ETV Bharat / sports

2024ರಲ್ಲಿ ಕ್ರೀಡೆ: ಒಲಿಂಪಿಕ್ಸ್​, ಟಿ20 ಕ್ರಿಕೆಟ್‌ ವಿಶ್ವಕಪ್​ ಮೇಲೆ ಎಲ್ಲರ ಕಣ್ಣು - ಪ್ಯಾರಿಸ್ ಒಲಿಂಪಿಕ್ಸ್

2023 ಕಳೆದು 2024ಕ್ಕೆ ಕಾಲಿಟ್ಟಿದ್ದೇವೆ. ಕಳೆದ ವರ್ಷ ಭಾರತ ಕ್ರೀಡೆಯಲ್ಲಿ ಅದ್ಭುತ ಸಾಧನೆ ಮಾಡಿದೆ. ಈ ವರ್ಷ ಕ್ರೀಡಾ ಕ್ಷೇತ್ರದಲ್ಲಿ ನಡೆಯಲಿರುವ ಮಹತ್ವದ ಘಟನಾವಳಿಗಳಿವು.

Sports events to watch out for in 2024
Sports events to watch out for in 2024
author img

By ETV Bharat Karnataka Team

Published : Jan 1, 2024, 11:41 AM IST

ಹೈದರಾಬಾದ್: ಕ್ರೀಡೆ ಜನಪ್ರಿಯ ಮನರಂಜನೆ ಕೂಡಾ ಹೌದು. ಭಾರತದ ಕ್ರೀಡಾಪಟುಗಳು ವರ್ಷದಿಂದ ವರ್ಷಕ್ಕೆ ಹೊಸ ಹೊಸ ಸಾಧನೆಗಳನ್ನು ಮಾಡುತ್ತಾ ಸಾಗುತ್ತಿದ್ದಾರೆ. 2024ರಲ್ಲಿ ನಡೆಯುವ ಪ್ರಮುಖ ಕ್ರೀಡಾ ಚಟುವಟಿಕೆಗಳ ಮಾಹಿತಿ ಇಲ್ಲಿದೆ.

  • ಎಎಫ್​ಸಿ ಏಷ್ಯನ್ ಕಪ್-ಫುಟ್ಬಾಲ್: ಜನವರಿ 12ರಿಂದ ಫೆಬ್ರವರಿ 10: 2022ರ ಫಿಫಾ ವಿಶ್ವಕಪ್ ಆಯೋಜಿಸಿದ ನಂತರ ಕತಾರ್ ದೇಶವು ಏಷ್ಯನ್ ಕಪ್ 2024 ನಡೆಸಿಕೊಡುತ್ತಿದೆ. ಏಷ್ಯನ್​ ರಾಷ್ಟ್ರಗಳು ಪ್ರಬಲ ಪೈಪೋಟಿಗೆ ಸಜ್ಜಾಗಿವೆ. ಅಲ್ಲದೆ, ಭಾರತದ ಸ್ಟಾರ್ ಫುಟ್ಬಾಲಿಗ ಸುನಿಲ್ ಚೆಟ್ರಿ ಅಂತರರಾಷ್ಟ್ರೀಯ ಫುಟ್ಬಾಲ್​ಗೆ ವಿದಾಯ ಹೇಳುವ ಸಾಧ್ಯತೆಯೂ ಇದೆ. ಏಷ್ಯನ್ ಕಪ್‌ನಲ್ಲಿ ಭಾರತವು ಸಿರಿಯಾ, ಉಜ್ಬೇಕಿಸ್ತಾನ್ ಮತ್ತು ಆಸ್ಟ್ರೇಲಿಯಾ ತಂಡಗಳಿರುವ ಗುಂಪಿನಲ್ಲಿದೆ.
  • ಆಸ್ಟ್ರೇಲಿಯನ್ ಓಪನ್-ಟೆನಿಸ್: ಜ.14ರಿಂದ ಜ.28: ವರ್ಷದ ಮೊದಲ ಗ್ರ್ಯಾನ್‌ಸ್ಲಾಮ್​ಗೆ ರಾಫೆಲ್ ನಡಾಲ್ ಸುಮಾರು ಒಂದು ವರ್ಷದ ನಂತರ ಮರಳಲಿದ್ದಾರೆ. ಮೆಲ್ಬೋರ್ನ್‌ನ ರಾಡ್ ಲೇವರ್ ಅರೆನಾದಲ್ಲಿ ಪ್ರಶಸ್ತಿಗಾಗಿ ದಿಗ್ಗಜ ಮತ್ತು ಯವ ಆಟಗಾರರ ನಡುವೆ ಪೈಪೋಟಿ ನಿರೀಕ್ಷೆ ಇದೆ.
  • ಐಸಿಸಿ U-19 ಕ್ರಿಕೆಟ್ ವಿಶ್ವಕಪ್: ಜ.19ರಿಂದ ಫೆ.11: ವರ್ಷದ ಪ್ರಮುಖ ಐಸಿಸಿ ಕ್ರಿಕೆಟ್‌ ಟೂರ್ನಿ ಆರಂಭವಾಗಲಿದೆ. ಉದಯೋನ್ಮುಖ ಪ್ರತಿಭೆಗಳು ವರ್ಷದ ಮೊದಲ ತಿಂಗಳಲ್ಲಿ ತಮ್ಮ ಅದೃಷ್ಟ ಪರೀಕ್ಷೆ ನಡೆಸಲಿದ್ದು, ಎಷ್ಟು ಜನ ವರ್ಷಾಂತ್ಯದ ವೇಳೆಗೆ ರಾಷ್ಟ್ರೀಯ ತಂಡದ ಕದ ತಟ್ಟುತ್ತಾರೆ ಎಂಬುದನ್ನು ಕಾದುನೋಡಬೇಕು.
  • ಫ್ರೆಂಚ್ ಓಪನ್-ಟೆನಿಸ್: ಮೇ 20ರಿಂದ ಜೂನ್​ 9: ಕ್ಲೇ ಕೋರ್ಟ್​ಗೆ ರಾಫೆಲ್ ನಡಾಲ್ ಮರಳಲಿದ್ದಾರೆ. ಹೆಚ್ಚು ಫ್ರೆಂಚ್ ಓಪನ್ ಪ್ರಶಸ್ತಿಗಳನ್ನು (14) ಗೆದ್ದಿರುವ ನಡಾಲ್ ಅವರು ನೊವಾಕ್ ಜೊಕೊವಿಕ್, ಕಾರ್ಲೋಸ್ ಅಲ್ಕರಾಜ್, ಡೇನಿಯಲ್ ಮೆಡ್ವೆಡೆವ್ ಮತ್ತು ಇತರ ಬಲಿಷ್ಟರೊಂದಿಗೆ ಗುದ್ದಾಡುವರು.
  • ಐಸಿಸಿ ಪುರುಷರ ಟಿ20 ವಿಶ್ವಕಪ್- ಕ್ರಿಕೆಟ್​: ಜೂನ್​ 4ರಿಂದ ಜೂ.30: ವೆಸ್ಟ್​ ಇಂಡೀಸ್​ ಮತ್ತು ಯುಎಸ್​ಎನಲ್ಲಿ ಈ ಬಾರಿ ಚುಟುಕು ವಿಶ್ವಕಪ್​ ನಡೆಯಲಿದೆ. ಅಂತರರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಪ್ರತಿ ವರ್ಷ ಐಸಿಸಿ ಪುರುಷರ ಟೂರ್ನಿ ಆಯೋಜಿಸುತ್ತಿದೆ. 23ರಲ್ಲಿ ಏಕದಿನ ವಿಶ್ವಕಪ್​ ನಡೆದರೆ, 24ರಲ್ಲಿ ಟಿ20, 25ರಲ್ಲಿ ಟೆಸ್ಟ್​ ಚಾಂಪಿಯನ್​ಶಿಪ್​ ಮತ್ತು ಚಾಂಪಿಯನ್ಸ್​ ಟ್ರೋಫಿ ನಡೆಯಲಿದೆ.
  • ಯುರೋ ಕಪ್-ಫುಟ್ಬಾಲ್: ಜೂನ್​ 14ರಿಂದ ಜುಲೈ 14: ಈ ಪಂದ್ಯಾವಳಿಯಲ್ಲಿ ಕ್ರಿಸ್ಟಿಯಾನೋ ರೊನಾಲ್ಡೊ, ಕೈಲಿಯನ್ ಎಂಬಪ್ಪೆ, ಕರೀಮ್ ಬೆಂಜೆಮಾ ಮತ್ತು ರಾಬರ್ಟ್ ಲೆವಾಂಡೋಸ್ಕಿ ಅವರಂತಹ ತಾರಾ ಆಟಗಾರರು ಭಾಗವಹಿಸುತ್ತಾರೆ. ರೊನಾಲ್ಡೊಗೆ ಇದು ಕೊನೆಯ ಯುರೋ ಆಗುವ ಸಾಧ್ಯತೆಯೂ ದಟ್ಟವಾಗಿದೆ.
  • ವಿಂಬಲ್ಡನ್-ಟೆನಿಸ್: ಜುಲೈ 1ರಿಂದ ಜುಲೈ 14: ಒಲಿಂಪಿಕ್ಸ್‌ಗೆ ಮುಂಚಿತವಾಗಿ, ಟೆನಿಸ್ ಆಟಗಾರರು ಗ್ರಾಸ್ ಕೋರ್ಟ್‌ನಲ್ಲಿ ಆಡುವ ಗ್ರ್ಯಾಂಡ್‌ಸ್ಲಾಮ್‌ನ ಮೂಲಕ ಅದಕ್ಕೆ ಸಿದ್ಧರಾಗಲು ಅವಕಾಶ ಹೊಂದಿರುತ್ತಾರೆ. ಕಾರ್ಲೋಸ್ ಅಲ್ಕರಾಜ್ ತಮ್ಮ ಕಪ್ ಉಳಿಸಿಕೊಳ್ಳಲು ಹೋರಾಡಲಿದ್ದಾರೆ.
  • ಒಲಿಂಪಿಕ್ಸ್: ಜುಲೈ 26ರಿಂದ ಆಗಸ್ಟ್​​ 11: ಏಷ್ಯನ್ ಗೇಮ್ಸ್ 2023ರಲ್ಲಿ ಐತಿಹಾಸಿಕ ಪ್ರದರ್ಶನದ ನಂತರ, ಭಾರತವು ವಿಶ್ವ ಮಟ್ಟದಲ್ಲಿ ಅಥ್ಲೆಟಿಕ್ಸ್​ ವಿಭಾಗದಲ್ಲಿ ಇನ್ನಷ್ಟು ದೊಡ್ಡ ಸಾಧನೆಗೆ ಎದುರು ನೋಡುತ್ತಿದೆ. ಪ್ಯಾರಿಸ್ ಒಲಿಂಪಿಕ್ಸ್ ಮತ್ತು ಪ್ಯಾರಾಲಿಂಪಿಕ್ಸ್ ಗೇಮ್ಸ್ 2024ರಲ್ಲಿ ಏಷ್ಯಾಡ್​ ರೀತಿಯಲ್ಲಿಯೇ ಪದಕ ಬೇಟೆಯಾಡಲು ಕ್ರೀಡಾಪಟುಗಳು ಸಜ್ಜಾಗುತ್ತಿದ್ದಾರೆ. ಒಲಿಂಪಿಕ್ ಕ್ರೀಡಾಕೂಟವು ಜುಲೈ 26ರಿಂದ ಆಗಸ್ಟ್​ 11ರವರೆಗೆ ನಡೆಯಲಿದೆ. 19 ದಿನಗಳಲ್ಲಿ 329 ಸ್ಪರ್ಧೆಗಳು ನಡೆಯಲಿದ್ದು, 10,500 ಕ್ರೀಡಾಪಟುಗಳು 32 ವಿವಿಧ ರೀತಿಯ ಕ್ರೀಡೆಗಳಲ್ಲಿ ಭಾಗವಹಿಸುತ್ತಾರೆ.
  • ಯುಎಸ್ ಓಪನ್-ಟೆನಿಸ್: ಆಗಸ್ಟ್​ 26ರಿಂದ ಸೆಪ್ಟೆಂಬರ್​ 8: ನ್ಯೂಯಾರ್ಕ್‌ನ ಫ್ಲಶಿಂಗ್ ಮೆಡೋಸ್‌ನಲ್ಲಿರುವ ಬಿಲ್ಲಿ ಜೀನ್ ಕಿಂಗ್ ನ್ಯಾಷನಲ್ ಟೆನಿಸ್ ಸೆಂಟರ್‌ನಲ್ಲಿ ಸ್ಪರ್ಧಿಸಲು ನಿರ್ಧರಿಸಲಾಗಿದೆ. ಯುಎಸ್ ಓಪನ್ ವಿಶ್ವದ ಅತ್ಯಂತ ಹಳೆಯ ಟೂರ್ನಮೆಂಟ್‌ಗಳಲ್ಲಿ ಒಂದು. ಒಲಿಂಪಿಕ್ಸ್ ಮುಗಿದ ತಕ್ಷಣ ಪಂದ್ಯಾವಳಿ ಇರುವುದರಿಂದ ಸ್ಟಾರ್​ ಆಟಗಾರರು ವಿಶ್ರಾಂತಿ ಪಡೆಯಬಹುದು.
  • ಬಿಡಬ್ಲ್ಯುಎಫ್​ ವರ್ಲ್ಡ್ ಟೂರ್ ಫೈನಲ್ಸ್: ಡಿ.11ರಿಂದ 15: ವರ್ಷದ ಕೊನೆಯಲ್ಲಿ ಬ್ಯಾಡ್ಮಿಂಟನ್ ಆಟಗಾರರು ಚೀನಾದ ಹ್ಯಾಂಗ್‌ಝೌನಲ್ಲಿ ಪೈಪೋಟಿಗಿಳಿಯಲಿದ್ದಾರೆ. 2023ರಲ್ಲಿ ಭಾರತದ ಶಟ್ಲರ್‌ಗಳು ಉತ್ತಮ ಪ್ರದರ್ಶನ ನೀಡಿದ್ದು, ಅದೇ ಫಾರ್ಮ್​ನಲ್ಲಿ ಮುಂದುವರೆಯುವ ನಿರೀಕ್ಷೆ ಇದೆ.

ಇದನ್ನೂ ಓದಿ: ಏಕದಿನ ಕ್ರಿಕೆಟ್‌ಗೆ ಆಸ್ಟ್ರೇಲಿಯಾದ ಡೇವಿಡ್ ವಾರ್ನರ್ ವಿದಾಯ​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.