ನವದೆಹಲಿ: ಭಾರತದ ಸ್ಟಾರ್ ಕುಸ್ತಿಪಟು ವಿನೇಶ್ ಫೋಗಟ್ ಟೋಕಿಯೋ ಒಲಿಂಪಿಕ್ಸ್ ಶ್ರೇಯಾಂಕ ಪಟ್ಟಿಯಲ್ಲಿ ಅಗ್ರಸ್ಥಾನ ಪಡೆದಿದ್ದಾರೆ. 53 ಕೆಜಿ ವಿಭಾಗದ ಅಗ್ರ 4 ಕುಸ್ತಿಪಟುಗಳನ್ನು ವಿಶ್ವ ಕುಸ್ತಿ ಒಕ್ಕೂಟ ಇಂದು ಬಿಡುಗಡೆ ಮಾಡಿದ್ದು, ಭಾರತೀಸ್ ರೆಸ್ಟ್ಲರ್ ಅಗ್ರಸ್ಥಾನ ಗಿಟ್ಟಿಸಿಕೊಂಡಿದ್ದಾರೆ.
2021ರ ಎಲ್ಲ ಕೂಟಗಳಲ್ಲೂ 53 ಕೆಜಿ ವಿಭಾಗದಲ್ಲಿ ಚಿನ್ನ ಗೆದ್ದಿರುವ ಫೋಗಾಟ್ ಸ್ಥಳೀಯ ಕುಸ್ತಿಪಟು ಮಾಯು ಮುಕಿಡಾರನ್ನು ಹಿಂದಿಕ್ಕಿ ಅಗ್ರಸ್ಥಾನ ಪಡೆದಿದ್ದಾರೆ.
ಪುರುಷರ ವಿಭಾಗದಲ್ಲಿ ಭಾರತದ ಮತ್ತಿಬ್ಬರು ಭರವಸೆಯ ಕುಸ್ತಿಪಟುಗಳಾದ ಬಜರಂಗ್ ಪೂನಿಯಾ ಮತ್ತು ದೀಪಕ್ ಪೂನಿಯಾ ಕ್ರಮವಾಗಿ 65 ಮತ್ತು 86 ಕೆಜಿ ವಿಭಾಗದಲ್ಲಿ ದ್ವಿತೀಯ ಶ್ರೇಯಾಂಕ ಪಡೆದುಕೊಂಡಿದ್ದಾರೆ. 57 ಕೆಜಿ ವಿಭಾಗದಲ್ಲಿ ರವಿ ಕುಮಾರ್ 4ನೇ ಶ್ರೇಯಾಂಕ ಹೊಂದಿದ್ದಾರೆ.
-
The 53kg top four seeds at the #Tokyo2020 Olympic Games.
— United World Wrestling (@wrestling) June 22, 2021 " class="align-text-top noRightClick twitterSection" data="
1. @Phogat_Vinesh 🇮🇳
2. Mayu MUKAIDA🇯🇵
3. Luisa VALVERDE MELENDRES🇪🇨
4. Qianyu PANG 🇨🇳 pic.twitter.com/feWNPRUXm9
">The 53kg top four seeds at the #Tokyo2020 Olympic Games.
— United World Wrestling (@wrestling) June 22, 2021
1. @Phogat_Vinesh 🇮🇳
2. Mayu MUKAIDA🇯🇵
3. Luisa VALVERDE MELENDRES🇪🇨
4. Qianyu PANG 🇨🇳 pic.twitter.com/feWNPRUXm9The 53kg top four seeds at the #Tokyo2020 Olympic Games.
— United World Wrestling (@wrestling) June 22, 2021
1. @Phogat_Vinesh 🇮🇳
2. Mayu MUKAIDA🇯🇵
3. Luisa VALVERDE MELENDRES🇪🇨
4. Qianyu PANG 🇨🇳 pic.twitter.com/feWNPRUXm9
65 ಕೆಜಿ ವಿಭಾಗದಲ್ಲಿ ರಷ್ಯಾದ ರಶಿದೊವ್ ಗಡ್ಜಿಮುರಾದ್, 57 ಕೆಜಿ ವಿಭಾಗದಲ್ಲಿ ಸರ್ಬಿಯಾದ ಸ್ಟೇವನ್ ಮಿಸಿಕ್, 86 ಕೆಜಿ ವಿಭಾಗದಲ್ಲಿ ಇರಾನ್ನ ಹಸನ್ ಯಜ್ದಾನಿಚರತಿ ಅಗ್ರಸ್ಥಾನ ಪಡೆದುಕೊಂಡಿದ್ದಾರೆ. ಇನ್ನು 125 ಕೆಜಿ ವಿಭಾಗದಲ್ಲಿ ಒಲಿಂಪಿಕ್ಸ್ ಕೋಟಾ ಪಡೆದಿದ್ದ ಸುಮಿತ್ ಮಲಿಕ್ ಡೂಪಿಂಗ್ ಟೆಸ್ಟ್ನಲ್ಲಿ ಅನುತ್ತೀರ್ಣರಾದ್ದರಿಂದ ಅವರನ್ನು ಅಮಾನತು ಮಾಡಲಾಗಿದೆ.
ಟೋಕಿಯೋಗೆ ಅರ್ಹತೆ ಪಡೆದಿರುವ ಕುಸ್ತಿಪಟುಗಳಲ್ಲಿ ಬಜರಂಗ್ ಪೂನಿಯಾ ಮತ್ತು ವಿನೇಶ್ ಫೋಗಾಟ್ ಮೇಲೆ ಪದಕ ನಿರೀಕ್ಷಿಸಲಾಗುತ್ತಿದೆ.
ಇದನ್ನು ಓದಿ:ಶಾಟ್ಪುಟ್: ದಾಖಲೆಯೊಂದಿಗೆ ಒಲಿಂಪಿಕ್ಸ್ಗೆ ಅರ್ಹತೆ ಪಡೆದ ತಜಿಂದರ್ ಸಿಂಗ್ ತೋರ್