ETV Bharat / sports

Swimming: ರಾಷ್ಟ್ರೀಯ ಈಜು ಚಾಂಪಿಯನ್​ಶಿಪ್​: ಹೊಸ ರಾಷ್ಟ್ರೀಯ ದಾಖಲೆ ಬರೆದ ಆರ್ಯನ್ ನೆಹ್ರಾ - ಕರ್ನಾಟಕದ ಈಜುಗಾರ್ತಿಯರ ಸಾಧನೆ

ರಾಷ್ಟ್ರೀಯ ಈಜು ಸ್ಪರ್ಧೆಯಲ್ಲಿ ಗುಜರಾತ್​ನ ಆರ್ಯನ್​ ನೆಹ್ರಾ ಹೊಸ ಕೂಟ ದಾಖಲೆ ಬರೆದರು. ಕರ್ನಾಟಕದ ಆಟಗಾರರೂ ಹಿಂದಿನ ದಾಖಲೆಯನ್ನು ಮೀರಿದರು.

ರಾಷ್ಟ್ರೀಯ ಹೊಸ ದಾಖಲೆ ಬರೆದ ಆರ್ಯನ್ ನೆಹ್ರಾ
ರಾಷ್ಟ್ರೀಯ ಹೊಸ ದಾಖಲೆ ಬರೆದ ಆರ್ಯನ್ ನೆಹ್ರಾ
author img

By

Published : Jul 4, 2023, 9:41 AM IST

ಹೈದರಾಬಾದ್: ಇಲ್ಲಿ ನಡೆಯುತ್ತಿರುವ 76ನೇ ಸೀನಿಯರ್ ನ್ಯಾಷನಲ್ ಅಕ್ವಾಟಿಕ್ ಚಾಂಪಿಯನ್‌ಶಿಪ್ 2023ರ ಸಾಲಿನ ಸ್ಪರ್ಧೆಯಲ್ಲಿ ಕರ್ನಾಟಕದ ಈಜುಪಟುಗಳು ಉತ್ತಮ ಸಾಧನೆ ತೋರಿದರು. ಮೂರು ಫ್ರೀಸ್ಟೈಲ್​ ಈವೆಂಟ್​ಗಳಲ್ಲಿ ದಾಖಲೆಯನ್ನು ಉತ್ತಮಪಡಿಸಿದರು. ಗುಜರಾತ್​ನ ಆರ್ಯನ್​ ನೆಹ್ರಾ ರಾಷ್ಟ್ರೀಯ ದಾಖಲೆಯನ್ನು ಮುರಿದು ಹೊಸ ಕೂಟ ದಾಖಲೆ ಮಾಡಿದರು.

ಆರ್ಯನ್​ ಕೂಟ ದಾಖಲೆ: ಪುರುಷರ 800 ಮೀಟರ್ ಫ್ರೀಸ್ಟೈಲ್ ಈವೆಂಟ್‌ನಲ್ಲಿ ಏಷ್ಯನ್ ಗೇಮ್ಸ್‌ನ ಈಜುಗಾರ ಆರ್ಯನ್ ನೆಹ್ರಾ ರಾಷ್ಟ್ರೀಯ ದಾಖಲೆ ನಿರ್ಮಿಸುವ ಮೂಲಕ ಚಿನ್ನಕ್ಕೆ ಮುತ್ತಿಟ್ಟರು. ಆರ್ಯನ್ 8:01.81 ನಿಮಿಷದಲ್ಲಿ ಗುರಿ ಮುಟ್ಟಿ ಈ ವರ್ಷ ಎರಡನೇ ಬಾರಿಗೆ ಏಷ್ಯನ್ ಗೇಮ್ಸ್ ಅರ್ಹತಾ ಮಾನದಂಡವನ್ನು ಮೀರಿದರು. ಮತ್ತೊಬ್ಬ ರಾಷ್ಟ್ರೀಯ ಈಜುಪಟು ಕುಶಾಗ್ರ ರಾವತ್​ ಅವರ ಹೆಸರಿನಲ್ಲಿದ್ದ 8.08.32 ದಾಖಲೆಯನ್ನು ದಾಟಿದರು.

  • Another day, another National Record! 🔥

    There’s no stopping #TeamIIS athlete Aryan Nehra at the moment. He creates another 🇮🇳 record in the 800m Freestyle event at the Swimming National Championships in Hyderabad. ⚡️#Swimming #CraftingVictories 🇮🇳 pic.twitter.com/UXPBmPowXI

    — Inspire Institute of Sport (@IIS_Vijayanagar) July 3, 2023 " class="align-text-top noRightClick twitterSection" data=" ">

ಇದೇ ಈವೆಂಟ್​​ನಲ್ಲಿ ಕುಶಾಗ್ರ ರಾವತ್​ ಅವರು 8.09.25 ಸೆಕೆಂಡ್​ನಲ್ಲಿ ಗುರಿ ಮುಟ್ಟಿ 2ನೇ ಸ್ಥಾನದೊಂದಿಗೆ ಬೆಳ್ಳಿ ಪಡೆದರೆ, ಕರ್ನಾಟಕದ ಈಜುಗಾರ ಅನೀಶ್ ಗೌಡ 8:16.92 ನಿಮಿಷದೊಂದಿಗೆ ಮೂರನೇ ಸ್ಥಾನ ಪಡೆದರು.

ವೈಯಕ್ತಿಕ ಸಾಧನೆಗೆ ಬಲ: ಗುಜರಾತ್ ಈಜುಪಟು ಆರ್ಯನ್​ ಏಪ್ರಿಲ್‌ನಲ್ಲಿ ಚಿಕಾಗೋದಲ್ಲಿ ನಡೆದ ಕಾಂಟಿನೆಂಟಲ್ ಈವೆಂಟ್‌ನಲ್ಲಿ ಭಾಗವಹಿಸಿ, 800 ಮೀಟರ್ ಫ್ರೀಸ್ಟೈಲ್ ಸ್ಪರ್ಧೆಯಲ್ಲಿ 8:03.15 ರ ವೈಯಕ್ತಿಕ ಸಾಧನೆ ಮಾಡಿದ್ದರು. ಇದೀಗ ಅವರ ಗರಿಷ್ಠ ದಾಖಲೆಯನ್ನು ಅವರೇ ಮುರಿದಿದ್ದಾರೆ. ಇದಲ್ಲದೇ, ಅವರು 1500 ಮೀಟರ್ ಫ್ರೀಸ್ಟೈಲ್ ಅರ್ಹತಾ ಸಮಯವನ್ನೂ ಉತ್ತಮಪಡಿಸಿಕೊಂಡರು.

ಇದೇ ವರ್ಷದ ಕೊನೆಯಲ್ಲಿ ಚೀನಾದ ಹ್ಯಾಂಗ್​ಝೌನ್ಲಿ ನಡೆಯುವ ಈಜು ಸ್ಪರ್ಧೆಗೆ ಸಿದ್ಧತೆ ಮತ್ತು ಅರ್ಹತಾ ಭಾಗವಾಗಿ ಈ ಸ್ಪರ್ಧೆ ಏರ್ಪಡಿಸಲಾಗಿದೆ. ಅಲ್ಲದೇ, ಜುಲೈ 6 ರವರೆಗೆ ಈ ಅರ್ಹತಾ ಪಂದ್ಯಗಳು ನಡೆಯಲಿವೆ.

ಕರ್ನಾಟಕದ ಈಜುಗಾರ್ತಿಯರು ಸಾಧನೆ: ಕರ್ನಾಟಕದ ಮಹಿಳಾ ಈಜುಪಟು ಹರ್ಷಿಕಾ ರಾಮಚಂದ್ರ ಅವರು, 200 ಮೀಟರ್​ ಮೆಡ್ಲೆ ಮತ್ತು 100 ಮೀಟರ್​ ಫ್ರೀಸ್ಟೈಲ್​ ಸ್ಪರ್ಧೆಗಳಲ್ಲಿ ರಾಷ್ಟ್ರೀಯ ದಾಖಲೆಯನ್ನು ಬಲಪಡಿಸಿಕೊಂಡರು. 2:21.15 ರಲ್ಲಿ ಗುರಿ ತಲುಪಿದ ಹರ್ಷಿಕಾ, ಅನುಭವಿ ಈಜುಗಾರ್ತಿ ರಿಚಾ ಮಿಶ್ರಾ ಅವರ 13 ವರ್ಷಗಳ ಹಳೆಯ 2:23.62 ದಾಖಲೆಯನ್ನು ಉತ್ತಮಗೊಳಿಸಿದರು.

ಮತ್ತೊಂದೆಡೆ, ಅನನ್ಯಾ ಅವರು 100 ಮೀಟರ್​ ಫ್ರೀಸ್ಟೈಲ್​ ಸ್ಪರ್ಧೆಯಲ್ಲಿ 57.31 ಸೆಕೆಂಡ್​ಗಳಲ್ಲಿ ಗುರಿ ಮುಟ್ಟಿದರು. ಈ ಮೂಲಕ ಕಳೆದ ವರ್ಷ ಶಿವಂಗಿ ಶರ್ಮಾ ನಿರ್ಮಿಸಿದ್ದ ಕೂಠ ದಾಖಲೆಯಾದ 57.73 ಅನ್ನು ಅಳಿಸಿದರು.

ಒಲಿಂಪಿಯನ್ ಮಾನಾ ಪಟೇಲ್ ಮಹಿಳೆಯರ 100 ಮೀಟರ್ ಫ್ರೀಸ್ಟೈಲ್‌ನಲ್ಲಿ ನಿರಾಶಾದಾಯಕ ಪ್ರದರ್ಶನ ನೀಡಿದರು. ಅವರು 58.31 ಸೆಕೆಂಡ್​ ತೆಗೆದುಕೊಳ್ಳುವ ಮೂಲಕ ನಾಲ್ಕನೇ ಸ್ಥಾನಕ್ಕೆ ತೃಪ್ತಿಪಟ್ಟರು. ವೆನಿಕಾ ಪಾರಿಖ್ ಕೂಡ ಸ್ಪರ್ಧೆ ಫಿನಿಶ್‌ ಮಾಡಲು ಸಾಧ್ಯವಾಗಲಿಲ್ಲ. ಮಹಿಳೆಯರ 50 ಮೀ ಬ್ರೆಸ್ಟ್‌ಸ್ಟ್ರೋಕ್‌ನಲ್ಲಿ 34.84 ಸೆಕೆಂಡುಗಳಲ್ಲಿ ನಾಲ್ಕನೇ ಸ್ಥಾನ ಪಡೆದರು. ಆರ್ಯನ್, ಮಾನ, ದಿಯಾ ಪಟೇಲ್ ಮತ್ತು ಅನ್ಶುಲ್ ಕೊಠಾರಿ ಅವರಿದ್ದ ಗುಜರಾತ್ ತಂಡವು ಮಿಶ್ರ 4x100 ಮೀ ಫ್ರೀಸ್ಟೈಲ್ ರಿಲೇಯಲ್ಲಿ 3: 47.58 ಸೆಕೆಂಡ್​ನಲ್ಲಿ ಗುರಿ ಮುಟ್ಟಿ ನಾಲ್ಕನೇ ಸ್ಥಾನ ಪಡೆದುಕೊಂಡರು.

ಇದನ್ನೂ ಓದಿ: Wimbledon: ವಿಂಬಲ್ಡನ್ ಟೆನಿಸ್- ಜೊಕೊವಿಕ್, ಸ್ವಿಯಾಟೆಕ್ ಶುಭಾರಂಭ; ವೀನಸ್‌​ಗೆ ಸೋಲು

ETV Bharat Logo

Copyright © 2025 Ushodaya Enterprises Pvt. Ltd., All Rights Reserved.