ಒಸಿಯೆಕ್ (ಕ್ರೊಯೇಷ್ಯಾ): ಭಾರತದ ಸ್ಟಾರ್ ಶೂಟರ್ಗಳಾದ ಮನು ಭಾಕರ್ ಹಾಗೂ ಸೌರಭ್ ಚೌಧರಿ ಶೂಟಿಂಗ್ ವಿಶ್ವಕಪ್ನಲ್ಲಿ ಬೆಳ್ಳಿ ಪದಕ ಗೆದ್ದಿದ್ದಾರೆ. 10 ಮೀಟರ್ ಏರ್ ಪಿಸ್ತೂಲ್ ಮಿಶ್ರ ವಿಭಾಗದಲ್ಲಿ ಇವರು ಈ ಸಾಧನೆ ಮಾಡಿದ್ದಾರೆ.
ರಷ್ಯಾ ವಿರುದ್ಧದ ಫೈನಲ್ ಪಂದ್ಯದಲ್ಲಿ 12-16 ಅಂಕಗಳಿಂದ ಸೋಲು ಕಾಣುವ ಮೂಲಕ ಭಾರತ ತಂಡ ಬೆಳ್ಳಿಗೆ ತೃಪ್ತಿ ಪಟ್ಟುಕೊಂಡಿದೆ. 10 ಮೀಟರ್ ಏರ್ ಪಿಸ್ತೂಲ್ ಮಿಶ್ರ ಮಹಿಳಾ ವಿಭಾಗದಲ್ಲಿ ಭಾರತ ಈಗಾಗಲೇ ಕಂಚು ಗೆದ್ದಿದೆ. ಇದಕ್ಕೆ ಸಂಬಂಧಿಸಿದಂತೆ ಸ್ಪೋರ್ಟ್ಸ್ ಅಥಾರಿಟಿ ಆಫ್ ಇಂಡಿಯಾ ಟ್ವೀಟ್ ಮಾಡಿ ಮಾಹಿತಿ ನೀಡಿದ್ದು, ಮನು ಭಾಕರ್ ಹಾಗೂ ಸೌರಭ್ ಚೌಧರಿಗೆ ಅಭಿನಂದನೆ ಸಲ್ಲಿಕೆ ಮಾಡಿದೆ.
-
Many congratulations to @realmanubhaker and @SChaudhary2002 for winning the 🥈 in 10m Air Pistol Mixed Team at the @ISSF_Shooting World Cup in Osijek.#Cheer4India pic.twitter.com/JLTcmVM4Bg
— SAIMedia (@Media_SAI) June 26, 2021 " class="align-text-top noRightClick twitterSection" data="
">Many congratulations to @realmanubhaker and @SChaudhary2002 for winning the 🥈 in 10m Air Pistol Mixed Team at the @ISSF_Shooting World Cup in Osijek.#Cheer4India pic.twitter.com/JLTcmVM4Bg
— SAIMedia (@Media_SAI) June 26, 2021Many congratulations to @realmanubhaker and @SChaudhary2002 for winning the 🥈 in 10m Air Pistol Mixed Team at the @ISSF_Shooting World Cup in Osijek.#Cheer4India pic.twitter.com/JLTcmVM4Bg
— SAIMedia (@Media_SAI) June 26, 2021
ಇದನ್ನೂ ಓದಿರಿ: ನಕಲಿ ಕೋವಿಡ್ ಲಸಿಕೆ ಪಡೆದ ಸಂಸದೆ ಮಿಮಿ ಚಕ್ರವರ್ತಿ.. ಆರೋಗ್ಯದಲ್ಲಿ ಏರುಪೇರು
ಭಾರತಕ್ಕೆ ಒಲಿಂಪಿಕ್ ಪದಕ ಗೆದ್ದುಕೊಡುವ ಭರವಸೆ ಮೂಡಿಸಿರುವ ಯುವ ಪ್ರತಿಭಾವಂತ ಮಹಿಳಾ ಶೂಟರ್ ಮನು ಭಾಕರ್ ಇದೀಗ ಬೆಳ್ಳಿ ಗೆದ್ದಿದ್ದು, ಟೋಕಿಯೋ ಒಲಿಂಪಿಕ್ನಲ್ಲಿ ಭಾಗಿಯಾಗಲಿದ್ದಾರೆ. ಒಲಿಂಪಿಕ್ಗೂ ಮೊದಲು ನಡೆಯುತ್ತಿರುವ ಕೊನೆಯ ಶೂಟಿಂಗ್ ಸ್ಪರ್ಧೆ ಇದಾಗಿದೆ.