ETV Bharat / sports

ಒಡಿಶಾ ಓಪನ್ ​: 14 ವರ್ಷಕ್ಕೆ ಚಾಂಪಿಯನ್​ ಪಟ್ಟಕ್ಕೇರಿದ ಉನ್ನತಿ ಹೂಡ - ಸೂಪರ್​ 100 ಟೂರ್ನಮೆಂಟ್​ ಗೆದ್ದ ಕಿರಿಯ ಶಟ್ಲರ್​

75,000 ಬಹುಮಾನದ ಹೊಂದಿದ್ದ ಒಡಿಶಾ ಓಪನ್​ನ ಮೊದಲ ಆವೃತ್ತಿಯ ಮಹಿಳೆಯರ ಸಿಂಗಲ್ಸ್​ ವಿಭಾಗದಲ್ಲಿ ಟೀನೇಜ್​ ಆಟಗಾರ್ತಿ 21-18, 21-18ರಲ್ಲಿ ತೋಷ್ನಿವಾಲ್​ರನ್ನು ಮಣಿಸಿದರು..

Unnati Hooda, Kiran George win Odisha Open titles
ಒಡಿಶಾ ಓಪನ್​ ಚಾಂಪಿಯನ್​ 2022
author img

By

Published : Jan 31, 2022, 3:10 PM IST

ಕಟಕ್​ : ಯುವ ಬ್ಯಾಡ್ಮಿಂಟನ್​ ಆಟಗಾರ ಉನ್ನತಿ ಹೂಡ ಭಾನುವಾರ ನಡೆದ ಫೈನಲ್​ನಲ್ಲಿ ಭಾರತದವರೇ ಆದ ಸ್ಮಿತ್ ತೋಷ್ನಿವಾಲ್​ ಅವರನ್ನು ಮಣಿಸುವ ಮೂಲಕ ಒಡಿಶಾ ಓಪನ್​ ಚಾಂಪಿಯನ್​ ಆಗಿದ್ದಾರೆ. ಈ ಮೂಲಕ ಸೂಪರ್​ 100 ಟೂರ್ನಮೆಂಟ್​ ಗೆದ್ದ ಭಾರತದ ಅತ್ಯಂತ ಕಿರಿಯ ಶಟ್ಲರ್​ ಎನಿಸಿಕೊಂಡಿದ್ದಾರೆ.

75,000 ಬಹುಮಾನದ ಹೊಂದಿದ್ದ ಒಡಿಶಾ ಓಪನ್​ನ ಮೊದಲ ಆವೃತ್ತಿಯ ಮಹಿಳೆಯರ ಸಿಂಗಲ್ಸ್​ ವಿಭಾಗದಲ್ಲಿ ಟೀನೇಜ್​ ಆಟಗಾರ್ತಿ 21-18, 21-18ರಲ್ಲಿ ತೋಷ್ನಿವಾಲ್​ರನ್ನು ಮಣಿಸಿದರು.

ಟೂರ್ನಿಯ 5 ವಿಭಾಗದಲ್ಲೂ ಪ್ರಾಬಲ್ಯ ಸಾಧಿಸಿ ಭಾರತೀಯರು ಒಟ್ಟು 3 ಫೈನಲ್​ ಗೆದ್ದು ಚಾಂಪಿಯನ್ ಪಟ್ಟಕ್ಕೇರಿದರು. ಪುರುಷರ ಸಿಂಗಲ್ಸ್​ನಲ್ಲಿ 21 ವರ್ಷದ ಶ್ರೇಯಾಂಕ ರಹಿತ ಕಿರಣ್ ಜಾರ್ಜ್​ ಪ್ರಿಯಾನ್ಶು ರಾಜಾವತ್​ ವಿರುದ್ದ 21-15, 14-21, 21-18ರಲ್ಲಿ ಗೆದ್ದು ಚಾಂಪಿಯನ್ ಆದರು.

ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ

ಭಾರತದ ಶ್ರೇಷ್ಠ ಶಟ್ಲರ್​ಗಳಲ್ಲಿ ಒಬ್ಬರಾದ ಮತ್ತು ಭಾರತದ ಮುಖ್ಯ ಕೋಚ್​ ಪುಲ್ಲೇಲ ಗೋಪಿಚಂದ್ ಅವರ ಮಗಳಾದ ಗಾಯತ್ರಿ ಗೋಪಿಚಂದ್​ ಅವರು ತ್ರಿಶಾ ಜಾಲಿ ಅವರ ಜೊತೆಗೂಡಿ ಸನಿಯೋಗಿತಾ ಘೋರ್ಪಡೆ ಮತ್ತು ಶೃತಿ ಮಿಶ್ರಾ ಅವರನ್ನು 21-12, 21-10ರಲ್ಲಿ ಮಣಿಸಿ ಮಹಿಳೆಯರ ಡಬಲ್ಸ್​ ಗೆದ್ದರು.

ಆದರೆ, ಮಿಕ್ಸಡ್​ ಡಬಲ್ಸ್​ನಲ್ಲಿ ಎಂಆರ್ ಅರ್ಜುನ್​ ಮತ್ತು ಜಾಲಿ 16-21, 20-22ರಲ್ಲಿ ಶ್ರೀಲಂಕಾದ ಸಚಿನ್​ ಡಿಯಾಸ್​ ಮತ್ತು ತಿಲಿನಿ ವಿರುದ್ಧ ಸೋಲು ಕಂಡರು. ಪುರುಷರ ಡಬಲ್ಸ್​ನಲ್ಲಿ ಮಲೇಷ್ಯಾದ ನೂರ್​ ಮೊಹಮ್ಮದ್​ ಅಜ್ರಿಯಾನ್ ಆಯುಬ್​ ಮತ್ತು ಲಿಮ್​ ಖಿಮ್​ 18-21, 21-14, 21-16ರಲ್ಲಿ ಭಾರತದ ರವಿಕೃಷ್ಣ ಪಿಎಲ್ ಮತ್ತು ಶಂಕರ್​ ಪ್ರಸಾದ್​ ವಿರುದ್ಧ ಗೆಲುವು ಸಾಧಿಸಿದರು.

ಇದನ್ನೂ ಓದಿ:ಫೆಡರರ್, ಜೊಕೊವಿಕ್ ದಾಖಲೆ ಮುರಿದ ರಾಫೆಲ್​​: 21ನೇ ಗ್ರ್ಯಾಂಡ್ ಸ್ಲ್ಯಾಮ್​ಗೆ ಮುತ್ತಿಕ್ಕಿದ ನಡಾಲ್

ETV Bharat Logo

Copyright © 2025 Ushodaya Enterprises Pvt. Ltd., All Rights Reserved.