ETV Bharat / sports

ಒಲಿಂಪಿಕ್ಸ್​ಗೆ ಜುಲೈ 17ರಂದು ಮೊದಲ ಬ್ಯಾಚ್​ ಅಥ್ಲೀಟ್​ಗಳನ್ನ ಕಳುಹಿಸಲು ಐಒಎ ಚಿಂತನೆ

author img

By

Published : Jul 4, 2021, 6:54 PM IST

ನಮ್ಮ ಸರ್ಕಾರ ನಮಗೆ ಎಲ್ಲಾ ದಾರಿಯಿಂದಲೂ ನೆರವಾಗುತ್ತಿದೆ. ಹಾಗಾಗಿ, ಎಲ್ಲವೂ ಉತ್ತಮ ರೀತಿ ನಡೆಯಲಿದೆ ಎಂದು ನಾವು ವಿಶ್ವಾಸದಲ್ಲಿದ್ದೇವೆ ಎಂದು ಅವರು ತಿಳಿಸಿದ್ದಾರೆ. ಒಲಿಂಪಿಕ್ಸ್​ನ ಉದ್ಘಾಟನೆಯ ವೇಳೆ ಭಾರತ ಧ್ವಜವನ್ನು ಯಾರು ಹಿಡಿಯಲಿದ್ದಾರೆ ಎಂಬುದನ್ನು ಜುಲೈ 5ರಂದು ಐಒಎ ಘೋಷಿಸಲಿದೆ..

ಇಂಡಿಯನ್ ಒಲಿಂಪಿಕ್ಸ್ ಅಸೋಸಿಯೇಷನ್
ಇಂಡಿಯನ್ ಒಲಿಂಪಿಕ್ಸ್ ಅಸೋಸಿಯೇಷನ್

ನವದೆಹಲಿ : ಟೋಕಿಯೋ ಬೌಂಡ್​ ಆಥ್ಲೀಟ್​ಗಳ ಮೊದಲ ಬ್ಯಾಚ್‌ನ ಜುಲೈ 17ರಂದು ಜಪಾನ್​ಗೆ ಕಳುಹಿಸಲು ಭಾರತೀಯ ಒಲಿಂಪಿಕ್ಸ್ ಅಸೋಸಿಯೇಷನ್​ ಮುಂದಾಗಿದೆ. ಕಳೆದ ವರ್ಷ ನಡೆಯಬೇಕಿದ್ದ ಕ್ರೀಡಾಕೂಟ ಕೋವಿಡ್-19 ಬಿಕ್ಕಟ್ಟಿನಿಂದ ಮುಂದೂಡಲ್ಪಟ್ಟಿತ್ತು. ಇದೀಗ ಜುಲೈ 23ರಿಂದ ಆಗಸ್ಟ್​ 8ರವರೆಗೆ ಮಹಾನ್ ಕ್ರೀಡಾಕೂಟ ನಡೆಯಲಿದೆ.

ಪ್ರಸ್ತುತ ಜುಲೈ 17ರಂದು ಭಾರತದಿಂದ ಮೊದಲ ಬ್ಯಾಚ್​ನ ಕ್ರೀಡಾಪಟುಗಳನ್ನು ಟೋಕಿಯೋಗೆ ಕಳುಹಿಸುವುದು ನಮ್ಮ ಯೋಜನೆಯಾಗಿದೆ. ಆದರೆ, ಅವರನ್ನು ತರಬೇತಿಗೆ ಅನುಕೂಲವಾಗಲೆಂದು ಒಂದೆರಡು ದಿನಗಳು ಬೇಗ ಕಳುಹಿಸಲು ಪ್ರಯತ್ನಿಸುತ್ತಿದ್ದೇವೆ.

ಇದರಿಂದ ತರಬೇತಿ ಮತ್ತು ಕ್ವಾರಂಟೈನ್ ಸಮಸ್ಯೆ ಎರಡು ಬಗೆಹರಿಯುವುದು. ಇದಕ್ಕಾಗಿ ಟೋಕಿಯೋದಲ್ಲಿ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ನಾವು ಸಂಪರ್ಕದಲ್ಲಿದ್ದೇವೆ ಎಂದು ಐಒಎ ಅಧ್ಯಕ್ಷ ನರೀಂದರ್​ ಬಾತ್ರಾ ತಿಳಿಸಿದ್ದಾರೆ.

ನಮ್ಮ ಸರ್ಕಾರ ನಮಗೆ ಎಲ್ಲಾ ದಾರಿಯಿಂದಲೂ ನೆರವಾಗುತ್ತಿದೆ. ಹಾಗಾಗಿ, ಎಲ್ಲವೂ ಉತ್ತಮ ರೀತಿ ನಡೆಯಲಿದೆ ಎಂದು ನಾವು ವಿಶ್ವಾಸದಲ್ಲಿದ್ದೇವೆ ಎಂದು ಅವರು ತಿಳಿಸಿದ್ದಾರೆ. ಒಲಿಂಪಿಕ್ಸ್​ನ ಉದ್ಘಾಟನೆಯ ವೇಳೆ ಭಾರತ ಧ್ವಜವನ್ನು ಯಾರು ಹಿಡಿಯಲಿದ್ದಾರೆ ಎಂಬುದನ್ನು ಜುಲೈ 5ರಂದು ಐಒಎ ಘೋಷಿಸಲಿದೆ. ಪಿವಿ ಸಿಂಧು ಮತ್ತು ಬಜರಂಗ್ ಪೂನಿಯಾ ಈ ಇಬ್ಬರಲ್ಲಿ ಒಬ್ಬರಿಗೆ ಅವಕಾಶ ಸಿಗಬಹುದು. ಆದರೆ, ಇನ್ನೂ ಅಧಿಕೃತವಾಗಿಲ್ಲ ಮೂಲಗಳಿಂದ ತಿಳಿದು ಬಂದಿದೆ.

ಇದನ್ನು ಓದಿ:ಟೋಕಿಯೋಗೆ ಬಂದಿಳಿದ ಸರ್ಬಿಯಾದ ಅಥ್ಲೀಟ್​ಗೆ ಕೋವಿಡ್​ ಸೋಂಕು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.