ನವದೆಹಲಿ: ಭರ್ಜಿ ಎಸೆತದಲ್ಲಿ (ಜಾವೆಲಿನ್ ಥ್ರೋ) ನೀರಜ್ ಚೋಪ್ರಾ ನಂತರ ಶಿವಪಾಲ್ ಸಿಂಗ್ ಅವರು ಒಲಿಂಪಿಕ್ ಕ್ರೀಡಾಕೂಟಕ್ಕೆ ಅರ್ಹತೆ ಪಡೆದ ಎರಡನೇ ಆಟಗಾರ ಎನಿಸಿದ್ದಾರೆ. ನೀರಜ್ ಚೋಪ್ರಾ
ದಕ್ಷಿಣ ಆಫ್ರಿಕಾದ ಪೊಚೆಫ್‌ಸ್ಟ್ರೂಮ್‌ನಲ್ಲಿ ನಡೆದ ಎಸಿಎನ್‌ಡಬ್ಲ್ಯೂ ಲೀಗ್ನಲ್ಲಿ ಶಿವಪಾಲ್ ತನ್ನ ಮೊದಲ ಮೂರು ಥ್ರೋಗಳಲ್ಲಿ 80 ಮೀಟರ್ ಗಡಿ ದಾಟಲು ವಿಫಲವಾದರು. ಐದನೇ ಪ್ರಯತ್ನದಲ್ಲಿ 85.47 ಮೀಟರ್ ದೂರ ಎಸೆದರು. ಈ ಮೂಲಕ ಒಲಿಂಪಿಕ್ ಕೋಟಾಗೆ ಅಧಿಕೃತ ಮುದ್ರೆ ಒತ್ತಿದರು. 85 ಮೀಟರ್ ಅನ್ನು ಅರ್ಹತಾ ಅಂಕವಾಗಿ ನಿಗದಿಪಡಿಸಲಾಗಿತ್ತು.

'ಟ್ರ್ಯಾಕ್ ಮತ್ತು ಫೀಲ್ಡ್ನಿಂದ ಶುಭ ಸುದ್ದಿ ಸಿಕ್ಕಿದೆ. ಎಸಿಎನ್‌ಡಬ್ಲ್ಯೂ ಲೀಗ್ನಲ್ಲಿ 85.47 ಮೀಟರ್ ದೂರ ಎಸೆಯುವ ಮೂಲಕ ಶಿವಪಾಲ್ ಸಿಂಗ್ ಟೋಕಿಯೋ ಒಲಂಪಿಕ್ಗೆ ಅರ್ಹತೆ ಪಡೆದಿದ್ದಾರೆ. ಅಭಿನಂದನೆಗಳು' ಎಂದು ಕೇಂದ್ರ ಕ್ರೀಡಾ ಸಚಿವ ಕಿರಣ್ ರಿಜಿಜು ಟ್ವೀಟ್ ಮಾಡಿದ್ದಾರೆ.
ಕಳೆದ ವರ್ಷ ದೋಹಾದಲ್ಲಿ ಜರುಗಿದ ಏಷ್ಯಾ ಚಾಂಪಿಯನ್ ಶಿಪ್ನಲ್ಲಿ 86.23 ಮೀಟರ್ ದೂರ ಎಸೆದು ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟುಕೊಂಡಿದ್ದರು. ನಂತರ ನಾರ್ವೆಯಲ್ಲಿ ಜರುಗಿದ ಡೈಮಂಡ್ ಲೀಗ್ನಲ್ಲಿ 87.86 ಮೀಟರ್ ದೂರ ಎಸೆದು 8ನೇ ಸ್ಥಾನ ಪಡೆದುಕೊಂಡಿದ್ರು. ಜುಲೈ 24 ರಿಂದ ಆಗಸ್ಟ್ 9 ರವರೆಗೆ ಒಲಿಂಪಿಕ್ ಕ್ರೀಡಾಕೂಟ ನಡೆಯಲಿದೆ.