ETV Bharat / sports

ISSF junior world championships: ಚಿನ್ನ ಗೆದ್ದ ಐಶ್ವರಿ ಪ್ರತಾಪ್ ಸಿಂಗ್, ನಾಮ್ಯ ಕಪೂರ್

25 ಮೀಟರ್​ ಪಿಸ್ತೂಲ್​ ವಿಭಾಗದಲ್ಲಿ​ 14 ವರ್ಷದ ಶೂಟರ್​ ನಾಮ್ಯ ಕಪೂರ್ ಭಾರತದ ಪರ ಈಗಾಗಲೇ ಬೇರೆ ವಿಭಾಗಗಳಲ್ಲಿ 3 ಚಿನ್ನದ ಪದಕ ಗೆದ್ದಿದ್ದ ಪ್ರತಿಸ್ಪರ್ಧಿ ಮನು ಭಾಕರ್​ರನ್ನು ಹಿಂದಿಕ್ಕಿ ಚಿನ್ನದ ಪದಕ ಪಡೆದರು.

Junior World C'ship
ಶೂಟಿಂಗ್ ವಿಶ್ವಚಾಂಪಿಯನ್​ಶಿಪ್
author img

By

Published : Oct 5, 2021, 4:39 PM IST

Updated : Oct 5, 2021, 5:17 PM IST

ಲಿಮಾ: ಭಾರತದ ಯುವ ಶೂಟರ್ ಐಶ್ವರಿ ಪ್ರತಾಪ್ ಸಿಂಗ್ ತೋಮರ್ ಐಎಸ್​ಎಸ್​ಎಫ್​ ಜೂನಿಯರ್ ವಿಶ್ವ ಚಾಂಪಿಯನ್​ಶಿಪ್ಸ್​ನ​ 50 ಮೀಟರ್​ ರೈಫಲ್ 3ನೇ ವಿಭಾಗದಲ್ಲಿ ವಿಶ್ವದಾಖಲೆಯ ಜೊತೆಗೆ ಚಿನ್ನದ ಪದಕಕ್ಕೆ ಕೊರಳೊಡ್ಡಿದ್ದಾರೆ.

ಸೋಮವಾರ ನಡೆದ ಫೈನಲ್​ನಲ್ಲಿ ತೋಮರ್ ಅರ್ಹತಾ ಸುತ್ತಿನಲ್ಲಿ 1185 ಅಂಕ ಪಡೆದು ಜೂನಿಯರ್ ವಿಶ್ವದಾಖಲೆಯನ್ನು ಸರಿಗಟ್ಟಿದ್ದರು. ಇಂದು ನಡೆದ ಫೈನಲ್​ನಲ್ಲಿ ಅವರು 463.4 ಅಂಕ ಪಡೆದು ವಿಶ್ವದಾಖಲೆ ಬ್ರೇಕ್​ ಮಾಡಿದರು. ಅಲ್ಲದೇ ಬೆಳ್ಳಿ ಪದಕ ಗೆದ್ದ ಫ್ರಾನ್ಸ್​​ನ ಕ್ರಿಜ್​(456.5) ಗಿಂತ 7 ಅಂಕ ಮುನ್ನಡೆ ಸಾಧಿಸಿ ಚಿನ್ನ ಗೆದ್ದರು. ಅಮೆರಿಕದ ಗೆವಿನ್ ಬೇರ್ನಿಕ್​ 446.6 ಅಂಕ ಪಡೆದು ಕಂಚಿನ ಪದಕ ಪಡೆದರು.

ಇದೇ ವಿಭಾಗದಲ್ಲಿ ಸ್ಪರ್ಧಿಸಿದ್ದ ಭಾರತದ ಸಂಸ್ಕಾರ್ ಹವೇಲಿಯಾ 1160 ಅಂಕಗಳಿಸಿ 11ನೇ ಸ್ಥಾನ, ಪಂಕಜ್ ಮುಖೇಜ 15(1157), ಸರ್ತಾಜ್ ತಿವಾನ 16(1157) ಮತ್ತು ಗುರ್ಮನ್​ ಸಿಂಗ್(1153) 22ನೇ ಸ್ಥಾನ ಪಡೆದರು.

ಇದಕ್ಕೂ ಮೊದಲು ನಡೆದ 25 ಮೀಟರ್​ ಪಿಸ್ತೂಲ್​ ವಿಭಾಗದಲ್ಲಿ​ 14 ವರ್ಷದ ಶೂಟರ್​ ನಾಮ್ಯ ಕಪೂರ್ ಭಾರತದ ಪರ ಈಗಾಗಲೇ ಬೇರೆ ವಿಭಾಗಗಳಲ್ಲಿ 3 ಚಿನ್ನದ ಪದಕ ಗೆದ್ದಿದ್ದ ಪ್ರತಿಸ್ಪರ್ಧಿ ಮನು ಭಾಕರ್​ ಅವರನ್ನು ಹಿಂದಿಕ್ಕಿ ಚಿನ್ನದ ಪದಕ ಪಡೆದರು.

ISSF junior world championships:
ನಾಮ್ಯ ಕಪೂರ್​

ಕಪೂರ್​ ಫೈನಲ್​ನಲ್ಲಿ 36 ಅಂಕಪಡೆದು ಚಿನ್ನಕ್ಕೆ ಮುತ್ತಿಕ್ಕಿದರೆ, ಫ್ರಾನ್ಸ್​ನ ಕೆಮಿಲ್ ಜೆಡ್ರೆಜ್​ಜೆವ್​ಸ್ಕಿ (33) ಮತ್ತು 19 ವರ್ಷದ ಒಲಿಂಪಿಯನ್​ ಮನು ಭಾಕರ್​(31) ಕಂಚಿನ ಪದಕ ಪಡೆದರು. ಭಾರತದ ಮತ್ತೊಬ್ಬ ಶೂಟರ್​ ರಿದಮ್ ಸಂಗ್ವಾನ್ 4ನೇ ಸ್ಥಾನ ಪಡೆದರು. ಭಾರತ 8 ಚಿನ್ನ, 6 ಬೆಳ್ಳಿ ಮತ್ತು 3 ಕಂಚಿನ ಪದಕ ಸೇರಿದಂತೆ ಒಟ್ಟು 17 ಪದಕ ಪಡೆದು ಪದಕ ಪಟ್ಟಿಯಲ್ಲಿ ಅಗ್ರಸ್ಥಾನ ಕಾಯ್ದುಕೊಂಡಿದೆ.

ಇದನ್ನು ಓದಿ:ಪ್ರೋ ಕಬಡ್ಡಿ ಸೀಸನ್-8: ಬೆಂಗಳೂರಲ್ಲಿ ಪಂದ್ಯಾವಳಿ ಆಯೋಜನೆ; ಆದ್ರೆ, ವೀಕ್ಷಕರಿಗೆ ನಿರಾಸೆ

Last Updated : Oct 5, 2021, 5:17 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.