ನವದೆಹಲಿ : ಜೋರ್ಡಾನ್ನಲ್ಲಿ ನಡೆಯುತ್ತಿರುವ 2022 ಎಎಸ್ಬಿಎಸ್ ಯುವ ಮತ್ತು ಜೂನಿಯರ್ ಬಾಕ್ಸಿಂಗ್ ಚಾಂಪಿಯನ್ಶಿಪ್ನಲ್ಲಿ ಭಾರತದ 6 ಜೂನಿಯರ್ ಬಾಕ್ಸರ್ಗಳು ಚಿನ್ನದ ಪದಕಕ್ಕೆ ಮುತ್ತಿಕ್ಕಿದ್ದಾರೆ.
50 ಕೆಜಿ ವಿಭಾಗದಲ್ಲಿ ವಿನಿ ಫ್ಲೈವೇಯ್ಟ್ ಫೈನಲ್ನಲ್ಲಿ ಕಜಕಸ್ತಾನದ ಕರಿನಾ ವಿರುದ್ಧ 5-0ಯಲ್ಲಿ ಗೆಲುವು ಸಾಧಿಸಿದರು. ಯಸ್ತಿಕಾ 52 ಕೆಜಿ ವಿಭಾಗದಲ್ಲಿ ಉಜ್ಬೇಕಿಸ್ತಾನದ ರಖಿಮಾ ಬೆಕ್ನಿಯಾಜೋವಾ ವಿರುದ್ಧ 4-1ರಲ್ಲಿ ಗೆಲುವು ಸಾಧಿಸಿದರು.
57 ಕೆಜಿ ವಿಭಾಗದಲ್ಲಿ ವಿಧಿ 5-0ಯಿಂದ ಜೋರ್ಡಾನ್ನ ಆಯಾ ಸುವೆಂಡೆ ವಿರುದ್ದ 5-0,ಹಾಲಿ ಚಾಂಪಿಯನ್ ನಿಖಿತಾ ಚಾಂದ್ 60 ಕೆಜಿ ವಿಭಾಗದಲ್ಲಿ (ಕಜಕಸ್ತಾನ) ಉಲ್ಡಾನ ತೌಭೆ ವಿರುದ್ಧ, 63 ಕೆಜಿ ವಿಭಾಗದಲ್ಲಿ ಶೃತಿ ಸಾಥೆ (ಕಜಕಸ್ತಾನ)ನೂರ್ಸುಲು ಸುಯೆನಾಲಿ ವಿರುದ್ಧ ಮತ್ತು ರುದ್ರಿಕಾ 75 ಕೆಜಿ ವಿಭಾಗದಲ್ಲಿ (ಕಜಕಸ್ತಾನ) ಶುಗ್ಲ್ಯಾ ನಲಿಬೆ ವಿರುದ್ಧ ಜಯ ಸಾಧಿಸಿ ಸ್ವರ್ಣ ಪದಕ ಪಡೆದರು.
ಇನ್ನು ಮಹಿ(46ಕೆಜಿ), ಪಲಾಕ್ (48 ಕೆಜಿ ), ಸುಪ್ರಿಯಾ(54 ಕೆಜಿ), ಖುಷಿ(81ಕೆಜಿ), ನಿರ್ಜಾರಾ(81+) ವಿಭಾಗದಲ್ಲಿ ತಮ್ಮ 2ನೇ ಸುತ್ತಿನಲ್ಲೇ ಸೋಲು ಕಂಡು ಹೊರಬಿದ್ದರು. ಪುರುಷ ಮತ್ತು ಮಹಿಳೆಯರ ಯೂತ್ ಮತ್ತು ಜೂನಿಯರ್ ವಿಭಾಗದ ಟೂರ್ನಮೆಂಟ್ ಒಟ್ಟಿಗೆ ನಡೆಯುತ್ತಿದೆ.
ಭಾರತೀಯ ಜೂನಿಯರ್ ಬಾಕ್ಸರ್ಗಳು 21 ಮತ್ತು ಯೂತ್ ಬಾಕ್ಸರ್ಗಳು 18 ಪದಕಗಳನ್ನು ಪಡೆದುಕೊಂಡಿದ್ದಾರೆ. 2021ರಲ್ಲಿ ದುಬೈನಲ್ಲಿ ನಡೆದಿದ್ದ ಟೂರ್ನಿಯಲ್ಲಿ ಭಾರತ 14 ಚಿನ್ನದ ಪದಕ ಸೇರಿದಂತೆ 39 ಪದಕಗಳನ್ನು ಪಡೆದಿತ್ತು.
ಇದನ್ನೂ ಓದಿ:ರಣಜಿಯಲ್ಲಿ 266 ರನ್ ಸಿಡಿಸಿ ವಿಶ್ವದಾಖಲೆ ಬರೆದ 17 ವರ್ಷದ ಜಾರ್ಖಂಡ್ ಬ್ಯಾಟರ್ ಕುಶಾಗ್ರ