ಕೌನ್ಸಿಲ್ ಬ್ಲಫ್ಸ್ (ಯುಎಸ್) : ಭಾರತದ ಸ್ಟಾರ್ ಷಟ್ಲರ್‌ಗಳಾದ ಪಿವಿ ಸಿಂಧು ಮತ್ತು ಲಕ್ಷ್ಯ ಸೇನ್ ಯುಎಸ್ ಓಪನ್ ಸೂಪರ್ 300 ಬ್ಯಾಡ್ಮಿಂಟನ್ ಟೂರ್ನಮೆಂಟ್‌ನ ಮಹಿಳಾ ಮತ್ತು ಪುರುಷರ ಸಿಂಗಲ್ಸ್ ಕ್ವಾರ್ಟರ್‌ಫೈನಲ್‌ಗೆ ಪ್ರವೇಶಿಸಿದ್ದಾರೆ. ಡಬಲ್ ಒಲಿಂಪಿಕ್ ಪದಕ ವಿಜೇತೆ ಸಿಂಧು ಅವರು ಕೊರಿಯಾದ ಸಂಗ್ ಶುವೊ ಯುನ್ ವಿರುದ್ದ 21-14 21-12 ರಿಂದ ಗೆಲುವು ಸಾಧಿಸಿದ್ದಾರೆ. ಮತ್ತೊಂದೆಡೆ ಕೆನಡಾ ಓಪನ್ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದ ಸೇನ್ 39 ನಿಮಿಷಗಳಲ್ಲಿ ಜೆಕ್ ಗಣರಾಜ್ಯದ ಜಾನ್ ಲೌಡಾ ಅವರನ್ನು 21-8 23-21 ಅಂತರದಲ್ಲಿ ಸೋಲಿಸಿದ್ದಾರೆ.
ಸಿಂಧು ಮುಂದಿನ ಪಂದ್ಯದಲ್ಲಿ ಚೀನಾದ ಗಾವೊ ಫಾಂಗ್ ಜೀ ಅವರನ್ನು ಎದುರಿಸಲಿದ್ದಾರೆ. ಆದರೆ ವಿಶ್ವ ಶ್ರೇಯಾಂಕದ ಮೂರನೇ ಸ್ಥಾನದಲ್ಲಿರುವ ಸೇನ್ ಅವರು ಚೆನ್ನೈನ 19 ವರ್ಷದ ಭರವಸೆ ಆಟಗಾರ ಎಸ್ ಶಂಕರ್ ಮುತ್ತುಸಾಮಿ ವಿರುದ್ದ ಪಂದ್ಯವಾಡಲಿದ್ದಾರೆ. ಇದು ಪುರುಷರ ಸಿಂಗಲ್ಸ್‌ನಲ್ಲಿ ಅಖಿಲ ಭಾರತೀಯ ಘರ್ಷಣೆಯಾಗಿದೆ. 2022 ರ ವಿಶ್ವ ಜೂನಿಯರ್ ಚಾಂಪಿಯನ್‌ಶಿಪ್‌ನ ಬೆಳ್ಳಿ ಪದಕ ವಿಜೇತ ಎಸ್ ಶಂಕರ್ ಮುತ್ತುಸಾಮಿ ಅವರು, ಇಸ್ರೇಲ್‌ನ ಮಿಶಾ ಜಿಲ್ಬರ್‌ಮನ್ ವಿರುದ್ಧ 21-18 21-23 21-13 ಗೆಲುವನ್ನು ದಾಖಲಿಸಿದರು.
ಪಂದ್ಯದ ವೇಳೆ, ಭಾರತೀಯ ಆಟಗಾರರ ಎದರು ಅಸಲಿ ಆಟ ಪ್ರದರ್ಶನ ತೋರಲು ಸಾಧ್ಯವಾಗದ ಸಂಗ್ ವಿರುದ್ಧ ಸಿಂಧು ಹೆಚ್ಚು ಬೆವರು ಹರಿಸಲಿಲ್ಲ. ಆರಂಭದಲ್ಲಿ 7-2 ಮುನ್ನಡೆ ಸಾಧಿಸಿದ ಸಿಂಧು ಅದನ್ನು 13-5ಕ್ಕೆ ವಿಸ್ತರಿಸಿದರು. ಬಳಿಕ ಸಂಗ್ ಅವರು ಹಿನ್ನಡೆಯನ್ನು 11-14ಕ್ಕೆ ತಗ್ಗಿಸುವಲ್ಲಿ ಯಶಸ್ವಿಯಾದರು. ಆದರೆ, ಸಿಂಧು ಪುನರಾಗಮನದ ಆಟದಿಂದ ಮತ್ತೆ ಮುನ್ನಡೆ ಸಾಧಿಸಲು ಬಿಡದೆ ರ‍್ಯಾಲಿ ಮೇಲೆ ಹಿಡಿತ ಸಾಧಿಸಿದರು.
ಕೋರ್ಟ್ ಬದಲಾವಣೆಯ ನಂತರ, ಸಂಗ್ ಅವರು 5-3 ಅಲ್ಪ ಮುನ್ನಡೆಯನ್ನು ಸಾಧಿಸಿದರು. ಈ ಮೂಲಕ ಆರಂಭದಲ್ಲಿ ಭಾರತೀಯ ಆಟಗಾರರೊಂದಿಗೆ ಹೊಂದಾಣಿಕೆಯಾಗಲು ಪ್ರಾರಂಭಿಸಿದರು. ಆದರೆ, ಸಿಂಧು ಅವರ ಅದ್ಬುತ ಆಟದಿಂದ ಮತ್ತೆ 7-7 ರಿಂದ ಪಂದ್ಯವನ್ನು ಸಮ ಮಾಡಿದರು. ಮಧ್ಯಂತರದಲ್ಲಿ ಸಿಂಧು 11-8 ಮುನ್ನಡೆ ಸಾಧಿಸಿದರು. ಹೀಗೆ 16-12 ರಿಂದ ಸಿಂಧು ಹೆಚ್ಚು ಸಡಗರವಿಲ್ಲದೇ ಉಳಿದ ಅಂಕಗಳನ್ನು ಹಿಮ್ಮೆಟ್ಟಿಸಿ ಗೆಲುವಿನ ದಡ ಸೇರಿದರು.
ಸೇನ್ ಕೂಡ ಭರ್ಜರಿಯಾಗಿಯೇ 6-1 ಮುನ್ನಡೆಗೆ ದಾರಿ ಮಾಡಿಕೊಟ್ಟರು. ನಂತರ ಆರಂಭ ಆಟದಲ್ಲಿ ಎದುರಾಳಿಯಿಂದ ದೂರವಿರಲು ತನ್ನ ಅಂಕಗಳನ್ನು ಕ್ಷಣಾರ್ಧದಲ್ಲಿ 17-5 ಗೆ ಮುನ್ನಡೆ ಸಾಧಿಸಿದರು. 39 ವರ್ಷದ ಜೆಕ್, ಮತ್ತೆ ಗಮನಾರ್ಹವಾದ ಆಟ ತೋರಿ 8-5 ರಿಂದ ಮುನ್ನೆಡೆ ಕಾಯ್ದುಕೊಂಡಿದ್ದರು. ಆದರೇ ಸೇನ್ ಮಾತ್ರ ಆಟವನ್ನು ಬಿಟ್ಟು ಕೊಡಲಿಲ್ಲ. 19-14 ಪಾಯಿಂಟ್ ಇರುವಾಗ ಒಟ್ಟಿಗೆ ಐದು ಅಂಕಗಳೊಂದಿಗೆ 19-19 ಸಮ ಮಾಡಿಕೊಂಡರು. ಬಳಿಕ ಕೆಲವು ಬಿಗಿಯಾದ ರ‍್ಯಾಲಿಗಳನ್ನು ಆಡಿದ ಸೇನ್ ಗೇಮ್ ಪಾಯಿಂಟ್ ಅನ್ನು ಪಡೆಯುವುದರ ಜೊತೆಗೆ ಪಂದ್ಯವನ್ನು ಮುಕ್ತಾಯಗೊಳಿಸಿ ಕೊನೆಗೂ ಜಯಗಳಿಸಿದರು.
ಇದನ್ನೂ ಓದಿ : US Open Badminton: ಅದ್ಭುತ ಲಯದಲ್ಲಿ ಲಕ್ಷ್ಯ, ಸಿಂಧುಗೆ ಒಲಿಯುತ್ತಾ ಯುಎಸ್ ಓಪನ್ ಕಿರೀಟ?