ETV Bharat / sports

ನಾನಿನ್ನೂ ನನ್ನ ಆಟದಲ್ಲಿ ಸುಧಾರಣೆ ಕಾಣಬೇಕಿದೆ: ಫಿಡೆ ವಿಶ್ವಕಪ್‌ನಲ್ಲಿ ರನ್ನರ್-ಅಪ್ ಪ್ರಜ್ಞಾನಂದ ಮನದಾಳ

author img

By ETV Bharat Karnataka Team

Published : Aug 25, 2023, 7:34 AM IST

Updated : Aug 25, 2023, 8:46 AM IST

ಚೆಸ್​ನಲ್ಲಿ ನಾನಿನ್ನೂ ಸಾಕಷ್ಟು ಸುಧಾರಣೆ ಕಾಣಬೇಕಿದೆ ಎಂದು ಗ್ರಾಂಡ್​​ ಮಾಸ್ಟರ್​​​​ ಪ್ರಜ್ಞಾನಂದ ತಮ್ಮನ್ನು ತಾವು ವಿಶ್ಲೇಷಣೆ ಮಾಡಿಕೊಂಡಿದ್ದಾರೆ.

Still have to improve my chess
ನಾನಿನ್ನೂ ಕಲಿಯುವುದು ಸಾಕಷ್ಟಿದೆ: ಫಿಡೆ ವಿಶ್ವಕಪ್‌ನಲ್ಲಿ ರನ್ನರ್-ಅಪ್ ಪ್ರಗ್ನಾನಂದನ ಮನದಾಳ

ಬಾಕು (ಅಜೆರ್ಬೈಜಾನ್): ವಿಶ್ವದ ನಂಬರ್​ ಒನ್​ ಆಟಗಾರ ಮ್ಯಾಗ್ನಸ್​ ಕಾರ್ಲಸನ್​​​ ಅವರನ್ನ ಕೊನೆವರೆಗೂ ಕಾಡಿ, ಅತ್ಯಂತ ಕಠಿಣ ಹೋರಾಟದಲ್ಲಿ ವಿರೋಚಿತ ಸೋಲು ಅನುಭವಿಸಿದ ಭಾರತೀಯ ಚೆಸ್​​​ಪಟು ಆರ್ ಪ್ರಜ್ಞಾನಂದ ಪಂದ್ಯದ ಬಳಿಕ ಮಾತನಾಡಿದ್ದಾರೆ.

  • #WATCH | Baku, Azerbaijan | Indian chess grandmaster and 2023 FIDE World Cup runner-up R Praggnanandhaa says, "...Today, it didn't go my way but it's normal in sports...He (Magnus Carlsen) is the best player in the world and I still have to improve my Chess to be the best. That's… pic.twitter.com/7o5WJWc0PU

    — ANI (@ANI) August 24, 2023 " class="align-text-top noRightClick twitterSection" data=" ">

ತನ್ನ ಚೆಸ್‌ ಆಟದಲ್ಲಿ ತಾವಿನ್ನೂ ಭಾರಿ ಸುಧಾರಣೆ ಮಾಡಿಕೊಳ್ಳಬೇಕಿದೆ. ಕಲಿಯುವುದು ಬಹಳಷ್ಟಿದೆ ಎಂದು ಪಗ್ನಾನಂದ ನಮ್ರತೆಯಿಂದ ಹೇಳಿದ್ದಾನೆ. ಗುರುವಾರ ಅಜರ್‌ಬೈಜಾನ್‌ನ ಬಾಕುದಲ್ಲಿ ನಡೆದ ಅಂತಾರಾಷ್ಟ್ರೀಯ ಚೆಸ್ ಫೆಡರೇಷನ್ ಆಯೋಜಿಸಿದ್ದ ವಿಶ್ವಕಪ್‌ನಲ್ಲಿ ವಿಶ್ವದ ನಂ.1 ಆಟಗಾರ ಮ್ಯಾಗ್ನಸ್ ಕಾರ್ಲ್‌ಸನ್ ಅವರ ವಿರುದ್ಧ ಭಾರತದ ಗ್ರ್ಯಾಂಡ್‌ಮಾಸ್ಟರ್ ಆರ್ ಪ್ರಜ್ಞಾನಂದ ವಿರೋಚಿತ ಸೋಲು ಕಂಡಿದ್ದರು.

ಫೈನಲ್​ ಪಂದ್ಯ ಎರಡು ದಿನಕ್ಕೂ ಹೆಚ್ಚು ಕಾಲ ನಡೆದು, ಎರಡು ಪಂದ್ಯಗಳು ಡ್ರಾದಲ್ಲಿ ಕೊನೆಗೊಂಡಿದ್ದರಿಂದ ಅಂತಿಮವಾಗಿ ನಿನ್ನೆ ಟ್ರೈ ಬ್ರೇಕರ್​ ಪಂದ್ಯವನ್ನು ನಡೆಸಲಾಯಿತು. ಪ್ರಜ್ಞಾನಂದ ನಿನ್ನೆಯ ಮೊದಲ ಟ್ರೈಬೇಕರ್​ನಲ್ಲಿ ಸೋಲು ಕಂಡರು. ಈ ಮೂಲಕ ಅಂತಿಮವಾಗಿ 0.5- 1.5 ಅಂಕಗಳಿಂದ ಚಾಂಪಿಯನ್​ ಪಟ್ಟ ಕಾರ್ಲಸನ್​​​​ ಅವರಿಗೆ ಹೋಯಿತು. 18 ರ ಪೋರ ಪ್ರಜ್ಞಾನಂದ ರನ್ನರ್​ ಅಪ್​​ಗೆ ತೃಪ್ತಿಪಡಬೇಕಾಯಿತು. ಆದರೆ ವಿಶ್ವದ ಚಸ್​ಪಟುಗಳ ಮನಗೆಲ್ಲುವಲ್ಲಿ ಪ್ರಜ್ಞಾನಂದ ಯಶಸ್ವಿಯಾಗಿದ್ದಾನೆ.

ಪಂದ್ಯದ ಬಳಿಕ ಮಾತನಾಡಿದ ಅವರು, ಇಂದು ನಾನು ನನ್ನದೇ ಹಾದಿಯಲ್ಲಿ ಸಾಗಲು ಸಾಧ್ಯವಾಗಲಿಲ್ಲ. ಕ್ರೀಡೆಯಲ್ಲಿ ಇದು ಸಾಮಾನ್ಯವಾಗಿದೆ. ಮ್ಯಾಗ್ನಸ್ ವಿಶ್ವದ ಅತ್ಯುತ್ತಮ ಆಟಗಾರ, ಅವರೊಂದಿಗೆ ಆಡಬೇಕಾದರೆ ನಾನಿನ್ನೂ ಚೆಸ್​​ ಬಗ್ಗೆ ಬಹಳಷ್ಟು ಕಲಿಯಬೇಕಿದೆ. ಹಲವು ಸುಧಾರಣೆಗಳನ್ನು ಮಾಡಿಕೊಳ್ಳಬೇಕಿದೆ. ಆ ದಿಸೆಯಲ್ಲಿ ನಾನು ಸಾಗುತ್ತಿದ್ದೇನೆ ಎಂದು ಯುವ ಚೆಸ್​ ಆಟಗಾರ ಹೇಳಿದ್ದಾರೆ. ಟೈ-ಬ್ರೇಕರ್‌ ಆಡುವಾಗ ನಾನು ಮತ್ತು ಮ್ಯಾಗ್ನಸ್ ಇಬ್ಬರೂ ಸುಸ್ತಾಗಿದ್ದೆವು ಎಂದರು.

"ನಾವಿಬ್ಬರೂ ಹೆಚ್ಚು ಶಕ್ತಿಯಿಲ್ಲದೇ ದಣಿದಿದ್ದೆವು. ಇದು ಒಂದು ಸುದೀರ್ಘ ಕ್ರಿಯೆಯಾಗಿದೆ. ಅವರು ನನಗಿಂತ ಉತ್ತಮವಾಗಿ ಆಡುವಲ್ಲಿ ಯಶಸ್ವಿಯಾದರು. ಹೀಗಾಗಿ ಸಹಜವಾಗಿಯೇ ಅವರು ತಮ್ಮ ಅನುಭವದ ಮೂಲಕ ಪಂದ್ಯವನ್ನು ಗೆದ್ದುಕೊಂಡರು’’ ಎಂದು ಭಾರತದ ಗ್ರಾಂಡ್​ಮಾಸ್ಟರ್​ ಪ್ರಜ್ಞಾನಂದ ಹೇಳಿದರು.

ಚೆಸ್ ಒಲಿಂಪಿಯಾಡ್ 2024 ರ ಬಗ್ಗೆ ನಾತನಾಡಿದ ಪ್ರಗ್ನಾನಂದ, ಈ ವಿಶ್ವಕಪ್​ಗೆ ಇನ್ನೂ ಸಾಕಷ್ಟು ಸಮಯ ಇದೆ. ಮುಂದಿನ ದಿನಗಳಲ್ಲಿ ಇನ್ನು ಸಾಕಷ್ಟು ಪಂದ್ಯಾವಳಿಗಳು ನಡೆಯಲಿವೆ. ಆ ಬಗ್ಗೆ ಪ್ರಸ್ತುತ ಯೋಚನೆ ಮಾಡಬೇಕಿದೆ ಎಂದರು. ಇನ್ನು ಈ ಬಗ್ಗೆ ಮಾತನಾಡಿದ ಅಖಿಲ ಭಾರತ ಚೆಸ್ ಫೆಡರೇಶನ್ ಮುಖ್ಯಸ್ಥ ಸಂಜಯ್ ಕಪೂರ್, ಇದು ಭಾರತೀಯ ಚೆಸ್‌ನ "ಸುವರ್ಣಯುಗ" ಎಂದು ಬಣ್ಣಿಸಿದ್ದಾರೆ.

"ಇದು ಭಾರತದಲ್ಲಿ ಚೆಸ್‌ನ ಸುವರ್ಣಯುಗ. ಈ ಯುಗದಲ್ಲಿ ಅನೇಕ ವಿಶ್ವನಾಥನ್ ಆನಂದ್​ಗಳು ಹುಟ್ಟಿಕೊಂಡಿದ್ದಾರೆ. ಹೊಸ ವಿಸಿಗಳು ನಿಜವಾಗಿಯೂ ಉತ್ತಮವಾಗಿಯೇ ಆಡುತ್ತಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಈ ಕ್ರೀಡೆಗೆ ಹೆಚ್ಚು ಒತ್ತುಕೊಟ್ಟಾಗಿನಿಂದ ಇದೀಗ ಚಿನ್ನವಾಗಿ ಮಾರ್ಪಟ್ಟಿದೆ. ಚದುರಂಗ ನಮ್ಮ ಆಟ ಮತ್ತು ಈಗ ಅದು ನಮ್ಮ ಬಳಿಗೆ ಮರಳಿದೆ" ಎಂದು ಸಂಜಯ್ ಆತ್ಮ ವಿಶ್ವಾಸದಿಂದ ಹೇಳಿದರು.

ಇದನ್ನು ಓದಿ:ನಾರ್ವೆಯ ಮ್ಯಾಗ್ನಸ್‌ ಮುಡಿಗೆ ಚೊಚ್ಚಲ ಚೆಸ್‌ ವಿಶ್ವಕಪ್ ಕಿರೀಟ; ವೀರೋಚಿತ ಸೋಲು ಕಂಡ ಪ್ರಜ್ಞಾನಂದ ರನ್ನರ್‌ಅಪ್‌

Last Updated : Aug 25, 2023, 8:46 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.