ಹೈದರಾಬಾದ್: ಭಾರತದ ಮತ್ತೋರ್ವ ಈಜುಪಟು ಟೋಕಿಯೋ ಒಲಿಂಪಿಕ್ಗೆ ಅರ್ಹತೆ ಗಿಟ್ಟಿಸಿಕೊಂಡಿದ್ದಾರೆ. ಈ ಮೂಲಕ ಸಜನ್ ಪ್ರಕಾಶ್ ನಂತರ ಟೋಕಿಯೋ ಒಲಿಂಪಿಕ್ನಲ್ಲಿ ಭಾಗಿಯಾಗುತ್ತಿರುವ ಎರಡನೇ ಈಜು ಪಟುವಾಗಿ ಶ್ರೀಧರ್ ನಟರಾಜ್ ಹೊರಹೊಮ್ಮಿದ್ದಾರೆ. ರೋಮ್ನಲ್ಲಿ ನಡೆದ ಸೆಟ್ಟಿ ಕೊಲೀ ಟ್ರೋಫಿ ಚಾಂಪಿಯನ್ಶಿಪ್ನ ಪುರುಷರ 100 ಮೀಟರ್ನಲ್ಲಿ ಅರ್ಹತೆ ಪಡೆದುಕೊಂಡಿದ್ದಾರೆ. ಕೇವಲ 53.77 ಸೆಕೆಂಡ್ಗಳಲ್ಲಿ ಅವರು ಗುರಿ ಮುಟ್ಟಿದ್ದರು.
-
.@srihari3529 becomes the 2nd Indian #swimmer to qualify for #Tokyo2020
— SAIMedia (@Media_SAI) June 30, 2021 " class="align-text-top noRightClick twitterSection" data="
His timing of 53.77 in a men’s 100m backstroke time trial in Rome last week has been ratified.
The qualification mark was 53.85.
Many congratulations! #Cheer4India pic.twitter.com/o04GWF25hS
">.@srihari3529 becomes the 2nd Indian #swimmer to qualify for #Tokyo2020
— SAIMedia (@Media_SAI) June 30, 2021
His timing of 53.77 in a men’s 100m backstroke time trial in Rome last week has been ratified.
The qualification mark was 53.85.
Many congratulations! #Cheer4India pic.twitter.com/o04GWF25hS.@srihari3529 becomes the 2nd Indian #swimmer to qualify for #Tokyo2020
— SAIMedia (@Media_SAI) June 30, 2021
His timing of 53.77 in a men’s 100m backstroke time trial in Rome last week has been ratified.
The qualification mark was 53.85.
Many congratulations! #Cheer4India pic.twitter.com/o04GWF25hS
ಇದಕ್ಕೆ ಸಂಬಂಧಿಸಿದಂತೆ ಭಾರತ ಈಜು ಫೆಡರೇಷನ್ ಟ್ವೀಟ್ ಕೂಡ ಮಾಡಿದ್ದು, 20 ವರ್ಷದ ಶ್ರೀಹರಿ ನಟರಾಜ ಮೊದಲ ಸಲ ಒಲಿಂಪಿಕ್ನಲ್ಲಿ ಭಾಗಿಯಾಗುತ್ತಿದ್ದಾರೆ. ಈ ಹಿಂದೆ 2018ರ ಕಾಮನ್ವೆಲ್ತ್ ಗೇಮ್ಸ್ನಲ್ಲಿ ಭಾಗಿಯಾಗಿದ್ದರು. ಶ್ರೀಹರಿ ನಟರಾಜನ್ ಮೂಲತಃ ಬೆಂಗಳೂರಿನವರು ಎಂಬುದು ಗಮನಾರ್ಹ ವಿಚಾರ.
ಇದನ್ನೂ ಓದಿರಿ: ಇತಿಹಾಸ ಸೃಷ್ಟಿಸಿದ ಪ್ರಕಾಶ್.. ಒಲಿಂಪಿಕ್ಗೆ ಅರ್ಹತೆ ಪಡೆದ ಮೊದಲ ಭಾರತೀಯ ಈಜುಪಟು!
ರೋಮ್ನಲ್ಲಿ ನಡೆದ ಸೆಟ್ಟಿ ಕೊಲೀ ಟ್ರೋಫಿಯಲ್ಲಿ ಪುರುಷರ 200 ಮೀಟರ್ ಬಟರ್ಫ್ಲೈ ಈಜು ಸ್ಪರ್ಧೆಯಲ್ಲಿ 1:56:38 ನಿಮಿಷದಲ್ಲಿ ಗುರಿ ಮುಟ್ಟುವ ಮೂಲಕ ಸಜನ್ ಪ್ರಕಾಶ್ ಅರ್ಹತೆ ಪಡೆದುಕೊಂಡಿದ್ದಾರೆ. ಜಪಾನ್‌ನ ಟೋಕಿಯೋದಲ್ಲಿ ಜುಲೈ 23ರಿಂದ ಆಗಸ್ಟ್ 8ರವರೆಗೆ ಒಲಿಂಪಿಕ್ಸ್ ಕ್ರೀಡಾಕೂಟ ನಡೆಯಲಿದೆ. 2020ರಲ್ಲಿ ನಡೆಯಬೇಕಿದ್ದ ಈ ಕ್ರೀಡಾಕೂಟ ಕೋವಿಡ್-19 ಕಾರಣದಿಂದ ಒಂದು ವರ್ಷ ತಡವಾಗಿ ನಡೆಯುತ್ತಿದೆ.