿಯನ್ನೂ ಬಳಸಿಕೊಂಡರು. ಮಗುವಿಗ ಜನ್ಮ ನೀಡಿದ ನಂತರ ಭಾಗವಹಿಸಿದ ಎರಡನೇ ಗ್ರ್ಯಾಂಡ್ ಸ್ಲಾಮ್ ಇದಾಗಿದೆ. ವಿಶ್ವದ ನಂಬರ್ 1 ಆಟಗಾರ್ತಿಯನ್ನು ಮಣಿಸಿದ ಎಲಿನಾ ನಾಳೆ ನಡೆಯಲಿರುವ ಸೆಮಿಫೈನಲ್ನಲ್ಲಿ ಮಾರ್ಕೆಟಾ ವೊಂಡ್ರೊಸೊವಾ ಅವರ ವಿರುದ್ಧ ಆಡಲಿದ್ದಾರೆ.
-
A five-star performance 🌟@ElinaSvitolina defeats the world No.1 Iga Swiatek 7-5, 6-7(5), 6-2 to reach the semi-finals at #Wimbledon once again pic.twitter.com/l6nUu17KHj
— Wimbledon (@Wimbledon) July 11, 2023 " class="align-text-top noRightClick twitterSection" data="
">A five-star performance 🌟@ElinaSvitolina defeats the world No.1 Iga Swiatek 7-5, 6-7(5), 6-2 to reach the semi-finals at #Wimbledon once again pic.twitter.com/l6nUu17KHj
— Wimbledon (@Wimbledon) July 11, 2023A five-star performance 🌟@ElinaSvitolina defeats the world No.1 Iga Swiatek 7-5, 6-7(5), 6-2 to reach the semi-finals at #Wimbledon once again pic.twitter.com/l6nUu17KHj
— Wimbledon (@Wimbledon) July 11, 2023
ಗೆದ್ದ ನಂತರ ಮಾತನಾಡಿದ ಅವರು "ಯುದ್ಧವು ನನ್ನನ್ನು ಬಲಪಡಿಸಿತು ಮತ್ತು ನನ್ನನ್ನು ಮಾನಸಿಕವಾಗಿ ಬಲಗೊಳಿಸಿತು ಎಂದು ನಾನು ಭಾವಿಸುತ್ತೇನೆ"ಎಂದು 'ವಿಶೇಷ ಮಿಲಿಟರಿ ಕಾರ್ಯಾಚರಣೆ' ಎಂದು ಕರೆದು ತನ್ನ ತಾಯ್ನಾಡಿನ ಮೇಲೆ ರಷ್ಯಾ ಮಾಡಿರುವ ಆಕ್ರಮಿಸಿಕೊಂಡಿರುವುದನ್ನು ಉಲ್ಲೇಖಿಸಿದ್ದಾರೆ.
"ಮಾನಸಿಕವಾಗಿ ನಾನು ಕಷ್ಟಕರ ಸಂದರ್ಭಗಳನ್ನು ವಿಪತ್ತು ಎಂದು ಪರಿಗಣಿಸುವುದಿಲ್ಲ. ಜೀವನದಲ್ಲಿ ಕೆಟ್ಟ ವಿಷಯಗಳಲ್ಲಿ ನಾನು ಹೆಚ್ಚು ಶಾಂತವಾಗಿದ್ದೆ. ಅದು ನನ್ನನ್ನು ಹಿಂತಿರುಗಲು ಈ ದೊಡ್ಡ ಪ್ರೇರಣೆ ನೀಡಿತು. ನಾನು ಮಗುವನ್ನು ಹೊಂದಿದ್ದೇನೆ ಮತ್ತು ಯುದ್ಧವು ನನ್ನನ್ನು ವಿಭಿನ್ನ ವ್ಯಕ್ತಿಯನ್ನಾಗಿ ಮಾಡಿದೆ ಎಂದು ನಾನು ಭಾವಿಸುತ್ತೇನೆ. ನಾನು ವಿಷಯಗಳನ್ನು ಸ್ವಲ್ಪ ವಿಭಿನ್ನವಾಗಿ ನೋಡಲು ಇಚ್ಛಿಸುತ್ತೇನೆ" ಎಂದಿದ್ದಾರೆ.
ಈ ವರ್ಷ ಜನವರಿಯಲ್ಲಿ ಮತ್ತೆ ಕ್ರೀಡೆಗೆ ಮರಳಲು ಸಿದ್ಧಳಾದ ಎಲಿನಾ ಭವಿಷ್ಯದಲ್ಲಿ ದೊಡ್ಡ ಸವಾಲುಗಳಿಗಾಗಿ ಕಠಿಣ ಅಭ್ಯಾಸದಲ್ಲಿ ತೊಡಗಿಸಿಕೊಂಡರು. ಅವರು ಏಪ್ರಿಲ್‌ನಲ್ಲಿ ಡಬ್ಲ್ಯೂಟಿಎ ಪ್ರವಾಸದಲ್ಲಿ ಸ್ಪರ್ಧಾತ್ಮಕ ಟೆನಿಸ್‌ಗೆ ಮರಳಿದರು, ಅಲ್ಲಿ ಅವರು ಚಾರ್ಲ್ಸ್‌ಟನ್ ಓಪನ್‌ನಲ್ಲಿ ಆಡಿದರು. ಅವರು ಮೊದಲ ಸುತ್ತಿನಲ್ಲಿ ಯೂಲಿಯಾ ಪುಟಿನ್ಟ್ಸೆವಾ ವಿರುದ್ಧ ಸೋತರು. ಫ್ರೆಂಚ್ ಓಪನ್ 2023 ರಲ್ಲಿ ವೈಲ್ಡ್‌ಕಾರ್ಡ್ ಆಗಿ ಪ್ರವೇಶ ಪಡೆದಿದ್ದ ಎಲಿನಾ ಮೇಲೆ ಹೆಚ್ಚಿನ ನಿರೀಕ್ಷೆ ಇರಲಿಲ್ಲ. ಆದರೆ ಅವರು ಸಿಕ್ಕ ಅವಕಾಶವನ್ನು ಹೆಚ್ಚು ಬಳಸಿಕೊಂಡರು.
ಫ್ರೆಂಚ್ ಓಪನ್‌ನಲ್ಲಿ 9 ನೇ ಶ್ರೇಯಾಂಕದ ಡೇರಿಯಾ ಕಸಟ್ಕಿನಾ ಅವರನ್ನು ನೇರ ಸೆಟ್‌ಗಳಲ್ಲಿ ಸೋಲಿಸಿದ್ದರು. ಮುಂದಿನ ಪಂದ್ಯದಲ್ಲಿ ಎದುರಾದ ವಿಶ್ವದ ಎರಡನೇ ಶ್ರೇಯಾಂಕಿತೆ ಅರೀನಾ ಸಬಲೆಂಕಾ ಅವರನ್ನು ಸೋಲಿಸಲು ಸ್ವಿಟೋಲಿನಾ ಅವರಿಗೆ ಆಗಲಿಲ್ಲ. ಕ್ವಾರ್ಟರ್ನಲ್ಲಿ ಸಬಲೆಂಕಾ ವಿರುದ್ಧ ಸೋಲನುಭವಿಸಿದರು. ಆದರೆ ಅವರ ಕಮ್ಬ್ಯಾಕ್ಗಾಗಿ ಮೈದಾನದಲ್ಲಿದ್ದ ಎಲ್ಲಾ ಪ್ರೇಕ್ಷಕರು ಹರ್ಷೋದ್ಗಾರ ಮೊಳಗಿಸಿದ್ದರು. ಈ ಬಾರಿಯ ಮಹಿಳಾ ಸಿಂಗಲ್ಸ್ ಪ್ರಶಸ್ತಿ ಮೇಲೆ ಸ್ಕೈ ತಾಯಿ ಕಣ್ಣಿಟ್ಟಿದ್ದಾರೆ.
ನಿನ್ನೆ ನಡೆದ ಎರಡನೇ ಕ್ವಾರ್ಟರ್ ಫೈನಲ್ನಲ್ಲಿ ಜೆಸ್ಸಿಕಾ ಪೆಗುಲಾ ಅವರನ್ನು 6-4,2-6,6-4 ರ ಸೆಟ್ನಿಂದ ಮಾರ್ಕೆಟಾ ವೊಂಡ್ರೊಸೊವಾ ಮಣಿಸಿದ್ದರು. ನಾಳೆ ಮಾರ್ಕೆಟಾ ವೊಂಡ್ರೊಸೊವಾ ಮತ್ತು ಎಲಿನಾ ಸ್ವಿಟೋಲಿನಾ ಸೆಮೀಸ್ ಆಡಲಿದ್ದಾರೆ.
ಇದನ್ನೂ ಓದಿ: Wimbledon: ಮಾಜಿ ಚಾಂಪಿಯನ್ ಪೆಟ್ರಾ ಕ್ವಿಟೋವಾ ಮಣಿಸಿ ಕ್ವಾರ್ಟರ್ ಫೈನಲ್ ಪ್ರವೇಶಿಸಿದ ಜಬೇರ್!